ಭಾರತಕ್ಕೆ ಸಮೃದ್ಧಿಯ ಕ್ರಾಂತಿಯ ಅಗತ್ಯವಿದೆ

ಕಳೆದ ಕೆಲವು ವರ್ಷಗಳಿಂದ, ನಾವು ಭಾರತೀಯರು 10 ಪಟ್ಟು ಶ್ರೀಮಂತರು ಏಕೆ ಆಗಲಿಲ್ಲವೆಂದು? ಆಲೋಚಿಸಲು ಹೆಚ್ಚು ಸಮಯವನ್ನು ಕಳೆಯುತ್ತಿದೆ.

ಬಹಳ ಹಿಂದೆ ಸಿಂಗಾಪೂರ್, ದಕ್ಷಿಣ ಕೊರಿಯಾ ಮತ್ತು ಚೀನಾದಂತಹ ದೇಶಗಳು ಭಾರತದಂತೆಯೇ ಸಮಾನ ಆದಾಯವನ್ನು ಗಳಿಸುತ್ತಿದ್ದವು. ಇಂದು ಸರಾಸರಿ ಭಾರತೀಯನಿಗಿಂತ ಸರಾಸರಿ ಸಿಂಗಪೂರ್ ವಾಸಿಯು 35 ಪಟ್ಟು ಶ್ರೀಮಂತನಾಗಿರುವ ಜೊತೆಗೆ, ನಾವು ಸರಾಸರಿ ರೇಖೆಯ ಕೆಳಗಿದ್ದೇವೆ. ಏಕೆ?

ನಮ್ಮ ಶೈಕ್ಷಣಿಕ ವ್ಯವಸ್ಥೆ ನಮ್ಮನ್ನು ಏಕೆ ವಿಫಲವಾಗಿಸಿದೆ? ನೀವು ಯುವಕರಾಗಿದ್ದು 10,000 (ನಿಮ್ಮ ವಯಸ್ಸಿನ 2.5 ಕೋಟಿ ಇತರು) ದ ಮೇಲ್ಭಾಗದಲ್ಲಿಲ್ಲ, ಭಾರತದಲ್ಲಿ ನೀವು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿಲ್ಲ. ನಿಮ್ಮನ್ನು ವಿದೇಶದಲ್ಲಿರುವ ಕಾಲೇಜಿಗೆ ಕಳುಹಿಸಲು ನಿಮ್ಮ ಪೋಷಕರು ರೂ 1 ಕೋಟಿಯನ್ನು ಉಳಿಸದೇ ಇದ್ದರೆ, ನಿಮ್ಮ ಭವಿಷ್ಯದ ಗತಿ ಏನು? ನೀವು ಗ್ರಾಮೀಣ ಭಾರತದಲ್ಲಿ ಹುಟ್ಟಿದ್ದರೆ, ನಿಮ್ಮ ಭವಿಷ್ಯವು ಇನ್ನಷ್ಟು ಮಂಕಾಗಿ ಹೋಗಬಹುದು.

ನೀವು ಭಾರತದಲ್ಲಿ ಒಳ್ಳೆಯ ಗುಣಮಟ್ಟದ ವಿದ್ಯಾಭ್ಯಾಸವನ್ನೇ ಪಡೆದುಕೊಂಡಿರಿ. ಒಳ್ಳೆಯ ಉದ್ಯೋಗವನ್ನು ಹುಡುಕುವ ಸಾಧ್ಯತೆಗಳೇನು? ಉದ್ಯೋಗ ಎಲ್ಲಿದೆ? ಖಾಸಗಿ ಸಂಸ್ಥೆಗಳು ಸಾಕಷ್ಟು ಹಣ ಹೂಡಿಕೆ ಮಾಡುತ್ತಿಲ್ಲ. ಅವರು ಮಾಡಿದರೂ ಯಂತ್ರ ಕಲಿಕೆ ಇಲ್ಲವೇ ಕೃತಕ ಬುದ್ಧಿವಂತಿಕೆ ಮತ್ತು ರೊಬೋಟ್‌ಗಳ ಮೇಲೆ ಹೂಡುತ್ತಾರೆ. ನಮ್ಮ ಅಮೇರಿಕನ್ನರು, ಜರ್ಮನರು ಅಥವಾ ಚೀನೀಯರ ಪ್ರತಿರೂಪಿಗಳಂತೆ ಅವರಿಂದ ಕಡಿಮೆ ಬುದ್ಧಿವಂತರೇನಲ್ಲ. ಹಾಗಿದ್ದರೂ ನಮ್ಮ ಭವಿಷ್ಯ ಏಕೆ ಉಜ್ವಲವಾಗಿಲ್ಲ?

