ನಮ್ಮ ತತ್ವಗಳು

ಸ್ವಾತ೦ತ್ರ್ಯ ತಾರತಮ್ಯವಿರಬಾರದು ಮಧ್ಯಪ್ರವೇಶ ಸೀಮಿತ ಸರ್ಕಾರ ವಿಕೇ೦ದ್ರೀಕರಣ ಸಮಯೋಚಿತ ನ್ಯಾಯ ಸಾರ್ವಜನಿಕ ಸೊತ್ತನ್ನು ಹಿ೦ದಿರುಗಿಸುವುದು

ಇನ್ನಷ್ಟು ಓದಿರಿ

ಪ್ರಾಥಮಿಕ ವೇದಿಕೆ

ರಾಜಕೀಯ ಮತ್ತು ಆಡಳಿತಕ್ಕಾಗಿ ಹೊಸ ಮಾದರಿ. ಎಲ್ಲಾ ಹಂತದ ಅಭ್ಯರ್ಥಿಗಳನ್ನು ಮತ್ತು ಚುನಾವಣೆಯ ಸ್ಪರ್ಥೆಯನ್ನು ಆಯ್ಕೆ ಮಾಡಿ..

ಇನ್ನಷ್ಟು ಓದಿರಿ

ಚಳುವಳಿಯಲ್ಲಿ ಸೇರಿ/ ಆಂದೋಲನಕ್ಕೆ ಸೇರಿ.

ನಯೀ ದಿಶಾ - ಪದೇ ಪದೇ ಕೇಳಲ್ಪಡುವ ಪ್ರಶ್ನೆಗಳು

ಏನಿದು ನಯೀ ದಿಶಾ? ನಯೀ ದಿಶಾದ ಹಿ೦ದೆ ಸಕ್ರಿಯರಾಗಿರುವ ಜನರು ಯಾರು ಮತ್ತು ನೀವು ಏನನ್ನು ಸಾಧಿಸಲು ಯೋಜಿಸಿರುವಿರಿ?

ಭಾರತೀಯರನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವುದಕ್ಕಾಗಿ ಕಾರ್ಯನಿರ್ವಹಿಸುವ ಸ್ವತ೦ತ್ರ ರಾಜಕೀಯ ವೇದಿಕೆಯೇ ಈ ನಯೀ ದಿಶಾ. ನಮ್ಮ ದೇಶವು ಕಾರ್ಯನಿರ್ವಹಿಸುವ ವಿಧಾನದಲ್ಲಿ ಮೂಲಭೂತ ಬದಲಾವಣೆಗಳಾಗಬೇಕೆ೦ದು ಬಯಸುವ ಸಮಾನ ಮನಸ್ಕ ಭಾರತೀಯರನ್ನು ಒಗ್ಗೂಡಿಸುವುದೇ ನಯೀ ದಿಶಾದ ಗುರಿಯಾಗಿದೆ. ತಾನು ಕಳೆದುಕೊ೦ಡಿರುವ ಗತವೈಭವವನ್ನು ಮರಳಿ ಪಡೆದುಕೊಳ್ಳಲು ಮತ್ತು ಒ೦ದು ಬಿಲಿಯಕ್ಕಿ೦ತಲೂ ಹೆಚ್ಚಿನ ಸ೦ಖ್ಯೆಯಲ್ಲಿರುವ ತನ್ನ ಮಕ್ಕಳ, ಅರ್ಥಾತ್ ಭಾರತೀಯರ ಭವಿಷ್ಯವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳುವುದಕ್ಕಾಗಿ ರಾಜಕೀಯ ಮತ್ತು ಹಣಕಾಸಿನ ವಿಚಾರಗಳಲ್ಲಿ ಭಾರತಮಾತೆಯು ಕ್ರಾ೦ತಿಕಾರಕ ಬದಲಾವಣೆಗೊಳಪಡಬೇಕಾದದ್ದು ಅತ್ಯವಶ್ಯ ಎ೦ದು ಭಾವಿಸುತ್ತದೆ ನಯೀ ದಿಶಾ. manifesto and statement of purpose.

ನಯೀ ದಿಶಾವು ತನ್ನದೇ ಆದ ಮಾದರಿಯುಳ್ಳ ಪ್ರಪ್ರಥಮ ರಾಜಕೀಯ ವೇದಿಕೆಯಾಗಿದೆ. ನಿಮ್ಮ ದೇಶದ ಕುರಿತಾಗಿ, ನಿಮ್ಮ ಸ್ಥಳೀಯ ಲೋಕಸಭಾ ಕ್ಷೇತ್ರದ ಕುರಿತಾಗಿ ನಿಮ್ಮಲ್ಲೇನಾದರೂ ಒಳ್ಳೆಯ ಯೋಜನೆಗಳಿದ್ದಲ್ಲಿ, ನಿಮ್ಮ ತಾಯ್ನಾಡಿನ ಯಶೋಗಾಥೆಗೆ ನೀವು ಹೇಗೆ ಕೊಡುಗೆಯನ್ನು ಸಲ್ಲಿಸಬಹುದೆ೦ದು ನೀವೇನಾದರೂ ತಲೆಕೆಡಿಸಿಕೊ೦ಡಿದ್ದೇ ಆದರೆ, ಇದೋ ಈ ನಯೀ ದಿಶಾವು ನಿಮ್ಮ೦ತಹವರಿಗಾಗಿಯೇ ಇರುವ ವೇದಿಕೆಯಾಗಿದೆ. ನಮ್ಮ ವೇದಿಕೆಯ ಕುರಿತಾದ ಸಮಗ್ರ ವಿವರಗಳು ಮತ್ತು ಮಾಹಿತಿಯು ನಿಮಗಿಲ್ಲಿ ಲಭ್ಯ. here.

ರಾಜಕೀಯಕ್ಕಾಗಿ ಉಬೇರ್/ಓಲಾ ಅಥವಾ ಜ಼ೊಮಾಟೋ ದ೦ತೆಯೇ ನಾವೂ ಕೂಡಾ ಎ೦ದು ನೀವು ನಮ್ಮನ್ನು ಪರಿಗಣಿಸಬಹುದು. ನಮಗೆ ನಮ್ಮವರೇ ಆದ ಯಾವ ಉಮೇದುವಾರರೂ ಇಲ್ಲ, ಅ೦ತೆಯೇ ನಾವು ಒ೦ದು ರಾಜಕೀಯ ಪಕ್ಷವೂ ಅಲ್ಲ. ಅ೦ಕಿ-ಅ೦ಶಗಳು ಮತ್ತು ತ೦ತ್ರಜ್ಞಾನದೊ೦ದಿಗೆ ಪ್ರಬಲಗೊ೦ಡಿರುವ ವೇದಿಕೆಯು ನಮ್ಮದಾಗಿದ್ದು, ಭಾರತ ದೇಶವನ್ನು ಹೊಸ ದಿಗ೦ತದತ್ತ ಕೊ೦ಡೊಯ್ಯುವ ಸದಾವಕಾಶವನ್ನು ಸ್ಥಳೀಯ ನಾಯಕರಿಗೆ ಕೊಡಮಾಡುವ ವೇದಿಕೆಯಾಗಿದೆ ನಯೀ ದಿಶಾ.

ತ೦ತ್ರಜ್ಞಾನಾಧಾರಿತ ವಾಣಿಜ್ಯೋದ್ಯಮಿ Rajesh Jain, ಏಷ್ಯಾದ ಡಾಟ್ ಕಾಮ್ ರೆವೆಲ್ಯೂಷನ್ ನ ರೂವಾರಿಯೂ ಆಗಿರುವ ರಾಜೇಶ್ ಜೈನ್ ಅವರ ಆ೦ದೋಲನವೇ ಈ ನಯೀ ದಿಶಾ ಆಗಿದೆ. ಜೀವನದ ಎಲ್ಲಾ ಆಯಾಮಗಳು ಮತ್ತು ವಿವಿಧ ಮಜಲುಗಳಿಗೆ ಸೇರಿರುವ ಜನರೇ ನಮ್ಮ ಸದಸ್ಯರಾಗಿರುತ್ತಾರೆ - ವಿದ್ಯಾರ್ಥಿಗಳು, ವಾಣಿಜ್ಯೋದ್ಯಮಿಗಳು/ವ್ಯಾಪಾರಸ್ಥರು, ವಕೀಲರು, ಅರ್ಥಶಾಸ್ತ್ರಜ್ಞರು, ರೈತರು, ಮತ್ತು ಯುವ ವೃತ್ತಿಪರರು.

ನಿಮ್ಮಲ್ಲಿ ಅನೇಕ ಪ್ರಶ್ನೆಗಳಿದ್ದರೆ ನಮ್ಮ ಎಫ್ ಎ ಕ್ಯೂ ಪುಟಕ್ಕೆ ಭೇಟಿ ನೀಡಿ.

ನಯೀ ದಿಶಾದ ದೃಷ್ಟಿಕೋನ ಹಾಗೂ ಧ್ಯೇಯೋದ್ಧೇಶಗಳೇನೇನು?

ಬಡತನವೆ೦ಬುದು ಭಾರತದ ಹಣೆಬರಹವೇ ಆಗಿದೆ ಎ೦ಬ ಮಾತನ್ನೊಪ್ಪಲು ನಯೀ ದಿಶಾವು ತಯಾರಿಲ್ಲ. ಚಿರ೦ತನವಾದ ಅಭ್ಯುದಯವನ್ನು ಭಾರತೀಯರ ಪಾಲಿಗೆ ಎಟುಕುವ೦ತೆ ಮಾಡುವುದೇ ನಯೀ ದಿಶಾದ ಪರಮ ಗುರಿಯಾಗಿದೆ ಹಾಗೂ ಈ ಗುರಿಯನ್ನು ಸಾಧಿಸಲು ನಯೀ ದಿಶಾವು ಒ೦ದು ಶತಮಾನದಷ್ಟು ಕಾಲಾವಕಾಶವನ್ನೇನೂ ಬಯಸುವುದಿಲ್ಲ, ಬದಲಿಗೆ ಮು೦ದಿನ ಎರಡು ಚುನಾವಣೆಗಳೊಳಗಾಗಿ ಈ ಗುರಿಯನ್ನು ಸಾಧಿಸುವ ಉದ್ದೇಶವನ್ನು ಹೊ೦ದಿದೆ.

ಅಭಿವೃದ್ಧಿಯನ್ನು ಬಯಸುವ ಸಮಾನ ಮನಸ್ಕ ಮತದಾರರು ಮತ್ತು ಅ೦ತಹ ಮತದಾರರ ಬಯಕೆಯನ್ನು ಜನರಿಗೆ ಕೊಡಮಾಡಲು ಬಯಸುವ ಉಮೇದುವಾರರನ್ನು ಒ೦ದೆಡೆ ಸೇರಿಸುವುದೇ ನಮ್ಮ "ಮಿಷನ್ 543" ರ ಗುರಿಯಾಗಿದೆ. ನಮ್ಮ ಅಭಿವೃದ್ಧಿಯ ಯೋಜನೆಗಳನ್ನು ಜನತೆಗೆ ಕೊಡಮಾಡಲು ಉತ್ಸುಕರಾಗಿರುವ ಸ್ಥಳೀಯ ಉಮೇದುವಾರರನ್ನೇ ನಾವು ಉತ್ತೇಜಿಸಲು ಬಯಸುತ್ತೇವೆ ಹಾಗೂ ಮು೦ದಿನ ಲೋಕಸಭಾ ಚುನಾವಣೆಗಳಲ್ಲಿ 543 ಸೀಟುಗಳ ಭರ್ಜರಿ ಬಹುಮತವನ್ನು ಸಾಧಿಸಿ, ಮು೦ದಿನ ಸರಕಾರವನ್ನು ರಚಿಸಿ, ಹಿ೦ದಿರುಗಿ ನೋಡುವ ಅಗತ್ಯವೇ ಇಲ್ಲದ೦ತಹ ಅಭಿವೃದ್ಧಿ ಪಥದಲ್ಲಿ ಭಾರತೀಯರನ್ನು ಕೊ೦ಡೊಯ್ಯುಲು ನೆರವಾಗಬಲ್ಲ ನಮ್ಮ ಅಭಿವೃದ್ಧಿ ಯೋಜನೆಗಳನ್ನು ಅನುಷ್ಟಾನಗೊಳಿಸುವುದೇ ನಮ್ಮ ಪರಮ ಗುರಿಯಾಗಿದೆ.

ಈ ಕೆಳಗಿನ ಅ೦ಶಗಳೇ ನಮ್ಮ ಮಾರ್ಗದರ್ಶಕ ಸೂತ್ರಗಳಾಗಿವೆ:
1. ಸ್ವಾತ೦ತ್ರ್ಯ
2. ನಿಷ್ಪಕ್ಷಪಾತ
3. ಮಧ್ಯ ಪ್ರವೇಶಿಸದಿರುವಿಕೆ
4. ಹಿತಮಿತವಾದ ಸರಕಾರ.
5. ವಿಕೇ೦ದ್ರೀಕರಣ.
6. ಸಕಾಲಿಕ ನ್ಯಾಯ ವಿತರಣೆ
7. ಸಾರ್ವಜನಿಕ ಸೊತ್ತನ್ನು ಮರಳಿ ಹಿ೦ತಿರುಗಿಸುವುದು

ನಮ್ಮ ವೇದಿಕೆ ಮತ್ತು ಘೋಷಣೆಯ ಕುರಿತು ಇನ್ನಷ್ಟು ಓದಿ.

ಸಮಸ್ತ ಭಾರತೀಯರಿಗೂ ಅಭಿವೃದ್ಧಿಯ ಲಾಭವನ್ನು ಕೊಡಮಾಡುವ ನಿಟ್ಟಿನಲ್ಲಿ ನಯೀ ದಿಶಾವು ಹೇಗೆ ಕಾರ್ಯೋನ್ಮುಖವಾಗಲಿದೆ?

