ಹಣ ವಾಪಾಸಾತಿ

ಪ್ರತಿಯೊಬ್ಬ ಭಾರತೀಯನನ್ನೂ ಸಮೃದ್ಧವಾಗಿಸುವುದು ನಮ್ಮ ಗುರಿ.

ಹಣ ವಾಪಾಸಾತಿ ಎಂದರೇನು?

ಇದು ನಮಗೆ ಏಕೆ ಬೇಕು?

ಭಾರತದಲ್ಲಿ ಈವರೆಗೆ ಆಗಿಹೋದ ಸರ್ಕಾರಗಳು ನಮಗೆ ಸಮೃದ್ಧಿಯನ್ನು ತಂದುಕೊಡುವಲ್ಲಿ ವಿಫಲವಾಗಿವೆ. 70 ವರ್ಷ ಅವರು ನಮ್ಮ ಸಂಪತ್ತನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆದರೆ ಈಗ ಸಮಯ ಕೂಡಿ ಬಂದಿದೆ. ಇದು ನಮ್ಮ ಹಕ್ಕಿನ ಪಾಲನ್ನು ನಮಗೆ ನೀಡುವಂತೆ ಬೇಡಿಕೆ ಮುಂದಿಡಲು ಸರಿಯಾದ ಸಮಯ. ನಾವು ಸಮೃದ್ಧ ರಾಷ್ಟ್ರದಲ್ಲಿರಬೇಕೆಂದು ಆಶಿಸುವುದಾದರೆ, ಇಲ್ಲಿ ಮುಗಿಯದ ಬಡತನ, ನಿರುದ್ಯೋಗ, ಶಿಕ್ಷಣದ ಮತ್ತು ಆರೋಗ್ಯದ ಕೊರತೆಗಳ ಪರಂಪರೆ ಅಂತ್ಯಗೊಳ್ಳಬೇಕು.

ಇದು ಹೇಗೆ ಸಾಧ್ಯ?

ಇದು ಹೇಗೆ ಸಾಧ್ಯ?

ನಯೀ ದಿಶಾ ಸಾರ್ವಜನಿಕರ ಸಂಪತ್ತನ್ನು ಸಾರ್ವಜನಿಕರಿಗೇ ಹಿಂದಿರುಗಿಸುವ ಕೆಲಸವನ್ನು ಮಾಡುತ್ತದೆ. ಈ ಹಿಂದಿರುಗಿಸುವಿಕೆ ಹಂತ ಹಂತವಾಗಿ ಸಮೃದ್ಧಿಯ ಹಂಚುವಿಕೆ ಮತ್ತು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ನಡೆಯುತ್ತದೆ. ಜೊತೆಗೆ ನಯೀ ದಿಶಾ ಭಾರತವನ್ನು ಸಮೃದ್ಧತೆ ಹಾದಿಯಲ್ಲಿ ನಿಲ್ಲಿಸಬಲ್ಲ ಆರ್ಥಿಕ ಸುಧಾರಣೆಗಳನ್ನು ಸೂಚಿಸುತ್ತದೆ. ಹೆಚ್ಚಿನ ವಿವರಗಳಿಗೆ ನಮ್ಮ ಸಾರ್ವಜನಿಕ ಸಂಪತ್ತಿನ ಹಂಚಿಕೆಯ ವರದಿಯನ್ನು ಓದಬಹುದು. ಸಾರ್ವಜನಿಕ ಸಂಪತ್ತಿನ ವರದಿಯನ್ನು .

ಸಂಪತ್ತು ಎಷ್ಟಿದೆ?

ಸಂಪತ್ತು ಎಷ್ಟಿದೆ?