ನಮ್ಮ ಬಳಿ ಎರಡು ಆಯ್ಕೆಗಳಿವೆ. ವಿಶ್ವದಲ್ಲಿರುವ ಕ್ಷುಲ್ಲಕ ಸಮಸ್ಯೆಗಳನ್ನು ಚರ್ಚಿಸುವುದನ್ನು ನಾವು ಮುಂದುವರಿಸಬಹುದು. ಭಾರತಕ್ಕೆ ರಾಮ ಮಂದಿರ ಬೇಕೇ ಬೇಡವೇ ಎಂಬುದನ್ನು ನಾವು ಚರ್ಚಿಸಬಹುದು. ಭಯಾನಕ ಶಿಕ್ಷಣ ವ್ಯವಸ್ಥೆಯಲ್ಲಿ ಅಥವಾ ಗುಮಾಸ್ತ ಮತ್ತು ಕಸ ಗುಡಿಸುವ ಉದ್ಯೋಗಗಳಲ್ಲಿ ನಮಗೆ ಹಚ್ಚಿನ ಕೋಟಾ ಬೇಕೆ ಎಂಬುದನ್ನು ಚರ್ಚಿಸಬಹುದು. ಯಾರಿಗೆ ಕೃಷಿ ಸಾಲಗಳ ಅಗತ್ಯವಿದೆ ಎಂಬುದನ್ನು ನಮಗೆ ಚರ್ಚಿಸಬಹುದು.

ನಾವು ಸಮೃದ್ಧಿಯ ಕುರಿತಾಗಿ ಚರ್ಚಿಸಬುದು. ನಾವು ಹೇಗೆ ಶ್ರೀಮಂತರಾಗುವುದು ಎಂಬುದನ್ನು ನಾವು ಯಾವಾಗ ಚರ್ಚಿಸುತ್ತೇವೆ? ಬಡತನವೇ ಇಲ್ಲವೆಂಬ ನಂಬಿಕೆಯಿಂದ, ನಮ್ಮ ಹಣೆಬರಹದಿಂದ ನಾವು ಯಾವಾಗ ಹೊರಗೆ ಬರುತ್ತೇವೆ?

ಈಗಲೇ ಸಾಕಷ್ಟಾಗಿದೆ. ಪ್ರಗತಿ ಬದಲಾವಣೆಯು ಅದನ್ನು ಇನ್ನಷ್ಟು ಕತ್ತರಿಸುವುದಿಲ್ಲ. ಭಾರತಕ್ಕೆ ಕ್ರಾಂತಿ ಬೇಕಾಗಿದೆ. ‘ಭಾರತ ಸರ್ಕಾರ’ ಎಂಬ ಹೆಸರಿನಲ್ಲಿ ಚಾಲನೆಯಲ್ಲಿರುವ ವಿಶ್ವದ ಅತಿ ದೊಡ್ಡ ಸಂಸ್ಕರಣ ವಿರೋಧಿ ಯಂತ್ರವನ್ನು ನಾಶಪಡಿಸುವ ರಾಜಕೀಯ ಮತ್ತು ಆರ್ಥಿಕ ಕ್ರಾಂತಿ.

ವಿಷಯಗಳನ್ನು ಹೊಸ ವಿಧಾನದಲ್ಲಿ ಕಾರ್ಯಗತಗೊಳಿಸುವುದು ಮತ್ತು ಹೊಸ ದಿಕ್ಕಿನಲ್ಲಿ ಆರಂಭಿಸುವುದು ಮಾತ್ರವೇ ಭಾರತೀಯನನ್ನು ಮುಂದಿನ ಹತ್ತು ವರ್ಷಗಳಲ್ಲಿ ಹತ್ತು ಪಟ್ಟು ಶ್ರೀಮಂತರನ್ನಾಗಿಸುತ್ತದೆ. ನಾವು ಕೈಗೊಳ್ಳಬೇಕಾದ ಪ್ರಯಾಣದಲ್ಲಿ ನಾವೇ ಪ್ರಮುಖ ವ್ಯಕ್ತಿಯಾಗಿದ್ದೇವೆ. ನನ್ನ ಮುಂದಿನ ಪೋಸ್ಟ್‌ಗಳಲ್ಲಿ ಈ ಕುರಿತು ನಾನು ಇನ್ನಷ್ಟು ಹೆಚ್ಚು ಬರೆಯುತ್ತೇನೆ.