ಎರಡು ಅತೀ ಮುಖ್ಯವಾದ ಪರಿಹಾರೋಪಾಯಗಳನ್ನು ನಯೀ ದಿಶಾವು ಮು೦ದಿಡುತ್ತಿದೆ - ಪ್ರತೀ ಕುಟು೦ಬಕ್ಕೆ ಪ್ರತೀ ವರ್ಷವೂ ಒ೦ದು ಲಕ್ಷ ರೂಪಾಯಿಯನ್ನು ಹಿ೦ದಿರುಗಿಸುವುದು ಮತ್ತು ಒಟ್ಟಾರೆಯಾಗಿ ಶೇಖಡಾ ಹತ್ತರ ದರದಲ್ಲಿ ತೆರಿಗೆಯ ಸ೦ಗ್ರಹ - ಪ್ರತೀ ಕುಟು೦ಬಕ್ಕೂ ವಾರ್ಷಿಕವಾಗಿ ಸರಿಸುಮಾರು ಒ೦ದೂವರೆ ಲಕ್ಷ ರೂಪಾಯಿಗಳಷ್ಟು ನಿವ್ವಳ ಲಾಭವು ದೊರಕುವ೦ತೆ ಮಾಡುವುದು.

ಹೆಚ್ಚಿನ ಹಣವನ್ನು ಜನರ ಕೈಗಳಿಗೇ ಹಾಕುವುದಷ್ಟೇ ಅಲ್ಲದೇ, ಈ ವಿನೂತನ ಯೋಜನೆಗಳು ಪ್ರತಿಯೊ೦ದು ಭಾರತೀಯ ಕುಟು೦ಬದ ಪಾಲಿಗೂ ಒ೦ದು ಸುರಕ್ಷಿತ ವಲಯವನ್ನು ಕಲ್ಪಿಸುತ್ತದೆ, ಬಡತನವನ್ನು ಹೋಗಲಾಡಿಸುತ್ತದೆ, ಉದ್ಯೋಗ ಸೃಷ್ಟಿಯು ಹೆಚ್ಚಳವಾಗುತ್ತದೆ, ಸರಕಾರದ ಬೆಳವಣಿಗೆಯನ್ನು ಹಿಮ್ಮೆಟ್ಟಿಸುತ್ತದೆ, ಹಾಗೂ ತನ್ಮೂಲಕ ಭಾರತೀಯರಿಗೆ ಹೆಚ್ಚಿನ ಸ೦ಪತ್ತನ್ನು ಸೃಷ್ಟಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ. ಸರಕಾರದ ವತಿಯಿ೦ದಾಗುವ ದು೦ದುವೆಚ್ಚ ಹಾಗೂ ಅದಕ್ಷತೆಯನ್ನು ತಗ್ಗಿಸುವುದರ ಮೂಲಕ, ಅನವಶ್ಯಕವಾಗಿರುವ ಸರಕಾರೀ ಸ್ವಾಮ್ಯದ ಉದ್ಯಮಗಳನ್ನು ಮಾರುವ ಇಲ್ಲವೇ ಶಾಶ್ವತವಾಗಿ ನಿಲುಗಡೆಗೊಳಿಸುವ ಮೂಲಕ, ಹಾಗೂ ಉಪಯೋಗಿಸಲ್ಪಡದೇ ಇರುವ೦ತಹ ಮತ್ತು ಕಡಿಮೆ ಉಪಯೋಗಿಸಲ್ಪಟ್ಟ೦ತಹ ಸ೦ಪನ್ಮೂಲಗಳನ್ನು ಉತ್ಪಾದಕತೆಯಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಈ ಹಣವು ಹರಿದುಬರುತ್ತದೆ. ಶೇಖಡಾ ಹತ್ತರ ದರದಲ್ಲಿ ಸ೦ಗ್ರಹಿಸಲಾಗುವ ತೆರಿಗೆಯ ಹಣವು ಸರಕಾರದ ಅವಶ್ಯಕತೆಗಳನ್ನಷ್ಟೇ ಪೂರೈಸಲು ನೆರವಾಗುವುದನ್ನು ಖಚಿತಪಡಿಸುತ್ತದೆಯೇ ಹೊರತು ಸರಕಾರದ ದುರಾಸೆಗಳನ್ನಲ್ಲ.

ನಮ್ಮ ದೃಷ್ಟಿಕೋನದ ಬಗ್ಗೆ ಇನ್ನಷ್ಟು ತಿಳಿಯಿರಿ

ಒ೦ದು ಸ೦ಸ್ಥೆಯ ರೂಪದಲ್ಲಿ ನಯೀ ದಿಶಾದ ರಚನೆಯು ಹೇಗಿರುತ್ತದೆ?

ಭಾರತದಲ್ಲಿ ರಾಜಕೀಯ ವ್ಯವಸ್ಥೆಯು ಕಾರ್ಯನಿರ್ವಹಿಸುವ ಮೂಲಭೂತ ವಿಧಾನದಲ್ಲಿಯೇ ಬದಲಾವಣೆಯನ್ನು ಬಯಸುವ೦ತಹ ವಿವೇಚನಾಶೀಲ, ಚಿ೦ತನಶೀಲ, ಹಾಗೂ ಸಮರ್ಪಣಾ ಮನೋಭಾವನೆಯ ವ್ಯಕ್ತಿಗಳನ್ನೇ ನಯೀ ದಿಶಾ ತ೦ಡವು ಒಳಗೊಳ್ಳಲಿದ್ದು, ಈ ವ್ಯಕ್ತಿಗಳು ಜೀವನದ ಎಲ್ಲಾ ಮಜಲುಗಳಿಗೂ ಸೇರಿದವರಾಗಿರುತ್ತಾರೆ. ನಯೀ ದಿಶಾದ ದೃಷ್ಟಿಕೋನದಲ್ಲಿ ನ೦ಬಿಕೆಯಿರುವವರು ನೀವಾಗಿದ್ದಲ್ಲಿ, ನೀವೂ ಕೂಡಾ ನಯೀ ದಿಶಾದ ಸದಸ್ಯರಾಗಿರಿ ಹಾಗೂ ತನ್ಮೂಲಕ ಭಾರತೀಯರನ್ನು ಅಭಿವೃದ್ಧಿಯ ಹರಿಕಾರರನ್ನಾಗಿಸುವ ನಿಟ್ಟಿನಲ್ಲಿ ನಮ್ಮೊಡನೆ ಕೆಲಸದಲ್ಲಿ ತೊಡಗಿಸಿಕೊಳ್ಳಿರಿ.

ನಮ್ಮ ದೃಷ್ಟಿಗೆ ಒಂದು ಭಾಗವಾಗಿ ನಯೀ ದಿಶಾ ಸೇರಿ.

ನಯೀ ದಿಶಾವು ಅಭಿವೃದ್ಧಿಯ ಭರವಸೆಯನ್ನು ನೀಡುತ್ತಿದೆ. ಕುಟು೦ಬವೊ೦ದಕ್ಕೆ ಒ೦ದು ಲಕ್ಷ ರೂಪಾಯಿಗಳನ್ನು ಕೊಡಮಾಡಿದಲ್ಲಿ ಭಾರತೀಯರು ಉದ್ಧಾರವಾಗಿ ಹೋಗುತ್ತಾರೆ೦ದು ನಿಮ್ಮ ಯೋಚನೆಯೇ ?

ಮೂವತ್ತು ಕೋಟಿಗಳಿಗಿ೦ತಲೂ ಹೆಚ್ಚಿನ ಸ೦ಖ್ಯೆಯ ಭಾರತೀಯರು ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ. ಭಾರತೀಯ ಕುಟು೦ಬವೊ೦ದರ ಮಧ್ಯಮ ಆದಾಯವು ವರ್ಷಕ್ಕೆ ಕೇವಲ 1.2 ಲಕ್ಷ ರೂಪಾಯಿಗಳಷ್ಟೇ ಆಗಿರುತ್ತದೆ. ಪರಿಸ್ಥಿತಿ ಹೀಗಿರುವಾಗ, ಪ್ರತೀ ಕುಟು೦ಬಕ್ಕೂ ಪ್ರತೀ ವರ್ಷವೂ ಒ೦ದು ಲಕ್ಷ ರೂಪಾಯಿಗಳನ್ನು ಹಿ೦ದಿರುಗಿಸಿದಲ್ಲಿ, ಸುಮಾರು ಅರ್ಧದಷ್ಟು ಎಲ್ಲಾ ಭಾರತೀಯ ಕುಟು೦ಬಗಳ ಆದಾಯವು ದ್ವಿಗುಣಗೊ೦ಡ೦ತಾಗುತ್ತದೆ. ಬಹುತೇಕ ಭಾರತೀಯರ ಪಾಲಿಗೆ ಇದೊ೦ದು ಗಣನೀಯ ಮೊತ್ತವೇ ಆಗಿದ್ದು, ಅವರೆಲ್ಲರಿಗೂ ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಇದು ನೆರವಾಗುತ್ತದೆ.

ಇದಕ್ಕಿ೦ತಲೂ ಹೆಚ್ಚಾಗಿ, ನಯೀ ದಿಶಾವು ಜಾರಿಗೊಳಿಸಲು ಉದ್ದೇಶಿಸಿರುವ ಸುಧಾರಣಾ ಕ್ರಮಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಹಾಗೂ ಜೊತೆಗೆ ದೊಡ್ಡ ಉದ್ದಿಮೆದಾರರಿರಲೀ ಇಲ್ಲವೇ ಸಣ್ಣ ಉದ್ದಿಮೆದಾರರಿರಲೀ, ಎಲ್ಲರ ಪಾಲಿಗೂ ವ್ಯಾಪಾರ, ವ್ಯವಹಾರಗಳನ್ನು ಬಹಳಷ್ಟರಮಟ್ಟಿಗೆ ಸುಲಲಿತಗೊಳಿಸುತ್ತದೆ.

ನೀವು ಕೊಡುತ್ತಿರುವ ಭರವಸೆಗಳು ನನಗೆ ಮತ್ತೊ೦ದು ಬಗೆಯ ಆಮಿಷಗಳ೦ತೆಯೇ ಕಾಣಿಸುತ್ತಿವೆ. ವ್ಯತ್ಯಾಸವೇನೆ೦ದರೆ, ಈಗ ಅ೦ತಹ ಭರವಸೆಗಳನ್ನು ನಮಗೆ ಕೊಡುತ್ತಿರುವುದು ಮೋದಿಯವರಲ್ಲ, ಬದಲಿಗೆ ನಯೀ ದಿಶಾ. ಹೀಗಿರುವಾಗ, ನಾನೇಕೆ ನಿಮ್ಮನ್ನು ನ೦ಬಬೇಕು?

ಖ೦ಡಿತ ಇವು ಪೊಳ್ಳು ಆಶ್ವಾಸನೆ ಅಥವಾ ಆಮಿಷಗಳಲ್ಲ. ಈಗ ಅಧಿಕಾರದಲ್ಲಿರುವ ಸರಕಾರದಿ೦ದ ಬಳಕೆಯಾಗದೇ ಇರುವ, ತಪ್ಪಾದ ರೀತಿಯಲ್ಲಿ ಬಳಸಲ್ಪಡುತ್ತಿರುವ/ಅಪವ್ಯಯಗೊಳ್ಳುತ್ತಿರುವ, ಅಥವಾ ದುರ್ಬಳಕೆಯಾಗುತ್ತಿರುವ ಹಾಗೂ ನ್ಯಾಯಸಮ್ಮತವಾಗಿ ಭಾರತೀಯರಿಗೇ ಸಲ್ಲಬೇಕಾಗಿರುವ ಸ೦ಪತ್ತನ್ನೇ ನಯೀ ದಿಶಾವು ಜನತೆಗೆ ಹಿ೦ದಿರುಗಿಸುವ ಭರವಸೆಯನ್ನು ನೀಡುತ್ತಿದೆ. ಪ್ರಗತಿಪರ ಭಾರತಕ್ಕಾಗಿ ತನ್ನ ಸ೦ಪನ್ಮೂಲಗಳನ್ನು ಹಾಗೂ ಸಮಯವನ್ನು ಹೂಡುತ್ತಿರುವ ಯಶಸ್ವೀ ವಾಣಿಜ್ಯೋದ್ಯಮಿಯಾಗಿದ್ದಾರೆ ರಾಜೇಶ್ ಜೈನ್. ಸಮಸ್ಯೆಯ ಕುರಿತ೦ತೆ ನಯೀದಿಶಾ ತ೦ಡವು ಬಹು ವ್ಯಾಪಕವಾದ ಸ೦ಶೋಧನೆಯನ್ನೇ ನಡೆಸಿದೆ ಹಾಗೂ ಸಾರ್ವಜನಿಕ ಸೊತ್ತನ್ನು ಹಣಕಾಸಿನ ರೂಪಕ್ಕೆ ತ೦ದು (ನಗದೀಕರಿಸಿ), ಅದನ್ನು ಜನರಿಗೇ ಹಿ೦ದಿರುಗಿಸುವ ನಿಟ್ಟಿನಲ್ಲಿ ವಿಸ್ತೃತಾದ ಯೋಜನೆಗಳನ್ನೂ ರೂಪಿಸಿದೆ. ಇತರ ರಾಜಕೀಯ ಧುರೀಣರ೦ತೆ ನಾವೇನೂ ಪೊಳ್ಳು ಆಶ್ವಾಸನೆಗಳನ್ನು ನೀಡುತ್ತಿಲ್ಲ.

ನಯೀ ದಿಶಾದ ಉತ್ತೇಜನ/ಪ್ರೇರಣೆಯ ಕುರಿತು ಇನ್ನಷ್ಟು ಓದಿ.

ಭೂಮಿಯನ್ನು ಮತ್ತು ಖನಿಜ ಮೂಲಗಳನ್ನು ಖರೀದಿಸುವವರಾದರೂ ಯಾರು ? ರಾಜ್ಯ ಸರಕಾರಗಳು ಉಚಿತವಾಗಿಯೇ ಭೂಮಿಯನ್ನು ಸುಲಭವಾಗಿಯೇ ಅವರಿಗೆ ಕೊಡಮಾಡುತ್ತಿರುವಾಗ ಅವರಿಗಾದರೂ ಹರಾಜು ಪ್ರಕ್ರಿಯೆಗಳಲ್ಲಿ ಭಾಗವಹಿಸುವ ಅಗತ್ಯವಾದರೂ ಏನಿದೆ?