ಭಾರತವು ಖನಿಜ ಸಂಪನ್ಮೂಲಗಳು ಹಾಗು ಇತರ ಅಪಾರ, ಅಮೂಲ್ಯ ನಿಸರ್ಗದತ್ತ ಸಂಪನ್ಮೂಲಗಳನ್ನು ಹೊಂದಿರುವ ಶ್ರೀಮಂತ ದೇಶವಾಗಿದೆ. ತಜ್ಞರ ಅಂದಾಜಿನ ಪ್ರಕಾರ ಭಾರತದಲ್ಲಿರುವ ಖನಿಜ ಸಂಪನ್ಮೂಲಗಳ ಬೆಲೆ ರೂ 5,000 ಲಕ್ಷ ಕೋಟಿಗೂ ಹೆಚ್ಚು. ಇದರ ಜೊತೆಯಲ್ಲಿ ವಿವಿಧ ಸಚಿವಾಲಯಗಳಲ್ಲಿ, ವಿಭಾಗಗಳಲ್ಲಿ ಮತ್ತು ಪಿಎಸ್ ಯುಗಳಲ್ಲಿ ಲಭ್ಯವಿರುವ ಹೆಚ್ಚುವರಿ ಸಾರ್ವಜನಿಕ ಭೂಮಿಯ ಮೌಲ್ಯ ರೂ 340 ಲಕ್ಷ ಕೋಟಿಗೂ ಹೆಚ್ಚು.

ಸಂರಕ್ಷಿಸಿರುವ 20 ಶೇಕಡಾ ಖನಿಜ ಸಂಪತ್ತು ಮತ್ತು ಹೆಚ್ಚುವರಿ ಸಾರ್ವಜನಿಕ ಭೂಮಿಯ ಮೌಲ್ಯವನ್ನು ಸೇರಿಸಿದಾಗ ಭಾರತವು ರೂ 1340 ಲಕ್ಷ ಕೋಟಿ ಸಂಪತ್ತನ್ನು ಹೊಂದುತ್ತದೆ. ಈ ಮೊತ್ತ ಪ್ರತಿ ಭಾರತೀಯ ಕುಟುಂಬಕ್ಕೆ ಪ್ರತಿ ವರ್ಷಕ್ಕೆ ರೂ ಒಂದು ಲಕ್ಷದಂತೆ 50 ವರ್ಷದವರೆಗೂ ನೀಡಲು ಸಾಕಾಗುತ್ತದೆ.

ನಾವು ಈ ಸಂಪತ್ತಿನ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ಕ್ರೋಢೀಕರಿಸಿ, ನವೀಕರಿಸಿದ ಮಾಹಿತಿಯನ್ನು ನಿರಂತರವಾಗಿ ವಿಕಿಪೀಡಿಯಾದಲ್ಲಿ ನೀಡುತ್ತಿದ್ದೇವೆ. ನೀವು ಕೂಡ ಸಾರ್ವಜನಿಕ ಸಂಪತ್ತಿನ ಬಗೆಗೆ ವಿಕಿಪೀಡಿಯಾದಲ್ಲಿರುವ ಮಾಹಿತಿಯನ್ನು ಶ್ರೀಮಂತಗೊಳಿಸಲು ನಿಮ್ಮ ಕೊಡುಗೆಯನ್ನು ನೀಡಬಹುದು. .

ನಾವು ಭಾರತವನ್ನು ಎರಡು ಚುನಾವಣೆಗಳ ಮಧ್ಯೆ ಇರುವ ಅವಧಿಯಲ್ಲಿಯೇ ಸಮೃದ್ಧಗೊಳಿಸಬಹುದು. ಅದಕ್ಕೆ ತಲೆಮಾರುಗಳವರೆಗೆ ಕಾಯಬೇಕಿಲ್ಲ, 130 ಕೋಟಿ ಭಾರತೀಯರ ಭವಿಷ್ಯ ನಾವು ಇಂದು ಏನು ಮಾಡುತ್ತೇವೆಯೋ ಅದರ ಮೇಲೆ ನಿರ್ಧರಿತವಾಗುತ್ತದೆ. ಹೀಗಾಗಿ ನಾವು ಇನ್ನೂ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುವುದು

ರಾಜೇಶ್ ಜೈನ್

ನಯೀ ದಿಶಾ ಚಳುವಳಿಗೆ ಸೇರಿ

ಹೆಚ್ಚಿನ ಪ್ರಶ್ನೆಗಳಿವೆಯೇ? ಭೇಟಿ ನೀಡಿ FAQ.