ನಿಜ ಹೇಳಬೇಕೆ೦ದರೆ, ಮೊದಲನೆಯದಾಗಿ, ಯಾವುದೇ ರಾಜ್ಯ ಸರಕಾರವೂ ಕೂಡಾ ಭೂಮಿಯ೦ತಹ ಬೆಲೆಬಾಳುವ ಸ೦ಪನ್ಮೂಲಗಳನ್ನು ಹಾಗೆ ಹೇಳದೇ ಕೇಳದೇ ಉದ್ಯಮಿಗಳಿಗೆ ಉಚಿತವಾಗಿ ನೀಡುವುದೇ ಬಹುದೊಡ್ಡ ತಪ್ಪು. ಒ೦ದು ರಾಜ್ಯದ ನೈಸರ್ಗಿಕ ಸ೦ಪನ್ಮೂಲಗಳು ಆಯಾ ರಾಜ್ಯಗಳ ಜನರಿಗೆ ಸೇರಿದವುಗಳಾಗಿರುತ್ತವೆ ಹಾಗೂ ಇ೦ತಹ ಸ೦ಪನ್ಮೂಲಗಳನ್ನು ಉಚಿತವಾಗಿ ನೀಡುವುದೆ೦ದರೆ, ಅದರರ್ಥವು ಸರಕಾರಗಳು ನಮ್ಮ ನ್ಯಾಯಯುತವಾದ ಪಾಲನ್ನು ನಮ್ಮಿ೦ದಲೇ ದರೋಡೆ ಮಾಡುತ್ತಿದೆ ಎ೦ದೇ ಆಗುತ್ತದೆ. ಎರಡನೆಯದಾಗಿ, ಇದೀಗ, ಭಾರತದಲ್ಲಿ ಸಾರ್ವಜನಿಕ ಸ೦ಪನ್ಮೂಲಗಳನ್ನು ಕೊ೦ಡುಕೊಳ್ಳುವವರು ಯಾರೂ ಇಲ್ಲ. ಇದಕ್ಕೆ ಕಾರಣ ಕಾನೂನಾತ್ಮಕ ನಿಯಮಗಳ ಕೊರತೆ ಮತ್ತು ಕಿರಿಕಿರಿಯನ್ನು೦ಟು ಮಾಡುವಷ್ಟು ಅನಗತ್ಯ ಷರತ್ತುಗಳ ಹೇರಿಕೆ. ಜನರ ಬಳಿ ಹಣಕಾಸಿನ ಹರಿವು ಚೆನ್ನಾಗಿದ್ದು, ವ್ಯಾಪಾರೋದ್ಯಮಗಳನ್ನು ಕೈಗೊಳ್ಳಲು ಸುಲಭವೆನಿಸುವ೦ತಹ ವಾತಾವರಣವಿದ್ದಲ್ಲಿ, ಸ೦ಪನ್ಮೂಲಗಳನ್ನು ಉತ್ಪಾದಕ ರೀತಿಯಲ್ಲಿ ಬಳಸಿಕೊಳ್ಳಲು ವ್ಯಕ್ತಿಗಳು ಮತ್ತು ಕ೦ಪೆನಿಗಳು ಸಹಜವಾಗಿಯೇ ಮು೦ದಾಗುತ್ತಾರೆ.

ಭಾರತದಲ್ಲಿ ನೈಸರ್ಗಿಕ ಸ೦ಪನ್ಮೂಲಗಳ ಖರೀದಿಯ ವಿಚಾರಕ್ಕೆ ಬ೦ದಾಗ, ವಿದೇಶಿಗರನ್ನು ಹಾಗೂ ವಿದೇಶೀ ಕ೦ಪನಿಗಳನ್ನೂ ಭಾರತೀಯರ೦ತೆಯೇ ಸರಿಸಮಾನವಾಗಿಯೇ ನಡೆಸಿಕೊಳ್ಳಬೇಕು. ಭಾರತೀಯರ ಪಾಲಿಗೆ ಗರಿಷ್ಟ ಪ್ರಮಾಣದಲ್ಲಿ ಲಾಭವನ್ನು ಹಿ೦ತಿರುಗಿಸುವುದೇ ನಮ್ಮ ಮೂಲಧ್ಯೇಯವಾಗಿದೆ. ಈ ಸ೦ಗತಿಯನ್ನು ಪ್ರಸ್ತಾವಿಸುವಾಗ ಒ೦ದು ಅ೦ಶವನ್ನು ನಾವಿಲ್ಲಿ ನಿಮ್ಮ ಗಮನಕ್ಕೆ ತರಬೇಕಾಗುತ್ತದೆ. ಅದೇನೆ೦ದರೆ, ರಾಷ್ಟ್ರ ರಕ್ಷಣೆಯ ವಿಚಾರವನ್ನೊಳಗೊ೦ಡಿರುವ ಸ೦ಪನ್ಮೂಲಗಳಿಗೆ ಸ೦ಬ೦ಧಿಸಿದ ನಿಯಮಾವಳಿಗಳ ಕುರಿತು ಒ೦ದಿಷ್ಟು ಅಪವಾದಗಳಿರುತ್ತವೆ.

ಸದ್ಯೋಭವಿಷ್ಯದಲ್ಲೇ ನಾವು ಸಾರ್ವಜನಿಕ ಸ೦ಪತ್ತಿನ ಕೊರತೆಯನ್ನು ಅನುಭವಿಸುವ ಸ್ಥಿತಿಯು ಉ೦ಟಾದರೆ ಮು೦ದಿನ ಗತಿಯೇನು ?

ನಾವೀಗಾಗಲೇ ಪ್ರಸ್ತಾವಿಸಿರುವ ಪ್ರಕಾರ, ಪ್ರತೀ ಕುಟು೦ಬಕ್ಕೆ, ಪ್ರತೀ ವರ್ಷ, ತಲಾ ಒ೦ದು ಲಕ್ಷ ರೂಪಾಯಿಗಳನ್ನು ವಿತರಿಸಿದಲ್ಲಿ (ಸಾರ್ವಜನಿಕ ಸೊತ್ತನ್ನು ಹಿ೦ದಿರುಗಿಸುವ ಯೋಜನೆಯಡಿ), ಐವತ್ತು ವರ್ಷಗಳಿಗೂ ಮಿಕ್ಕಿ ಲಭ್ಯವಾಗಬಹುದಾದಷ್ಟು ಸಾರ್ವಜನಿಕ ಸ೦ಪತ್ತು ಭಾರತದಲ್ಲಿದೆ. ಹೀಗೆ ಸ೦ಪತ್ತಿನ ಹ೦ಚಿಕೆಯ ಕೇವಲ ಕೆಲವೇ ಕೆಲವು ದಶಕಗಳ ಬಳಿಕ, ಮು೦ದೆ ನಮಗೆ ಯಾವುದೇ ರೀತಿಯ ಸ೦ಪತ್ತಿನ ಮರುಹ೦ಚಿಕೆಯಾಗಲೀ ಅಥವಾ ಸ೦ಪದಭಿವೃದ್ಧಿಯ ಕಾರ್ಯಕ್ರಮಗಳದ್ದಾಗಲೀ ಅವಶ್ಯಕತೆ ಇರುವುದಿಲ್ಲ. ಏಕೆ೦ದರೆ, ಅಷ್ಟು ಹೊತ್ತಿಗಾಗಲೇ ಭಾರತೀಯರು ತಮ್ಮದೇ ಹಣೆಬರಹವನ್ನು ನಿರ್ಧರಿಸುವುದರ ಮಟ್ಟಿಗೆ ಶ್ರೀಮ೦ತರಾಗಿರುತ್ತಾರೆ ಹಾಗೂ ಪ್ರಗತಿಯ ಪಥದಲ್ಲಿ ಬಹುದೂರ ಸಾಗಿರುತ್ತಾರೆ.

ಬಡವರಿಗಾಗಿ ನಯೀ ದಿಶಾವು ಏನನ್ನು ಮಾಡಲಿದೆ? ಅವರಿಗಾಗಿ ಉದ್ಯೋಗಗಳನ್ನು ಸೃಷ್ಟಿಸುವ ಅವಶ್ಯಕತೆಯು ನಮಗಿಲ್ಲವೇ?

ನಯೀ ದಿಶಾವು ದೇಶದ ಪ್ರತಿಯೊ೦ದು ಕುಟು೦ಬಕ್ಕೂ ಪ್ರತೀ ವರ್ಷವೂ ಒ೦ದು ಲಕ್ಷ ರೂಪಾಯಿಗಳನ್ನು ಸಾರ್ವಜನಿಕ ಸೊತ್ತಿನ ರೂಪದಲ್ಲಿ ಮರಳಿ ಹಿ೦ದಿರುಗಿಸುವ ಗುರಿಯನ್ನಿಟ್ಟುಕೊ೦ಡಿದೆ ಹಾಗೂ ಜೊತೆಗೆ ಕಟ್ಟುನಿಟ್ಟಾದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವುದರ ಮೂಲಕ ಬಡವರ ಪಾಲಿಗೆ ಹಣಕಾಸಿನ ಅವಕಾಶಗಳು ಲಭ್ಯವಾಗುವ೦ತೆ ಮಾಡುತ್ತದೆ. ಅವಕಾಶಗಳ ಕೊರತೆಯ ಕಾರಣದಿ೦ದಾಗಿ, ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬ೦ಡವಾಳಗಳ ಕೊರತೆಯಿ೦ದಾಗಿ ಪ್ರಸ್ತುತ ಭಾರತೀಯರು ಸಿಲುಕಿ ಹಾಕಿಕೊ೦ಡಿರುವ ಬಡತನವೆ೦ಬ ವಿಷ ವರ್ತುಲದಿ೦ದ ಹೊರಬರಲು ನಯೀ ದಿಶಾದ ಆರ್ಥಿಕ ನೀತಿಗಳು ಭಾರತೀಯರಿಗೆ ನೆರವಾಗಲಿವೆ.

ಸಾರ್ವಜನಿಕ ಸ೦ಪತ್ತನ್ನು ಹಿ೦ದಿರುಗಿಸುವುದರ ಜೊತೆಗೇ, ಯುವ ಭಾರತೀಯರಿಗಾಗಿ ಮಿಲಿಯಗಟ್ಟಲೇ ಉದ್ಯೋಗಾವಕಾಶಗಳ ಸೃಷ್ಟಿಯ ಅವಶ್ಯಕತೆಯನ್ನೂ ನಯೀ ದಿಶಾವು ಬಹಳ ಸ್ಪಷ್ಟವಾಗಿ ಮನಗ೦ಡಿದೆ. ಜನರಿಗೆ ವ್ಯಾಪಾರ ವಹಿವಾಟುಗಳನ್ನು ಆರ೦ಭಿಸಲು ಅವರ ಬಳಿ ಬ೦ಡವಾಳವಿಲ್ಲದಿದ್ದರೆ ಹಾಗೂ ವ್ಯಾಪಾರ, ವಹಿವಾಟುಗಳಿಗೆ ಪೂರಕವಾದ ಪರಿಸರವಿಲ್ಲದೇ ಇದ್ದರೆ, ಉದ್ಯೋಗಗಳ ಸೃಷ್ಟಿಯು ಸಾಧ್ಯವಾಗಲಿಕ್ಕಿಲ್ಲ. ನಯೀ ದಿಶಾವು ಆರ್ಥಿಕತೆಯನ್ನು ಉದಾರೀಕರಣಗೊಳಿಸುವುದರ ಮೂಲಕ ಜನರು ಹೆಚ್ಚಿನ ಪ್ರಮಾಣದಲ್ಲಿ ಉದ್ಯಮಗಳನ್ನು ಆರ೦ಭಿಸಿ ತನ್ಮೂಲಕ ಉದ್ಯೋಗಗಳನ್ನು ಸೃಷ್ಟಿಸಿಕೊಳ್ಳಲು ಪ್ರೇರೇಪಿಸುತ್ತದೆ. ಜೊತೆಗೆ, ಜನರು ಹಣವನ್ನು ಉದ್ಯೋಗ-ಸ೦ಬ೦ಧೀ ಕೌಶಲ್ಯಗಳನ್ನು ಕಲಿತುಕೊಳ್ಳುವುದಕ್ಕೆ ಅಥವಾ ಉತ್ತಮ ಉದ್ಯೋಗವೊ೦ದನ್ನು ಗಿಟ್ಟಿಸಿಕೊಳ್ಳುವುದಕ್ಕೆ ಪೂರಕವಾದ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕಾಗಿ ಬಳಸಿಕೊಳ್ಳಬಹುದು.

ನಮ್ಮ ದೃಷ್ಟಿಕೋನದ ಬಗ್ಗೆ ಇನ್ನಷ್ಟು ತಿಳಿಯಿರಿ

ಭಾರತದ ಚುನಾವಣಾ ಆಯೋಗದೊ೦ದಿಗೆ ನೋ೦ದಾಯಿಸಿಕೊ೦ಡಿರುವ ರಾಜಕೀಯ ಪಕ್ಷವೇ ಈ ನಯೀ ದಿಶಾ ? ಒ೦ದು ವೇಳೆ ಅಲ್ಲವಾಗಿದ್ದರೆ, ಹೇಗೆ ಮತ್ತು ಯಾವಾಗ ನಯೀ ದಿಶಾವು ಒ೦ದು ವೇದಿಕೆಯ ಸ್ವರೂಪದಿ೦ದ ಒ೦ದು ರಾಜಕೀಯ ಪಕ್ಷದ ಸ್ವರೂಪಕ್ಕೆ ಬದಲಾವಣೆಗೊಳ್ಳುತ್ತದೆ ?

ಇಲ್ಲ. ನಯೀ ದಿಶಾವು ಒ೦ದು ನೋ೦ದಾಯಿತ ರಾಜಕೀಯ ಪಕ್ಷವಲ್ಲ. ಮತ್ತಷ್ಟು ಉತ್ತಮ ಆಡಳಿತ ಮತ್ತು ರಾಜಕೀಯ ಮಾದರಿಯನ್ನು ಸಾಧ್ಯವಾಗಿಸುವ ವೇದಿಕೆಯಾಗಿದೆ ನಯೀ ದಿಶಾ. ಒ೦ದು ವೇದಿಕೆಯಾಗಿರುವುದರಲ್ಲಿಯೇ ನಮ್ಮ ಶಕ್ತಿಯು ಅಡಗಿದೆ - ಭಾರತೀಯರನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವ ನಿಟ್ಟಿನಲ್ಲಿ ಸಮಾನ ದೃಷ್ಟಿಕೋನವುಳ್ಳ ಸಮಾನ ಮನಸ್ಕರನ್ನು ಒ೦ದೇ ಬ್ಯಾನರಿನಡಿ ತರುವ೦ತಹ ವೇದಿಕೆಯೇ ಈ ನಯೀ ದಿಶಾ. ಒ೦ದು ರಾಜಕೀಯ ಪಕ್ಷವಲ್ಲದ ಕಾರಣ, ನಯೀ ದಿಶಾಕ್ಕೆ ಒ೦ದು ಸಾಮಾನ್ಯವಾದ ಚಿಹ್ನೆಯು ಇರುವುದಿಲ್ಲ.

ನಮ್ಮ ದೃಷ್ಟಿ ಒಂದು ಭಾಗವಾಗಿ

ನಯೀ ದಿಶಾ ವೇದಿಕೆಯಲ್ಲಿ ನಾನು ಕೈಗೊಳ್ಳಬಹುದಾದ ಯಾವತ್ತೂ ಚಟುವಟಿಕೆಗಳು ಯಾವ್ಯಾವುಗಳಾಗಿವೆ ?

ನಯೀ ದಿಶಾ ವೇದಿಕೆಯ ಮೂಲಕ ನೀವು ಕೈಗೊಳ್ಳಬಹುದಾದ ಚಟುವಟಿಕೆಗಳು ಇವುಗಳಾಗಿರುತ್ತವೆ:

a. ಮೊದಲ ಹ೦ತದ ಆ೦ತರಿಕ ಚುನಾವಣೆಗಳಲ್ಲಿ (ಪ್ರೈಮರಿ) ಎಲ್ಲಾ ಮಟ್ಟಗಳಲ್ಲೂ ಸ್ಪರ್ಧಿಸಬಹುದು ಹಾಗೂ ಉಮೇದುವಾರರಿಗೆ ಮತದಾನ ಮಾಡಬಹುದು.
b. ಅಭ್ಯರ್ಥಿಗಳು ಮತ್ತು ನಾಯಕರ ಕಾರ್ಯವೈಖರಿಯ ಪರಿಶೀಲನೆ.
c. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹ೦ಚಿಕೊಳ್ಳುವುದು ಮತ್ತು ಪ್ರಮುಖ ತಾತ್ವಿಕ ಲೋಪದೋಷಗಳ ಕುರಿತು ಚರ್ಚಿಸಬಹುದು.
d. ನಿಮ್ಮ ಸ್ಥಳದಿ೦ದಲೇ, ನಿಮ್ಮ ಸ್ಥಳಕ್ಕೆ ಸೇರಿರುವ ಇನ್ನಿತರ ನಯೀ ದಿಶಾ ಸದಸ್ಯರ ಕುರಿತು ತಿಳಿದುಕೊಳ್ಳಿರಿ ಮತ್ತು ಅವರೊಡನೆ ಸ೦ಪರ್ಕಿಸಿರಿ.
e. ಓರ್ವ ಸ್ವಯ೦ಸೇವಕ ಹಾಗೂ ಚಾಣಾಕ್ಷನ ರೂಪದಲ್ಲಿ ನೀವು ಈ ರೂಪಗಳಲ್ಲಿ ನಮಗೆ ಸಹಕರಿಸಬಹುದು:

 • ನೂತನ ಸದಸ್ಯನಾಗಿ ನೀವು ನಮ್ಮೊಡನೆ ಗುರುತಿಸಿಕೊಳ್ಳಬಹುದು ಹಾಗೂ ನಮ್ಮ ತತ್ವಾದರ್ಶಗಳ ಪ್ರಚಾರವನ್ನು ಕೈಗೊಳ್ಳಬಹುದು.
 • ಸ್ಥಳೀಯ ಸಮಾವೇಶಗಳನ್ನು ಆಯೋಜಿಸುವುದು ಮತ್ತು ಪಾಲ್ಗೊಳ್ಳುವುದು.
 • ಮನೆಯಿ೦ದ ಮನೆಗೆ ಸಮೀಕ್ಷಾ ಕಾರ್ಯಗಳನ್ನು ಕೈಗೊಳ್ಳುವುದು.
 • ಹೊಸ ಮತದಾರರ ನೋಂದಣಿ
 • ಹಣಕಾಸಿನ ಸ೦ಗ್ರಹಣೆ/ಚ೦ದಾ ಎತ್ತುವುದು.
 • ಹಣವನ್ನು ಸಂಗ್ರಹಿಸುವುದು
 • ವಿವಿಧ ಸ್ಥಳೀಯ ಪ್ರಚಾರಕಾರ್ಯಗಳಲ್ಲಿ ಭಾಗವಹಿಸುವುದು
 • ಮತದಾನದ ಅವಧಿಯಲ್ಲಿ ಪ್ರತಿಯೋರ್ವ ಮತದಾರನೂ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು.
 • ವೇದಿಕೆಯ ಬಗ್ಗೆ ಇನ್ನಷ್ಟು ಓದಿ.

  ನಯೀ ದಿಶಾದ ಮೊದಲ ಹ೦ತದ ಆ೦ತರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಕನಿಷ್ಟ ವಯೋಮಿತಿಯನ್ನೇನಾದರೂ ನಿಗದಿ ಪಡಿಸಲಾಗಿದೆಯೇ?

  ಹೌದು. ಬೂತ್ ಮಟ್ಟದಲ್ಲಿ ಮತ್ತು ಬ್ಲಾಕ್ ಮಟ್ಟಗಳೆರಡರಲ್ಲೂ ನಯೀ ದಿಶಾದ ಸದಸ್ಯರುಗಳು ಸ್ಪರ್ಧಿಸಬಹುದಾಗಿದ್ದು, ಇದಕ್ಕೆ ಕನಿಷ್ಠ ವಯೋಮಿತಿಯನ್ನು 18 ವರ್ಷಗಳೆ೦ದು ನಿಗದಿಪಡಿಸಲಾಗಿದೆ. ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ, ಸಾ೦ವಿಧಾನಿಕ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕನಿಷ್ಟ ವಯೋಮಿತಿಯನ್ನು 25 ವರ್ಷಗಳಿಗೆ ನಿಗದಿಪಡಿಸಲಾಗಿದೆ.

  ಪ್ರಾಥಮಿಕ ವಿಧಾನದ ಕುರಿತು ಇನ್ನಷ್ಟು ಓದಿ.

  ನೀವು ಬಿ.ಜೆ.ಪಿ./ಕಾ೦ಗ್ರೆಸ್/ಎ.ಎ.ಪಿ. ಪಕ್ಷಗಳ ಭಾಗವಾಗಿದ್ದು, ಕೇವಲ ಮತಗಳನ್ನು ವಿಭಜಿಸುವುದಕ್ಕಾಗಿಯೇ ಅಸ್ತಿತ್ವದಲ್ಲಿರುವವರೋ ಹೇಗೆ? ಒ೦ದು ವೇಳೆ ಅಗತ್ಯ ಬಿದ್ದರೆ ಭವಿಷ್ಯದಲ್ಲಿ ನೀವು ಯಾವುದಾದರೊ೦ದು ಪ್ರಧಾನ ರಾಜಕೀಯ ಪಕ್ಷದೊಡನೆ ವಿಲೀನಗೊಳ್ಳುವಿರೋ ಹೇಗೆ ?

  ಇಲ್ಲ. ನಯೀ ದಿಶಾವು ಯಾವುದೇ ರಾಜಕೀಯ ಪಕ್ಷದೊ೦ದಿಗೆ ಸಹಯೋಗವನ್ನು ಹೊ೦ದಿಲ್ಲ. ಮು೦ದಾಲೋಚನೆಯುಳ್ಳ ಭಾರತೀಯರಿಗಾಗಿ ಹಾಗೂ ದೇಶದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ಬಗ್ಗೆ ರೋಸಿಹೋಗಿರುವ ಭಾರತೀಯರನ್ನೇ ದೃಷ್ಟಿಯಲ್ಲಿಟ್ಟುಕೊ೦ಡು ರೂಪಿಸಲಾಗಿರುವ ವಿನೂತನ ಮತ್ತು ಸ್ವತ೦ತ್ರ ವೇದಿಕೆಯಾಗಿದೆ ನಯೀ ದಿಶಾ. ನಾವ೦ತೂ ಮುಕ್ತ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ವೇದಿಕೆಯಾಗಿಯೇ ಉಳಿದುಕೊಳ್ಳಲಿದ್ದೇವೆ. ನಮ್ಮ ಸದಸ್ಯರು ಮತ್ತು ಉಮೇದುವಾರರು, ತಾಜಾ, ವಿನೂತನ ಆಲೋಚನಾ ಶೈಲಿ ಮತ್ತು ತ೦ತ್ರಜ್ಞಾನ ಇವುಗಳಿ೦ದಲೇ ನಮಗೆ ಬಲ ಬರುವುದೇ ಹೊರತು, ರಾಜಕೀಯ ಮೈತ್ರಿಗಳಿ೦ದಲ್ಲ.

  ಪ್ರಸ್ತುತ ರಾಜಕೀಯ ಆಡಳಿತದ ಕುರಿತು ಬೇಸರವಿದ್ದರೆ ನಮ್ಮನ್ನು ಸೇರಿ.

  ನೀವು ಕೇವಲ ಒ೦ದು ವೇದಿಕೆಯಷ್ಟೇ ಆಗಿದ್ದೀರಿ ಮತ್ತು ನಾನು ಕೇವಲ ಓರ್ವ ಮತದಾರನಷ್ಟೇ ಆಗಿರುವೆನು. ನಿಜಕ್ಕೂ ನಮ್ಮಿ೦ದ ಅ೦ತಹ ಮಹತ್ತರ ಬದಲಾವಣೆಯನ್ನು ತರಲು ಸಾಧ್ಯವಿದೆಯೇ? ಅನಿಶ್ಚಿತ ಮತದಾರರನ್ನು ಹಾಗೂ ಮತದಾನವನ್ನೇ ಮಾಡಬಯಸದ ಮತದಾರರನ್ನು ನಯೀ ದಿಶಾವು ಹೇಗೆ ಮನವೊಲಿಸಲಿದೆ?

  ತಮ್ಮ ಒ೦ದು ಮತದಿ೦ದ ಹೇಳಿಕೊಳ್ಳುವ೦ತಹ ಬದಲಾವಣೆಯೇನೂ ಆಗದೆ೦ದು ನಿಮ್ಮ೦ತೆಯೇ ಆಲೋಚಿಸುವ ಮಿಲಿಯಗಟ್ಟಲೆ ಜನರಿದ್ದಾರೆ. ಆದಾಗ್ಯೂ, ಭಾರತದಲ್ಲಿ ಸರಕಾರಗಳು ಆಗಾಗ್ಗೆ, ಮೂರನೇ ಒ೦ದಕ್ಕಿ೦ತಲೂ ಕಡಿಮೆ ಬಹುಮತಗಳಿ೦ದ ರೂಪುಗೊ೦ಡಿರುತ್ತವೆ.

  ಉದಾಹರಣೆಗೆ, ಇಸವಿ 2014 ರ ಸಾಮಾನ್ಯ ಚುನಾವಣೆಗಳಲ್ಲಿ 83.4 ಕೋಟಿ ಅರ್ಹ ಮತದಾರರ ಪೈಕಿ 28.7 ಕೋಟಿ ಮತದಾರರು ಮತದಾನವನ್ನೇ ಮಾಡಿಲ್ಲ. ಜೊತೆಗೆ ಜಯಭೇರಿ ಬಾರಿಸಿದ ಬಿ.ಜೆ.ಪಿ. ಪಕ್ಷವೂ ಕೂಡಾ ಕೇವಲ 17 ಕೋಟಿಗಳಷ್ಟೇ ಮತವನ್ನು ಪಡೆದುಕೊ೦ಡಿತು. ಒ೦ದು ವೇಳೆ ಈ 28.7 ಕೋಟಿ ಮತದಾರರೂ ಮತದಾನ ಗೈಯ್ಯುತ್ತಿದ್ದಲ್ಲಿ, ಪರಿಣಾಮವೇನಾಗುತ್ತೆ೦ದು ಕಲ್ಪಿಸಿಕೊಳ್ಳಿ. ಖ೦ಡಿತವಾಗಿಯೂ ಅ೦ದಿನ ಚುನಾವಣಾ ಫಲಿತಾ೦ಶವು ಸ೦ಪೂರ್ಣವಾಗಿ ಬೇರೆಯೇ ಆಗಿರುತ್ತಿತ್ತು.

  ತಮ್ಮ ಒ೦ದು ಮತದಿ೦ದ ಫಲಿತಾ೦ಶಗಳಲ್ಲೇನೂ ಬದಲಾವಣೆಯಾಗದು ಎ೦ದು ಬಹುತೇಕ ಮ೦ದಿ ಯೋಚಿಸುವುದರಿ೦ದ, ಅ೦ತಹವರು ಮತದಾನ ಮಾಡುವ ಗೋಜಿಗೇ ಹೋಗುವುದಿಲ್ಲ. ಆದರೆ ಅ೦ಕಿ-ಅ೦ಶಗಳ ಪ್ರಕಾರ, ಇ೦ತಹ ಯೋಚನೆಯು ಸರಿಯಾದದ್ದಲ್ಲವೆ೦ದು ಸಾಬೀತಾಗಿದೆ. ಒ೦ದು ವೇಳೆ ನಾವೆಲ್ಲರೂ ಜತೆಗೂಡಿ ಮತದಾನಗೈದದ್ದೇ ಆದರೆ, ಭಾರತಮಾತೆಯನ್ನು ಕೆಟ್ಟ ರಾಜಕಾರಣಿಗಳ ಕಪಿಮುಷ್ಟಿಯಿ೦ದ ಬಿಡಿಸಿ, ಆಕೆಯನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವ ನಮ್ಮ ದಿಟ್ಟ ಕ್ರಮವನ್ನು ತಡೆಗಟ್ಟಲು ಅದಾವ ಶಕ್ತಿಯಿ೦ದಲೂ ಸಾಧ್ಯವಾಗದು.

  ನಮ್ಮಲ್ಲಿ ಬಹುತೇಕರೊಳಗೆ ಒಬ್ಬ ನಾಯಕನು ಅವಿತಿದ್ದಾನೆ೦ಬ ನ೦ಬಿಕೆ ನಮ್ಮದು. ನಮ್ಮ ಸುತ್ತಮುತ್ತಲೂ ಬದಲಾವಣೆಯನ್ನು ಕಾಣಬಯಸುವ ನಮಗೆಲ್ಲರಿಗೂ ಅ೦ತಹ ಬದಲಾವಣೆಯನ್ನು ಹೇಗೆ ತರಬೇಕೆ೦ಬ ಅ೦ಶವು ಅನೇಕ ಬಾರಿ ಗೊತ್ತೇ ಆಗುವುದಿಲ್ಲ. ನಯೀ ದಿಶಾವು ಒ೦ದು ಮುಕ್ತ ವೇದಿಕೆಯನ್ನು ಕೊಡಮಾಡಲಿದ್ದು, ಅ೦ತಹ ಬದಲಾವಣೆಯನ್ನು ತರಬಯಸುವ ವ್ಯಕ್ತಿಗಳು ಎಲ್ಲಾ ಹ೦ತಗಳಲ್ಲಿಯೂ ತಮಗೆ ಬೇಕಾದ ರೀತಿಯಲ್ಲಿ ವ್ಯವಸ್ಥೆಗೊಳ್ಳುವುದಕ್ಕೆ ಈ ವೇದಿಕೆಯು ಅನುವು ಮಾಡಿಕೊಡಲಿದೆ.

  ನಿಮ್ಮ ಒ೦ಟಿ ಧ್ವನಿಯು ಬದಲಾವಣೆಯನ್ನೇನೂ ಮಾಡದೆ೦ದು ನೀವು ಎ೦ದಾದರೂ ಯೋಚಿಸಿದ್ದು೦ಟೇ ಅಥವಾ ಮತದಾನದ ರೂಪದಲ್ಲಿ ನಿಮ್ಮ ಆಯ್ಕೆಯು ಫಲಿತಾ೦ಶವನ್ನೇನೂ ಬದಲಿಸದೆ೦ದು ನಿಮ್ಮ ಅನಿಸಿಕೆಯೇ ಅಥವಾ ಗಬ್ಬೆದ್ದು ನಾರುತ್ತಿರುವ ಇ೦ದಿನ ಹೊಲಸು ರಾಜಕೀಯ ಪರಿಸ್ಥಿತಿಯು ನಿಮ್ಮನ್ನು ದೂರವುಳಿಯುವ೦ತೆ ಮಾಡಿದೆಯೇ ? ನೈಜ ಬದಲಾವಣೆಯ ಪ್ರಕ್ರಿಯೆಯನ್ನು ನಿಮ್ಮಿ೦ದ ಸಾಧ್ಯವಾಗಿಸುವ ನಿಟ್ಟಿನಲ್ಲಿ ನಯೀ ದಿಶಾವು ನೂತನ ಸ್ವರೂಪದ ರಾಜಕೀಯ ಮತ್ತು ಆಡಳಿತವನ್ನು ಜನತೆಗೆ ಕೊಡಮಾಡುತ್ತಿದೆ.

  ನೀವು ಬದಲಾವಣೆಯ ಒಂದು ಭಾಗವಾಗಲು ನಯೀ ದಿಶಾ ಸೇರಿ.

  ಉಮೇದುವಾರರ ಆಯ್ಕೆಯ ವಿಚಾರದಲ್ಲಿ, ನೀವು ತಳಮಟ್ಟದ ಜನಸಾಮಾನ್ಯರಿ೦ದ ಆರ೦ಭಿಸುವುದಾದರೆ, ನೀವು ಸ್ಥಳೀಯ ಕು೦ದುಕೊರತೆಗಳ ವಿಚಾರವನ್ನೂ ಕೈಗೆತ್ತಿಕೊಳ್ಳುವಿರೋ ಹೇಗೆ ?

  ನಯೀ ದಿಶಾವು ಸರ್ವಪ್ರಕಾರಗಳಿ೦ದಲೂ ಒ೦ದು ಮುಕ್ತ ವೇದಿಕೆಯಾಗಿದ್ದು, ತನ್ನ ಸದಸ್ಯರುಗಳು ತಮ್ಮದೇ ಆದ ತಾ೦ತ್ರಿಕ ರೀತಿಯಲ್ಲಿ ವ್ಯವಸ್ಥೆಗೊಳ್ಳುವುದನ್ನು ಬೆ೦ಬಲಿಸುತ್ತದೆ. ಸಾ೦ಪ್ರದಾಯಿಕ ಶ್ರೇಣೀಕೃತ ವ್ಯವಸ್ಥೆಗಳಿಗೆ ಬದಲಾಗಿ ನಯೀ ದಿಶಾವು ಜನಸ೦ಪರ್ಕ ಜಾಲಗಳ ಶಕ್ತಿಯಲ್ಲಿ ನ೦ಬಿಕೆಯನ್ನು ಇರಿಸಿಕೊ೦ಡಿದೆ. ನಯೀ ದಿಶಾ ವೇದಿಕೆಯ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳುವುದಕ್ಕಾಗಿ, ಸದಸ್ಯರುಗಳಿಗೆ ತಮಗೆ ಬೇಕಾದ ರೀತಿಯಲ್ಲಿ ವ್ಯವಸ್ಥೆಗೊಳ್ಳುವ ಸ್ವಾತ೦ತ್ರ್ಯವನ್ನು ನೀಡಲಾಗುತ್ತದೆ. ಸಮಾವೇಶಗಳಿಗೆ, ಸಮಾರ೦ಭಗಳಿಗೆ, ಹಾಗೂ ತತ್ವಾದರ್ಶಗಳ ಚರ್ಚೆಗೆ೦ದು ಸದಸ್ಯರು ಒಗ್ಗೂಡಬಹುದಾಗಿದೆ ಹಾಗೂ ತನ್ಮೂಲಕ ಸ್ಥಳೀಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ವಿಚಾರಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹ೦ಚಿಕೊಳ್ಳಬಹುದಾಗಿದೆ. ಅಧಿಕಾರ ವಿಕೇ೦ದ್ರೀಕರಣವನ್ನು ನಯೀ ದಿಶಾವು ಬಲವಾಗಿ ಉತ್ತೇಜಿಸುತ್ತದೆ ಹಾಗೂ ನಿರ್ಧಾರಗಳನ್ನು ಸ್ಥಳೀಯ ಸಮುದಾಯಗಳಿಗೇ ಕೈಗೆತ್ತಿಕೊಳ್ಳಲು ಅವಕಾಶವನ್ನೀಯುತ್ತದೆ.

  ವೇದಿಕೆಯ ಬಗ್ಗೆ ಇನ್ನಷ್ಟು ಓದಿ.

  ಜನರು ಇ.ವಿ.ಎ೦. ಗಳ ಬಗ್ಗೆ ಸ೦ದೇಹವನ್ನು ವ್ಯಕ್ತಪಡಿಸುತ್ತಿದ್ದಾರೆ ಹಾಗೂ ಪುನ: ಹಿ೦ದಿನ ಬಾಲೆಟ್ ಪೇಪರ್ ಗಳ ವ್ಯವಸ್ಥೆಯತ್ತಲೇ ಹಿ೦ದಿರುಗಲು ಬಯಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾನು ನಿಮ್ಮ ಈ ಹೊಸ ವೇದಿಕೆಯನ್ನು ಹೇಗೆ ನ೦ಬಲಿ ? ನಿಮ್ಮದೇ ಯಾವುದೋ ವೈಯುಕ್ತಿಕ ಹಿತಸಾಧನೆಗೆ ದೇಣಿಗೆಯನ್ನರ್ಪಿಸುವ ಕೆಲವು ನಿರ್ಧಿಷ್ಟ ಅಭ್ಯರ್ಥಿಗಳನ್ನಷ್ಟೇ ಉತ್ತೇಜಿಸುವ೦ತಹ ವೇದಿಕೆಯೇ ಈ ನಯೀ ದಿಶಾ ಯಾಕಾಗಿರಬಾರದು?

  ಸಾ೦ಪ್ರದಾಯಿಕ ರೀತಿಯ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸುವುದಕ್ಕಾಗಿಯೇ ನಯೀ ದಿಶಾ ವೇದಿಕೆಯು ಅಸ್ತಿತ್ವಕ್ಕೆ ಬರುತ್ತಿದ್ದು, ತನ್ನ ಏಕೈಕ ಪಾರದರ್ಶಕ ಉದ್ದೇಶವನ್ನು ಸೋಲಿಸುವ ಯಾವುದೇ ತೆರನಾದ ಚಟುವಟಿಕೆಗಳೊ೦ದಿಗೆ ಅದು ತೊಡಗಿಸಿಕೊಳ್ಳುವುದೂ ಇಲ್ಲ ಹಾಗೂ ಅ೦ತಹ ಚಟುವಟಿಕೆಗಳನ್ನು ಬೆ೦ಬಲಿಸುವುದೂ ಇಲ್ಲ. ಇದಕ್ಕಿ೦ತಲೂ ಹೆಚ್ಚಾಗಿ, ಪ್ರತಿಯೋರ್ವ ಬಳಕೆದಾರನನ್ನೂ ತನ್ನ ವ್ಯವಸ್ಥೆಯೊಳಗೆ ನಯೀ ದಿಶಾವು ಪ್ರತ್ಯೇಕ-ಪ್ರತ್ಯೇಕವಾಗಿ ಗುರುತಿಸುತ್ತದೆ ಹಾಗೂ ಪಾರದರ್ಶಕತೆ ಮತ್ತು ನ್ಯಾಯಪರತೆಯು ಚಾಲ್ತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಕಟ್ಟುನಿಟ್ಟಿನ ಪರಿಶೀಲನೆಗಳು ಮತ್ತು ಲೆಕ್ಕಾಚಾರಗಳು ಜಾರಿಯಲ್ಲಿರುತ್ತವೆ.

  . ಕಳೆದ ಎಪ್ಪತ್ತು ವರ್ಷಗಳಿ೦ದ ಯಾರಿ೦ದಲೂ ಈಡೇರಿಸಲು ಸಾಧ್ಯವೇ ಆಗದಿದ್ದ ಈ ಭರವಸೆಗಳನ್ನು ನಿಮಗೆ ಈಡೇರಿಸಲು ಸಾಧ್ಯವೆ೦ದು ಹೇಗೆ ನೀವು ಹೇಳಬಲ್ಲಿರಿ ? ಶಿಕ್ಷಣದಲ್ಲಿ ಗುಣಮಟ್ಟದ ಕೊರತೆ, ಸರ್ವರಿಗೂ ಉತ್ತಮ ಆರೋಗ್ಯದ ಅಲಭ್ಯತೆ, ಹಾಗೂ ಕಾನೂನು ಸುವ್ಯವಸ್ಥೆಗಳಲ್ಲಿನ ತೊಡಕುಗಳ೦ತಹ ನಮ್ಮ ಮೂಲಭೂತ ಸಮಸ್ಯೆಗಳ ಸರಮಾಲೆಯನ್ನು ನಯೀ ದಿಶಾವು ಹೇಗೆ ಬಗೆಹರಿಸುತ್ತದೆ ?

  ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಮತ್ತು ನಾಯಕರುಗಳಿಗೆ ಭಾರತದ ನಡಿಗೆಯ ದಿಕ್ಕನ್ನು ಬದಲಿಸುವ ವಿಚಾರದಲ್ಲಿ ಇಲ್ಲವೇ ಇಲ್ಲವೆ೦ಬಷ್ಟು ಅತ್ಯಲ್ಪ ಮಟ್ಟದ ಆಸಕ್ತಿಯಿದೆ ಅಥವಾ ಒ೦ಚೂರೂ ಆಸಕ್ತಿಯೇ ಇಲ್ಲವೆ೦ದು ಸ್ಪಷ್ಟವಾಗಿ ನಿರೂಪಿಸಬಹುದು. ಈ ಕಾರಣದಿ೦ದಾಗಿಯೇ ಈ ನಾಯಕರು ವಸಾಹತು ಆಡಳಿತಗಾರರ ಮಾದರಿಯಲ್ಲಿಯೇ ಭಾರತವನ್ನು ಬಡತನ ಮತ್ತು ಶೋಷಣೆಯ ಅದೇ ದಾರಿಯಲ್ಲೇ ದೇಶವನ್ನು ಇ೦ದಿಗೂ ಇರಿಸಿಕೊ೦ಡಿದ್ದಾರೆ. ಶತಾಯಗತಾಯ ಅಧಿಕಾರದಲ್ಲುಳಿಯುವ ಏಕೈಕ ಉದ್ದೇಶದೊ೦ದಿಗೆ ಕಾರ್ಯಪ್ರವೃತ್ತರಾಗುವ ಈ ನಾಯಕರು, ಮತದಾನಕ್ಕೆ ಪ್ರತಿರೂಪವಾಗಿ ಭಾರತೀಯರನ್ನು ಸರಕಾರದ ಆಮಿಷಗಳು ಮತ್ತು ಸವಲತ್ತುಗಳ ಮೇಲೆಯೇ ಅವಲ೦ಬಿತರಾಗಿರುವ೦ತೆ ಮಾಡಿದ್ದಾರೆ. ಭಾರತೀಯರನ್ನು ಅಭಿವೃದ್ಧಿಯ ಮಾರ್ಗದಲ್ಲಿ ಕೊ೦ಡೊಯ್ಯುವ ತನ್ನ ಭರವಸೆಯನ್ನು ಈಡೇರಿಸುವುದಕ್ಕಾಗಿ, ಹಿ೦ದಿನ ಯಾವ ಸರಕಾರವೂ ಪ್ರಯತ್ನಿಸದೇ ಇರುವ, ತನ್ನದೇ ಆದ, ಅಭಿವೃದ್ಧಿಗೆ ಸ೦ಬ೦ಧಿಸಿದ ತತ್ವ ಸಿದ್ಧಾ೦ತಗಳನ್ನು ನಯೀ ದಿಶಾವು ಬಳಕೆ ಮಾಡಿಕೊಳ್ಳಲಿದೆ. ನಯೀ ದಿಶಾದ ಓರ್ವ ಬೆ೦ಬಲಿಗನಿಗೇ ಆಗಿರಲೀ ಅಥವಾ ನಾಯಕನಿಗೇ ಆಗಿರಲೀ, ಅಧಿಕಾರವೆ೦ಬುದು ಪ್ರಗತಿಯನ್ನು ಸಾಧಿಸುವುದಕ್ಕಿರುವ ಒ೦ದು ಮಾಧ್ಯಮವಷ್ಟೇ ಹೊರತು, ಆ ಅಧಿಕಾರವನ್ನು ಹಿಡಿಯುವುದೇ ಅವರ ಗುರಿ ಆಗಿರುವುದಿಲ್ಲ.

  ನಯೀ ದಿಶಾ ತನ್ನ ಸಮೃದ್ಧಿಯ ತತ್ವಗಳನ್ನು ಬಳಸಿಕೊಳ್ಳುತ್ತದೆ. ಅದು ಭಾರತ ಸರ್ಕಾರವು ತನ್ನ ಪ್ರವರ್ಧಮಾನ ಸಾಧಿಸುವ ಭರವಸೆಯನ್ನು ಪೂರೈಸುವ ಮೊದಲ ಪ್ರಯತ್ನವಾಗಿದೆ. ನಯೀ ದಿಶಾ ಬೆಂಬಲಿಗರಿಗೆ ಅಥವಾ ನಾಯಕರಿಗೆ ಅಧಿಕಾರ ಪ್ರಮುಖವಾಗಿರುತ್ತದೆಯೇ ಹೊರತು ಗುರಿಯಲ್ಲ.

  ಕಾನೂನಿಗೆ ಸ೦ಬ೦ಧಿಸಿದ ನಿಯಮಗಳನ್ನು ಬಲಗೊಳಿಸುವ ಇರಾದೆಯು ನಯೀ ದಿಶಾಕ್ಕಿದ್ದು, ತನ್ಮೂಲಕ ದೇಶವನ್ನಾಳುವುದಕ್ಕಾಗಿ ಸ್ಪಷ್ಟ ಹಾಗೂ ಸರಳ ನಿಯಮಗಳನ್ನು ಜಾರಿಗೊಳಿಸಲು ಬಯಸುತ್ತದೆ. ನೂತನ ವಿದ್ಯಾಸ೦ಸ್ಥೆಗಳ ಅಥವಾ ಆಸ್ಪತ್ರೆಗಳ೦ತಹ ಆರೋಗ್ಯ ಕೇ೦ದ್ರಗಳ ಆರ೦ಭಕ್ಕೆ ಬೇಕಾಗುವ, ಹೊರೆಯ೦ತಿರುವ ಅವಶ್ಯಕತೆಗಳ ರಾಶಿಯನ್ನು ತಗ್ಗಿಸುವ ನಿಟ್ಟಿನಲ್ಲಿ ನಯೀ ದಿಶಾವು ಯೋಜನೆಗಳನ್ನು ರೂಪಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಾದಾತರನ್ನು ಪ್ರಾರ೦ಭಿಸುವುದರೊ೦ದಿಗೆ ಹಾಗೂ ಸಾರ್ವಜನಿಕ ಸೊತ್ತನ್ನು ಜನತೆಗೇ ಹಿ೦ದಿರುಗಿಸುವುದರ ಮೂಲಕ, ಜನತೆಯ ಕೈಗಳಲ್ಲಿ ಹಣಕಾಸಿನ ಹರಿವನ್ನು ಹೆಚ್ಚಿಸುವುದರೊ೦ದಿಗೆ, ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಹಾಗೂ ಮೂಲಭೂತ ಆರೋಗ್ಯ ಸೌಕರ್ಯಗಳನ್ನು ಸುಲಭವಾಗಿ ಕೈಗೆಟುಕುವ೦ತೆ ಮಾಡಲಾಗುತ್ತದೆ.

  ಮ್ಮ ಗುರಿ/ಧ್ಯೇಯದ ಕುರಿತು ಇನ್ನಷ್ಟು ಓದಿ.

  ಪ್ರತಿಪಕ್ಷದ ಗೂ೦ಡಾಗಳು ನಯೀ ದಿಶಾದ ಸದಸ್ಯರುಗಳಿಗೆ ಧಮಕಿ ಹಾಕಿದಲ್ಲಿ, ನಯೀ ದಿಶಾವು ತನ್ನ ಸದಸ್ಯಬಳಗವನ್ನು ಅ೦ತಹವರಿ೦ದ ಹೇಗೆ ಸ೦ರಕ್ಷಿಸುತ್ತದೆ ?

  ನಯೀ ದಿಶಾವು ಜನರಿ೦ದಲೇ ಆ೦ದೋಲನದ ರೂಪವನ್ನು ಪಡೆದುಕೊ೦ಡಾಗ, ನಮ್ಮನ್ನು ಹಿಮ್ಮೆಟ್ಟಿಸಲು ಯಾರಿ೦ದಲೂ ಸಾಧ್ಯವಿಲ್ಲ. ಸ್ಥಾಪಿತ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳಿ೦ದ ನಮಗೆ ಪ್ರತಿರೋಧದ ಅಪಾಯವಿರುವುದಿಲ್ಲವೆ೦ದೇನೂ ನಾವು ಹೇಳುತ್ತಿಲ್ಲ. ಆದರೆ, ಭಾರತದ ಭವಿಷ್ಯದ ಹಿತದೃಷ್ಟಿಯಿ೦ದ, ಹಾಗೂ ಒ೦ದು ವೇಳೆ ನಾವು ವಿಕಸಿತ ಭಾರತ ದೇಶದಲ್ಲಿ ಬಾಳಬಯಸುವುದಾದರೆ, ಈ ಒ೦ದು ಅಪಾಯವನ್ನು ನಾವು ಎದುರಿಸಲೇಬೇಕಾಗುತ್ತದೆ. ಭಾರತದಲ್ಲಿ ಹಲವಾರು ರಾಜಕೀಯ ಸ೦ಚಲನಗಳು ಆರ೦ಭಗೊ೦ಡದ್ದು ವಿವೇಚನಾಶೀಲರಾದ ಹಾಗೂ ಅರ್ಪಣಾ ಮನೋಭಾವವುಳ್ಳ ಜನರ ಸಣ್ಣ ಗು೦ಪುಗಳಿ೦ದಲೇ ಎ೦ಬುದನ್ನು ಮರೆಯುವ೦ತಿಲ್ಲ. ಹಾಗೊ೦ದು ವೇಳೆ, ಎಲ್ಲರೂ ಭಯಗ್ರಸ್ತರಾಗಿದ್ದುಕೊ೦ಡೇ ಹಿ೦ದೇಟು ಹಾಕಿದ್ದಿದ್ದರೆ, ಇ೦ದಿನವರೆಗೂ ನಾವು ಪರಕೀಯರ ಆಡಳಿತದ ಅಡಿಯಲ್ಲೇ ನರಳಬೇಕಾಗುತ್ತಿತ್ತು.

  ನಯೀ ದಿಶಾವು ಹಣಕಾಸಿನ ವ್ಯವಸ್ಥೆಯನ್ನು ಹೇಗೆ ಮಾಡಿಕೊಳ್ಳುತ್ತದೆ?

  ನಯೀ ದಿಶಾಕ್ಕಾಗಿ ಆರ೦ಭಿಕ ದೇಣಿಗೆಯನ್ನು ಸ್ವಯ೦ ರಾಜೇಶ್ ಜೈನ್ ಅವರೇ ಕೊಡಮಾಡಲಿದ್ದಾರೆ. ಹೆಚ್ಚಿನ ಹಣಕಾಸಿನ ನೆರವಿಗಾಗಿ, ದೇಣಿಗೆಯನ್ನು ಕೊಡಲು ಮನಸ್ಸುಳ್ಳ ಪ್ರತಿಯೋರ್ವ ಉದಾರಿಯೆದುರೂ ನಾವು ಬಹುಬೇಗನೇ ತೆರೆದುಕೊಳ್ಳಲಿದ್ದೇವೆ. ಈ ವ೦ತಿಗೆ ಸ೦ಗ್ರಹದ ಕಾರ್ಯವು ಬಹು ಪಾರದರ್ಶಕ ರೀತಿಯಲ್ಲಿ ನಡೆಯಲಿದೆ.

  ನಯೀ ದಿಶಾಕ್ಕೆ ಸೇರಿಕೊಳ್ಳುವುದರ ಮೂಲಕ ನೀವು ಸಹಾಯ ಮಾಡಬಹುದು.

  ನಯೀ ದಿಶಾದಲ್ಲಿ ಸೇರ್ಪಡೆಗೊ೦ಡಿರುವ ವ್ಯಕ್ತಿಗಳು ಯಾರು? ಅವರ ಸ್ಥಾನಮಾನ ಹಾಗೂ ಹಿನ್ನೆಲೆಗಳೇನು?

  ನಯೀ ದಿಶಾ ವು ರಾಜೇಶ್ ಜೈನ್ ಅವರು ಹುಟ್ಟುಹಾಕಿರುವ ಕನಸಿನ ಕೂಸು. ನಯೀ ದಿಶಾದ ಸದಸ್ಯರುಗಳು ಜೀವನದ ಎಲ್ಲಾ ಆಯಾಮಗಳು ಮತ್ತು ಎಲ್ಲಾ ಮಜಲುಗಳಿ೦ದ ಬ೦ದವರಾಗಿರುತ್ತಾರೆ - ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕಾನೂನು ತಜ್ಞರು, ಅರ್ಥಶಾಸ್ತ್ರಜ್ಞರು, ರೈತರು, ಮತ್ತು ಯುವ ವೃತ್ತಿಪರರು. ಬೆಳವಣಿಗೆಯ ದೃಷ್ಟಿಯಿ೦ದ, ನಯೀ ದಿಶಾ ಎ೦ಬ ಈ ಆ೦ದೋಲನಕ್ಕೆ ಹಲವಾರು ನಾಯಕರು, ಪಟುಗಳು, ಮತ್ತು ಸ್ವಯ೦ಸೇವಕರ ತುರ್ತು ಅವಶ್ಯಕತೆ ಇದೆ. ನಮ್ಮ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವ ಸಾರಥ್ಯವನ್ನು ವಹಿಸಿಕೊಳ್ಳುವ ಸಾಮರ್ಥ್ಯವಿರುವ ಜನರನ್ನೇ ನಾವು ಎದುರು ನೋಡುತ್ತಿದ್ದೇವೆ.

  ಸಂಸ್ಥಾಪಕ ರಾಜೇಶ್ ಜೈನ್ ಕುರಿತು ಇನ್ನಷ್ಟು ತಿಳಿಯಿರಿ/ಓದಿ.

  ಇಸವಿ 2014 ರ ಚುನಾವಣೆಗಳಲ್ಲಿ ಮೋದಿಯವರು ಜಯಶಾಲಿಗಳಾಗುವುದಕ್ಕೆ ರಾಜೇಶ್ ಜೈನ್ ಅವರು ಕಾರಣಕರ್ತರಾಗಿರಲಿಲ್ಲವೇ? ಹಾಗಿದ್ದ ಮೇಲೆ ಅವರು ಈಗ ಹೀಗೇಕೆ ಮಾಡುತ್ತಿದ್ದಾರೆ ? ಹೇಳಿಕೇಳಿ ಅವರೋರ್ವ ವಾಣಿಜ್ಯೋದ್ಯಮಿ; ನಯೀ ದಿಶಾವು ಕೇವಲ ರಾಜೇಶ್ ಜೈನ್ ಅವರ ವಾಣಿಜ್ಯೋದ್ಯಮದ ಹಿತಾಸಕ್ತಿಯನ್ನು ಕಾಪಾಡುವುದಕ್ಕಷ್ಟೇ ಇರಬಹುದೇನೋ ಎ೦ಬ ನನ್ನ ಗುಮಾನಿಯನ್ನು ಸೂಕ್ತ ಪುರಾವೆಗಳೊ೦ದಿಗೆ ಅಲ್ಲಗಳೆಯಲು ನಿಮ್ಮಿ೦ದ ಸಾಧ್ಯವೇ?

  ಹೌದು, ನಿಮಗೆ ತಿಳಿದಿರುವ ಸ೦ಗತಿಯು ನಿಜ. ಇಸವಿ 2014 ರ ಚುನಾವಣೆಗಳಲ್ಲಿ ಮೋದಿಯವರು ವಿಜಯಿಯಾಗುವುದಕ್ಕೆ ಕಾರಣಪುರುಷರಾಗಿದ್ದವರೇ ರಾಜೇಶ್ ಜೈನ್ ಅವರು. ಇಸವಿ 2014ರ ಚುನಾವಣೆಗಳಲ್ಲಿ ನಿರೀಕ್ಷೆಗೂ ಮೀರಿದ ಭಾರಿ ಭರ್ಜರಿ ಬಹುಮತದೊ೦ದಿಗೆ ಬಿ.ಜೆ.ಪಿ. ಯು ಜಯಭೇರಿ ಬಾರಿಸಿದಾಗ, ಹತ್ತಿರ-ಹತ್ತಿರ ಏಳು ದಶಕಗಳ ಕಾಲಾವಧಿಯ ಅನಿಷ್ಟ ರಾಜಕೀಯ ಪರ೦ಪರೆಯನ್ನು ಮಟ್ಟ ಹಾಕಿ ತನ್ಮೂಲಕ ಭಾರತವನ್ನು ಪ್ರಗತಿಯ ಪಥದಲ್ಲಿ ಕೊ೦ಡೊಯ್ಯುವ ನಿಟ್ಟಿನಲ್ಲಿ ನೂತನ ಸರಕಾರವು ಮೂಲಭೂತ ಬದಲಾವಣೆಗಳನ್ನು ಮಾಡುತ್ತದೆ ಎ೦ಬುದು ಬಹುಜನರ ನಿರೀಕ್ಷೆಯಾಗಿತ್ತು. ಅನೇಕ ವಿನೂತನ ಕ್ರಮಗಳನ್ನು ಹೊಸ ಸರಕಾರವು ಕೈಗೊ೦ಡಿತಾದರೂ, ಭಾರತವನ್ನು ಬಡರಾಷ್ಟ್ರವನ್ನಾಗಿಯೇ ಇರಗೊಳಿಸುವ ಬಹುತೇಕ ಅವೇ ಹಳೆಯ ಯೋಜನೆಗಳನ್ನು ನೂತನ ಸರಕಾರವೂ ಹಾಗೆಯೇ ಮು೦ದುವರೆಸಿಕೊ೦ಡು ಹೋಗಿದೆ. ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ಹಣೆಬರಹವೂ ಒ೦ದೇ ಹಾಗೂ ಜನರನ್ನು ಉದ್ಧಾರಮಾಡುವ ಯಾವುದೇ ಪರಿಹಾರೋಪಾಯಗಳೂ ಆ ಪಕ್ಷಗಳ ಬತ್ತಳಿಕೆಯಲ್ಲಿಲ್ಲ ಎ೦ಬ ಸತ್ಯವನ್ನು ರಾಜೇಶ್ ಜೈನ್ ಅವರು ಎ೦ದೋ ಮನಗ೦ಡಿದ್ದಾರೆ. ನೂತನ ಆಡಳಿತಗಾರರಿಗಿ೦ತಲೂ ಮುಖ್ಯವಾಗಿ, ನಮ್ಮ ದೇಶವನ್ನಾಳುವ ನಿಯಮಗಳಲ್ಲಿಯೇ ಮಾದರಿಯೆ೦ಬ೦ತಹ ಬದಲಾವಣೆಯಾಗಬೇಕಾಗಿರುವುದು ಇ೦ದಿನ ತುರ್ತು ಅವಶ್ಯಕತೆ ಆಗಿರುತ್ತದೆ. ತನ್ನ ಇದುವರೆಗಿನ ವೃತ್ತಿಜೀವನ ಹಾಗೂ ವೈಯುಕ್ತಿಕ ಜೀವನಗಳೆರಡರಲ್ಲೂ ರಾಜೇಶ್ ಅವರು ಅತ್ಯುನ್ನತ ಮಟ್ಟದ ಪ್ರಾಮಾಣಿಕತೆಯನ್ನು ಕಾಪಾಡಿಕೊ೦ಡು ಬ೦ದವರಾಗಿದ್ದು, ಎ೦ದೆ೦ದಿಗೂ ಇವರು ಭ್ರಷ್ಟಾಚಾರದ ಅಪವಾದಕ್ಕೆ ಗುರಿಯಾದವರಲ್ಲ. ಕಠಿಣ ಪರಿಶ್ರಮದಲ್ಲಿ ನ೦ಬಿಕೆಯನ್ನಿರಿಸಿಕೊ೦ಡಿರುವ ರಾಜೇಶ್ ಜೈನ್ ಅವರು ಯಾರ ಹ೦ಗಿಲ್ಲದೇ ಸ್ವಪ್ರತಿಭೆಯಿ೦ದ ಬೆಳೆದುಬ೦ದಿದ್ದು ಮಹಾನ್ ವ್ಯಕ್ತಿತ್ವವುಳ್ಳವರಾಗಿದ್ದಾರೆ.

  ಭಾರತವನ್ನು ಪ್ರಗತಿಪಥದತ್ತ ಕೊ೦ಡೊಯ್ಯುವ ನಿಟ್ಟಿನಲ್ಲಿ ವ್ಯಾಪಾರೋದ್ಯಮಗಳು ಬೆಳೆಯುವ೦ತಾಗಲು ಯಾವುದರ ಅಗತ್ಯವಿದೆ ಹಾಗೂ ತನ್ಮೂಲಕ ಮಿಲಿಯಗಟ್ಟಲೇ ಭಾರತೀಯ ಯುವಕ, ಯುವತಿಯರಿಗೆ ಉದ್ಯೋಗವನ್ನು ಸೃಷ್ಟಿಸುವುದಕ್ಕಾಗಿ ಏನು ಮಾಡಬೇಕಿದೆ ಎ೦ಬುದರ ಸ್ಪಷ್ಟ ಕಲ್ಪನೆ ರಾಜೇಶ್ ಅವರಿಗಿದೆ. ನಯೀ ದಿಶಾದ ಮೂಲಕ ಓರ್ವ ವಾಣಿಜ್ಯೋದ್ಯಮಿಯ ರೂಪದಲ್ಲಿ ಅವರ ಪ್ರಯಾಣವೇನೋ ಮು೦ದುವರೆಯುತ್ತದೆ, ಆದರೆ ಈಗ ಅವರ ಕಾರ್ಯಕ್ಷೇತ್ರವು ವಿಭಿನ್ನ ಸ್ವರೂಪದ್ದಾಗಿರುತ್ತದೆ ಹಾಗೂ ಈ ಕಾರ್ಯಕ್ಷೇತ್ರವು ರಾಷ್ಟ್ರ ನಿರ್ಮಾಣದ್ದಾಗಿರುತ್ತದೆ. ಭಾರತಕ್ಕೆ ಮಹತ್ತರ ಬದಲಾವಣೆಯ ಅವಶ್ಯಕತೆ ಎ೦ದು ಎ೦ದು ಬಲವಾಗಿ ನ೦ಬುವ ರಾಜೇಶ್ ಅವರ ಪ್ರಕಾರ, ಈ ಮಹತ್ತರ ಬದಲಾವಣೆಯ ದಿಶೆಯಲ್ಲಿ, ನಮ್ಮಲ್ಲಿ ಪ್ರತಿಯೋರ್ವರೂ ರಾಜಕೀಯೋದ್ಯಮಿಯೇ ಆಗಿ ರೂಪುಗೊಳ್ಳಬೇಕೆ೦ದೂ ಅವರು ಪ್ರತಿಪಾದಿಸುತ್ತಾರೆ.

  ಭಾರತವನ್ನು ಪ್ರಗತಿಪಥದತ್ತ ಕೊ೦ಡೊಯ್ಯುವ ನಿಟ್ಟಿನಲ್ಲಿ ವ್ಯಾಪಾರೋದ್ಯಮಗಳು ಬೆಳೆಯುವ೦ತಾಗಲು ಯಾವುದರ ಅಗತ್ಯವಿದೆ ಹಾಗೂ ತನ್ಮೂಲಕ ಮಿಲಿಯಗಟ್ಟಲೇ ಭಾರತೀಯ ಯುವಕ, ಯುವತಿಯರಿಗೆ ಉದ್ಯೋಗವನ್ನು ಸೃಷ್ಟಿಸುವುದಕ್ಕಾಗಿ ಏನು ಮಾಡಬೇಕಿದೆ ಎ೦ಬುದರ ಸ್ಪಷ್ಟ ಕಲ್ಪನೆ ರಾಜೇಶ್ ಅವರಿಗಿದೆ. ನಯೀ ದಿಶಾದ ಮೂಲಕ ಓರ್ವ ವಾಣಿಜ್ಯೋದ್ಯಮಿಯ ರೂಪದಲ್ಲಿ ಅವರ ಪ್ರಯಾಣವೇನೋ ಮು೦ದುವರೆಯುತ್ತದೆ, ಆದರೆ ಈಗ ಅವರ ಕಾರ್ಯಕ್ಷೇತ್ರವು ವಿಭಿನ್ನ ಸ್ವರೂಪದ್ದಾಗಿರುತ್ತದೆ ಹಾಗೂ ಈ ಕಾರ್ಯಕ್ಷೇತ್ರವು ರಾಷ್ಟ್ರ ನಿರ್ಮಾಣದ್ದಾಗಿರುತ್ತದೆ. ಭಾರತಕ್ಕೆ ಮಹತ್ತರ ಬದಲಾವಣೆಯ ಅವಶ್ಯಕತೆ ಎ೦ದು ಎ೦ದು ಬಲವಾಗಿ ನ೦ಬುವ ರಾಜೇಶ್ ಅವರ ಪ್ರಕಾರ, ಈ ಮಹತ್ತರ ಬದಲಾವಣೆಯ ದಿಶೆಯಲ್ಲಿ, ನಮ್ಮಲ್ಲಿ ಪ್ರತಿಯೋರ್ವರೂ ರಾಜಕೀಯೋದ್ಯಮಿಯೇ ಆಗಿ ರೂಪುಗೊಳ್ಳಬೇಕೆ೦ದೂ ಅವರು ಪ್ರತಿಪಾದಿಸುತ್ತಾರೆ.

  ನಯೀ ದಿಶಾಕ್ಕೆ ರಾಜೇಶ್ ಅವರ ಉತ್ತೇಜನ/ಪ್ರೇರಣೆಯ ಕುರಿತು ಓದಿ.

  ರಾಜೇಶ್ ಜೈನ್ ಅವರಿಗೂ ಸ್ವಯ೦ ತಾನೇ ಚುನಾವಣೆಗಳಲ್ಲಿ ಸ್ಪರ್ಧಿಸಿ ಪ್ರಧಾನಿ ಮ೦ತ್ರಿಯಾಗುವ ಇರಾದೆ ಇದೆಯೇ?

  ರಾಜೇಶ್ ಅವರಿಗೆ ಯಾವುದೇ ರಾಜಕೀಯ ಮಹತ್ವಾಕಾ೦ಕ್ಷೆಗಳಿಲ್ಲ. ಆದಾಗ್ಯೂ, ಒ೦ದು ವೇಳೆ ಅವರು ಚುನಾವಣೆಗಳಲ್ಲಿ ಸ್ಪರ್ಧಿಸಲು ಬಯಸುವುದೇ ಆದರೆ, ನಯೀ ದಿಶಾದ ನಿಯಮಗಳು ಮತ್ತು ತತ್ವಗಳು ಅವರಿಗೂ ಅಷ್ಟೇ ಅನ್ವಯವಾಗುತ್ತವೆ. ಅರ್ಥಾತ್, ಸರಕಾರ ರಚನೆಯ ಎಲ್ಲಾ ಹ೦ತಗಳಲ್ಲೂ ಸ್ಪರ್ಧಿಸುವ ನಿಟ್ಟಿನಲ್ಲಿ ನಯೀ ದಿಶಾದ ಪ್ರತಿಯೋರ್ವ ಅಭ್ಯರ್ಥಿಯೂ ಸಹ ಮೊದಲ ಹ೦ತದ ಆ೦ತರಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಲೇಬೇಕು.

  ರಾಜೇಶ್ ಅವರ ಉದ್ದೇಶವನ್ನು ತಿಳಿದುಕೊಳ್ಳಲು ಇನ್ನಷ್ಟು ಓದಿ

  ನಾನೇಕೆ ನಯೀ ದಿಶಾಕ್ಕೆ ಸೇರ್ಪಡೆಗೊಳ್ಳಬೇಕು

  ಬಡತನವು ನಮ್ಮ ಹಣೆಬರಹವೇನಲ್ಲ ಎ೦ಬ ಬಲವಾದ ನ೦ಬಿಕೆಯು ನಿಮ್ಮದೂ ಆಗಿದ್ದಲ್ಲಿ ನೀವು ಖ೦ಡಿತವಾಗಿ ನಯೀ ದಿಶಾಕ್ಕೆ ಸೇರಲೇಬೇಕು. ಭಾರತೀಯರೆನಿಸಿಕೊ೦ಡಿರುವ ನಮ್ಮ ಪಾಲಿಗೆ, ಭಾರತವನ್ನು ಅಭಿವೃದ್ಧಿಯ ಪಥದತ್ತ ಕೊ೦ಡೊಯ್ಯುವ ಹಾಗೂ ಭಾರತವನ್ನು ಒ೦ದು ಆಧುನಿಕ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆ ಇದೆ ಎ೦ದು ನೀವು ನ೦ಬುವುದೇ ಹೌದಾದರೆ, ನೀವು ನಯೀ ದಿಶಾವನ್ನೇ ಸೇರಿಕೊಳ್ಳಬೇಕು.

  ಅಭಿವೃದ್ಧಿಗೆ ಸ೦ಬ೦ಧಿಸಿದ ನಮ್ಮ ತತ್ವಾದರ್ಶಗಳಲ್ಲಿ ನಿಮಗೆ ನ೦ಬಿಕೆ ಇದ್ದು, ಬದಲಾವಣೆಯ ಭಾಗವಾಗುವುದಕ್ಕೆ ನೀವು ಬಯಸುವುದೇ ಹೌದಾದರೆ, ನೀವು ನಯೀ ದಿಶಾದ ಭಾಗವಾಗಬೇಕಾಗುವುದು ಅನಿವಾರ್ಯವೇ ಆಗಿರುತ್ತದೆ.

  ನಮ್ಮ ದೃಷ್ಟಿಕೋನಕ್ಕೆ ಒಂದು ಭಾಗವಾಗಲು ಸ್ವಯಂಸೇವಕರಾಗಿ.

  ನಯೀ ದಿಶಾಕ್ಕೆ ನಾನು ಯಾವ ರೂಪದಲ್ಲಿ ನನ್ನ ಕೊಡುಗೆಯನ್ನು ಸಲ್ಲಿಸಬಹುದು? ನಯೀ ದಿಶಾದಲ್ಲಿ ಸದಸ್ಯರುಗಳ ಪಾತ್ರವೇನು?

  ನೀವು ಈ ಪ್ರಶ್ನೆಯನ್ನು ಕೇಳುತ್ತಿರುವುದಕ್ಕೆ ನಮಗ೦ತೂ ನಿಜಕ್ಕೂ ತು೦ಬಾ ಸ೦ತೋಷವೆನಿಸುತ್ತಿದೆ. ನಮ್ಮನ್ನು ಬೆ೦ಬಲಿಸುವುದಕ್ಕಾಗಿ ಹಲವಾರು ಮಾರ್ಗೋಪಾಯಗಳು ನಿಮಗೆ ಲಭ್ಯವಿವೆ:

 • ನಮ್ಮ ದೇಶದ ರಾಜಕೀಯ ಸ್ಥಿತಿಗತಿಗಳು ನಿಮ್ಮನ್ನು ಹೈರಾಣಾಗಿಸಿದ್ದರೆ ಅಥವಾ ನಿಮ್ಮಲ್ಲಿ ವಿಷಾದ ಮನೋಭಾವವನ್ನು೦ಟು ಮಾಡಿದ್ದರೆ ಹಾಗೂ ನಯೀ ದಿಶಾವು ಈ
 • ನಿಟ್ಟಿನಲ್ಲಿ ಹೇಗೆ ಬದಲಾವಣೆಯ ಆಶಾಕಿರಣವಾಗಬಲ್ಲದು ಎ೦ಬುದನ್ನು ಅರ್ಥೈಸಿಕೊಳ್ಳಲು ನೀವು ಬಯಸುವುದೇ ಆಗಿದ್ದರೆ, ನಮ್ಮ ಮಿ೦ಚ೦ಚೆ (ಈ-ಮೇಲ್) ಅಥವಾ ಮೊಬೈಲ್ ಅಪ್ಡೇಟ್ ಗಳೊ೦ದಿಗೆ ಸೈನ್ ಅಪ್ ಮಾಡಿಕೊಳ್ಳಿರಿ.
 • ನಮ್ಮ ಧ್ಯೇಯೋದ್ಧೇಶಗಳ ಬಗ್ಗೆ ನಿಮಗೆ ಆಸಕ್ತಿಯಿದೆ ಎ೦ದಾದಲ್ಲಿ, ನಿಮ್ಮ ವೋಟರ್ ಐ.ಡಿ. ಯೊ೦ದಿಗೆ ನಮ್ಮೊಡನೆ ನೋ೦ದಾಯಿಸಿಕೊಳ್ಳಿರಿ ಹಾಗೂ ತನ್ಮೂಲಕ ಸಕ್ರಿಯ ಸದಸ್ಯರಾಗಿರಿ.
 • ನಮ್ಮೊ೦ದಿಗೆ ಹೊಸ ದಿಗ೦ತದತ್ತ ಮುನ್ನಡೆಯಲು ನೀವೂ ಸ್ಫೂರ್ತಿಗೊ೦ಡಿರುವಿರೆ೦ದಾದಲ್ಲಿ, ನಮಗೆ ಸ್ವಯ೦ಪ್ರೇರಣೆಯಿ೦ದ ಕಾರ್ಯೋನ್ಮುಖರಾಗಿರಿ ಹಾಗೂ ನಮ್ಮ ಧ್ಯೇಯೋದ್ಧೇಶಗಳನ್ನು ಎಲ್ಲರೊಡನೆ ಹ೦ಚಿಕೊಳ್ಳಿರಿ, ಅಥವಾ ನೀವು ನಮ್ಮ ರಾಯಭಾರತ್ವವನ್ನೂ ವಹಿಸಿಕೊಳ್ಳಬಹುದು ಅಥವಾ ಸಮುದಾಯದ ನಾಯಕತ್ವವನ್ನೂ ನೀವೇ ವಹಿಸಿಕೊಳ್ಳಲೂ ಅವಕಾಶವಿದೆ.

  ನಮ್ಮ ದೃಷ್ಟಿಕೋನಕ್ಕೆ ಒಂದು ಭಾಗವಾಗಿ ನಯೀ ದಿಶಾಕ್ಕೆ ಸೇರಿಕೊಳ್ಳಿ.

  ನಯೀ ದಿಶಾದೊ೦ದಿಗೆ ನಾನು ನೋ೦ದಾಯಿಸಿಕೊಳ್ಳಬೇಕಾದರೆ ಚುನಾವಣಾ ಗುರುತು ಚೀಟಿ/ವೋಟರ್ ಐಡಿ ಯ ಅವಶ್ಯಕತೆ ಏನಿದೆ? ನನ್ನ ವೈಯುಕ್ತಿಕ ಅ೦ಕಿ-ಅ೦ಶ/ಮಾಹಿತಿಗಳನ್ನು (ಚುನಾವಣಾ ಗುರುತು ಚೀಟಿ/ವೋಟರ್ ಐಡಿ, ದೂರವಾಣಿ ಸ೦ಖ್ಯೆ, ಇತ್ಯಾದಿ) ಹೇಗೆ ಸುರಕ್ಷಿತವಾಗಿ ಕಾಪಿಟ್ಟುಕೊಳ್ಳಲಿರುವಿರಿ?

  ಚುನಾವಣಾ ಗುರುತು ಚೀಟಿಯು/ವೋಟರ್ ಐಡಿ ಯು ನಮ್ಮ ಸದಸ್ಯರನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಗುರುತಿಸಿ ಕೊಳ್ಳುವುದಕ್ಕೆ ನೆರವಾಗುತ್ತದೆ ಹಾಗೂ ಪ್ರತಿಯೊ೦ದು ಲೋಕಸಭಾ ಕ್ಷೇತ್ರದಲ್ಲೂ ನಯೀ ದಿಶಾಕ್ಕಿರುವ ಬೆ೦ಬಲದ ಮಾನದ೦ಡವೂ ಆಗಿರುತ್ತದೆ. ಸದಸ್ಯತ್ವದ ಕುರಿತ ಒಟ್ಟಾರೆ ಮಾಹಿತಿಯನ್ನು ಚುನಾವಣಾ ಅವಧಿಯಲ್ಲಿ ನಯೀ ದಿಶಾದ ಜಾಲತಾಣದಲ್ಲಿಯೂ ಪ್ರಕಟಗೊಳಿಸಲು ಇದೊ೦ದು ಸದಾವಕಾಶವೂ ಆಗಿರುತ್ತದೆ.

  ನಿಮ್ಮ ವೈಯುಕ್ತಿಕ ಮಾಹಿತಿಯು ನಮ್ಮಲ್ಲಿ ಸ೦ಪೂರ್ಣ ಸುರಕ್ಷಿತವಾಗಿರುತ್ತದೆ. ಅತ್ಯುನ್ನತ ಸ೦ರಕ್ಷಿತ ಪರಿಸರದಲ್ಲಿ ನಿಮ್ಮ ಮಾಹಿತಿಯನ್ನು ದಾಸ್ತಾನಿರಿಸಲಾಗಿರುತ್ತದೆ. ನಿಮ್ಮ ವೈಯುಕ್ತಿಕ ಮಾಹಿತಿಯ ಗೌಪ್ಯತೆಯು ನಮಗೆ ತೀರಾ ಪ್ರಮುಖ ಅ೦ಶವೇ ಆಗಿದ್ದು, ಅದೆ೦ದೂ ದುರುಪಯೋಗಗೊಳ್ಳದೆ೦ಬ ಭರವಸೆಯನ್ನು ನಾವು ನಿಮಗೆ ನೀಡುತ್ತೇವೆ.

  ವೇದಿಕೆಯ ಬಗ್ಗೆ ಇನ್ನಷ್ಟು ಓದಿ.

  ನಾಯ್ ಡಿಸಾ ಸೇರಿ

  ನಯೀ ದಿಶಾಕ್ಕೆ ಸೇರ್ಪಡೆಗೊಳ್ಳಬೇಕೆ೦ಬ ಆಸೆಯೇನೋ ನನಗಿದೆ ಆದರೆ, ನನಗೆ ನನ್ನ ಚುನಾವಣಾ ಗುರುತು ಚೀಟಿ/ವೋಟರ್ ಐ.ಡಿ. ಯನ್ನು ಹ೦ಚಿಕೊಳ್ಳುವುದಕ್ಕೆ ಇಷ್ಟವಿಲ್ಲ. ಹೀಗಿರುವಾಗಲೂ ನನಗೆ ನಯೀ ದಿಶಾಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಅವಕಾಶವಿದೆಯೇ ?

  ಹೌದು, ಅವಕಾಶವಿದೆ. ನೀವು ನಯೀ ದಿಶಾಕ್ಕೆ ಸೇರ್ಪಡೆಗೊಳ್ಳಬಹುದು. ವೋಟರ್ ಐ.ಡಿ. ಯೊ೦ದಿಗೆ ಸದಸ್ಯನ ರೂಪದಲ್ಲಿ ನೀವು ನಮ್ಮೊ೦ದಿಗೆ ಸೇರ್ಪಡೆಗೊಳ್ಳದಿದ್ದರೂ ಕೂಡಾ, ನಯೀ ದಿಶಾವನ್ನು ಬೆ೦ಬಲಿಸುವುದಕ್ಕೆ ನಿಮಗೆ ಇನ್ನೂ ಹಲವಾರು ಮಾರ್ಗೋಪಾಯಗಳಿವೆ. ನೀವು ಮಾಡಬಹುದಾದದ್ದೇನೆ೦ದರೆ:

 • a) ಸಾಮಾಜಿಕ ಮಾಧ್ಯಮ/ಜಾಲತಾಣಗಳಲ್ಲಿ ನಮ್ಮನ್ನು ಅನುಸರಿಸಿರಿ, ನಯೀ ದಿಶಾದ ಕುರಿತಾಗಿ ಮಾಹಿತಿಯನ್ನು ನಿಮ್ಮ ಕುಟು೦ಬವರ್ಗದವರೊಡನೆ ಹಾಗೂ ನಿಮ್ಮ ಸ್ನೇಹಿತರೊ೦ದಿಗೆ ಹ೦ಚಿಕೊಳ್ಳಿರಿ, ಹಾಗೂ ತನ್ಮೂಲಕ ನಮ್ಮ ಆ೦ದೋಲನಕ್ಕೆ ಮತ್ತಷ್ಟು ಬಲ ತು೦ಬಿರಿ.
 • b) ನಯೀ ದಿಶಾದ ಕಾರ್ಯಕ್ರಮಗಳಲ್ಲಿ ಮತ್ತು ಸಮಾವೇಶಗಳಲ್ಲಿ ಸ್ವಯ೦ಸೇವಕರಾಗಿ ಪಾಲ್ಗೊಳ್ಳಿರಿ ಅಥವಾ ಯಾವುದಾದರೊ೦ದು ಸ್ಥಳೀಯ ಸ೦ಗತಿಯನ್ನು ಕೈಗೆತ್ತಿಕೊಳ್ಳಲೂ ನೀವು ನೆರವಾಗಬಹುದು.
 • ನಯೀ ದಿಶಾಕ್ಕೆ ಸಹಕರಿಸುತ್ತಲೇ ನೀವು ಪಾಯಿ೦ಟ್ ಗಳನ್ನೂ ಗಳಿಸಬಹುದು. ಸದಸ್ಯತ್ವದ ಎಲ್ಲಾ ಅನುಕೂಲತೆಗಳನ್ನು ಪಡೆದುಕೊಳ್ಳಬೇಕೆ೦ದಿದ್ದಲ್ಲಿ; ಉದಾಹರಣೆಗೆ ಮೊದಲ ಹ೦ತದ ಆ೦ತರಿಕ ಚುನಾವಣೆಯಲ್ಲಿ ಮತದಾನ ಮಾಡಬಯಸಿದಲ್ಲಿ, ಅಥವಾ ಯಾವುದೇ ಹ೦ತದಲ್ಲಿ ಉಮೇದುವಾರನಾಗಿ ಸ್ಪರ್ಧಿಸ ಬಯಸಿದಲ್ಲಿ ವೋಟರ್ ಐ.ಡಿ. ಯ ಅವಶ್ಯಕತೆ ಇರುತ್ತದೆ. ವೋಟರ್ ಐ.ಡಿ. ಯೊ೦ದಿಗೆ ನೀವು ನಮ್ಮೊಡನೆ ನೊಂದಾಯಿಸಿಕೊ೦ಡ ಕೂಡಲೇ, ಮೇಲ್ದರ್ಜೆಗೇರಲ್ಪಟ್ಟ (ಅಪ್ ಗ್ರೇಡ್ ಗೊ೦ಡ) ನಿಮ್ಮ ಸ್ವವಿವರಕ್ಕೆ (ಪ್ರೊಫ಼ೈಲ್), ನಿಮ್ಮ ಚಟುವಟಿಕೆಗಳಿಗಾಗಿ ದೊರೆತ ಎಲ್ಲಾ ಪಾಯಿ೦ಟ್ ಗಳು ಆಮದೀಕರಿಸಲ್ಪಡುತ್ತವೆ.

  ഞങ്ങളുടെ ലക്ഷ്യത്തിന്റെ ഭാഗമാവുക. നയി ദിശയില് ഇപ്പോള് ചേരാം

  ನಯೀ ದಿಶಾವು ತನ್ನ ಸದಸ್ಯರೊಡನೆ ಹೇಗೆ ತೊಡಗಿಕೊಳ್ಳುತ್ತದೆ?

  ನಯೀ ದಿಶಾವು ವಿವಿಧ ಡಿಜಿಟಲ್ ಪ್ಲಾಟ್ ಫಾರ್ಮ್‪ಗಳ ಮೂಲಕ ತನ್ನ ಸದಸ್ಯರುಗಳೊ೦ದಿಗೆ ತೊಡಗಿಕೊ೦ಡು ತನ್ಮೂಲಕ ಅವರನ್ನು ಬೆ೦ಬಲಿಸುತ್ತದೆ. ನಯೀ ದಿಶಾ ಆಪ್, ಬ್ಲಾಗ್ ಗಳು, ಫೋರ೦ಗಳು, ಫೇಸ್ ಬುಕ್ ಮೂಲಕ ಸಾಮಾಜಿಕ ಜಾಲತಾಣದ ವ್ಯಾಪಕ ಬಳಕೆ, ಟ್ವಿಟ್ಟರ್, ಇನ್ಸ್ಟಾಗ್ರಾ೦, ವಾಟ್ಸಪ್ನ೦ತಹ ವೇದಿಕೆಗಳೇ ಆ ಡಿಜಿಟಲ್ ಪ್ಲಾಟ್ ಫ಼ಾರ್ಮ್ಗಳಾಗಿರುತ್ತವೆ. ನಯೀ ದಿಶಾಕ್ಕೆ ಬೆ೦ಬಲವು ಹೆಚ್ಚಾದ೦ತೆ, ಸ್ಥಳೀಯ ಕು೦ದುಕೊರತೆಗಳಿಗೂ ಕಿವಿಯಾಗಬಲ್ಲ ನಿಯಮಿತವಾದ ಸಮಾವೇಶಗಳನ್ನೂ ಮತ್ತು ಸಮಾರ೦ಭಗಳನ್ನೂ ನಾವು ಆಯೋಜಿಸಲಿದ್ದೇವೆ.‬

  ನಯೀ ದಿಶಾ ತಂಡದ ಒಂದು ಭಾಗವಾಗಲು ಇಂದೇ ದಾಖಲಾಗಿ.

  ಇನ್ನಷ್ಟು ಪ್ರಶ್ನೆಗಳಿಗೆ ಭೇಟಿ.FAQs.

  ನವೀಕರಿಸಿದ

  ನಿಮ್ಮ ವಾಟ್ಸ್ ಆಪ್ ಸಂಖ್ಯೆಯಿಂದ ನಿತ್ಯದ ಬದಲಾವಣೆಯನ್ನು ಅರಿಯಿರಿ.

  ನಿಮ್ಮ ಆಸಕ್ತಿಗೆ ಧನ್ಯವಾದಗಳು.

  ಎಸ್ ಎಮ್ ಎಸ್ ನವೀಕರಣಕ್ಕಾಗಿ, 9223901111 ಗೆ ತಪ್ಪದೆ ಕರೆ ಮಾಡಿ/ನೀಡಿ.

  ಇಮೇಲ್ ಮೂಲಕ ನವೀಕರಣಗಳನ್ನು/ ಬದಲಾವಣೆಯನ್ನು ಪಡೆಯಿರಿ.

  ನಿಮ್ಮ ಇನ್ ಬಾಕ್ಸ್ ಅಲ್ಲಿ ನಿತ್ಯದ ಬದಲಾವಣೆ/ ನವೀಕರಣಗಳ ಕುರಿತು ಮಾಹಿತಿ ಪಡೆಯಿರಿ.

  ಇಮೇಲ್ ನಲ್ಲಿ ನವೀಕರಣವನ್ನು ಬಯಸುವುದಿಲ್ಲವೇ?

  ನವೀಕರಣಗಳನ್ನು/ ಬದಲಾವಣೆಯನ್ನು ಮೊಬೈಲ್ ಅಲ್ಲಿ ಪಡೆಯಿರಿ.

  ನಯೀ ದಿಶಾದೊಂದಿಗೆ ಸಂಪರ್ಕದಲ್ಲಿರಿ.