ಸಮೃದ್ಧ ಭವಿಷ್ಯದೆಡೆಗೆ / ಶ್ರೀಮಂತ ನಾಳೆಯೆಡೆಗೆ.

ನಯೀ ದಿಶಾ (ಹೊಸ ದಿಕ್ಕು): ಸಮೃದ್ಧ ಭಾರತ ನಿರ್ಮಾಣದತ್ತ ಹೊಸ ಹೆಜ್ಜೆ

ರಾಜೇಶ್ ಜೈನ್

ಬಡತನವು ನಮ್ಮ ಹಣೆಬರಹವೇನಲ್ಲ. ಈಗಾಗಲೇ ಭಾರತವು ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಿರಬೇಕಿತ್ತು. ಆದರೆ ಹಾಗಾಗಲಿಲ್ಲ. ನಮ್ಮ ದೇಶವನ್ನು ಶ್ರೀಮಂತ ಮತ್ತು ಆಧುನಿಕ ರಾಷ್ಟ್ರವನ್ನಾಗಿ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಭಾರತೀಯರಲ್ಲಿ ಸಂಪತ್ತನ್ನು ಸೃಷ್ಟಿಸುವ ಎಲ್ಲ ಸಾಮರ್ಥ್ಯವು ಇದೆಯೆಂದು ಇಲ್ಲಿಂದ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿರುವ ಭಾರತೀಯರು ತೋರಿಸಿಕೊಟ್ಟಿದ್ದಾರೆ. ಭಾರತದಲ್ಲಿನ ಅಸಮರ್ಥವಾದ ಆಡಳಿತ, ಮುಂದಾಲೋಚನೆಯಿಲ್ಲದ ನಾಯಕತ್ವ ಮತ್ತು ದುರ್ಬಲವಾದ ನೀತಿಗಳೇ ದೇಶದಲ್ಲಿ ಸಂಪತ್ತನ್ನು ಉತ್ಪಾದಿಸುವಲ್ಲಿ ವಿಫಲವಾದ ಪ್ರಾಥಮಿಕ ಕಾರಣಗಳು. ಈ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ತೆಗೆದುಕೊಂಡು, ನಾವೆಲ್ಲರೂ ಇಂದು ಹೊಸ ಮಾದರಿಯ ಆಡಳಿತ ಮತ್ತು ರಾಜಕೀಯದೊಂದಿಗೆ ದೇಶದ ಅಭಿವೃದ್ಧಿಯ ದಿಕ್ಕನ್ನು ಬದಲಾಯಿಸಿದ್ದೇವೆ.

ತಂತ್ರಜ್ಞಾನ ಉದ್ಯಮಶೀಲ ಹಾಗೂ ಏಷ್ಯಾ ಖಂಡದ ಡಾಟ್ ಕಾಂ ಕ್ರಾಂತಿಯ ಹರಿಕಾರ. 1990ರ ದಶಕದ ಕೊನೆಯ ವೇಳೆಗೆ ಭಾರತದ ಪ್ರಪ್ರಥಮ ಅಂತರ್ಜಾಲ ತಾಣಗಳನ್ನು ಸೃಷ್ಟಿಸುವುದರ ಜೊತೆಗೆ ಭಾರತದ ಈಗಿನ ಅತಿ ದೊಡ್ಡ ಡಿಜಿಟಲ್ ಮಾರುಕಟ್ಟೆ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ. ಉದ್ಯಮಿಯಾಗಿ ನನ್ನ ಪ್ರಯಾಣ ಸಾಗುತ್ತಲಿರುತ್ತದೆ, ಆದರ ಜೊತೆಗೆ ನಾನೀಗ ಒಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದೇನೆ-ಅದೇ ದೇಶ ಕಟ್ಟುವ ಕೆಲಸ. ದೇಶ ಇನ್ನೊಂದು ಜಗತ್ತಿನೆಡೆಗೆ ಮುನ್ನಡಿಯಿಡಬೇಕು ಎಂದು ನಾನು ಬಲವಾಗಿ ನಂಬಿದ್ದೇನೆ. ಈ ಪ್ರಕ್ರಿಯೆಯಲ್ಲಿ ಹೊಸ ಕ್ರಾಂತಿಯ ಹರಿಕಾರರು ನಾವಗಬೇಕು.

***

1. ಭಾರತ ಇನ್ನೂ ಏಕೆ ಬಡತನದಲ್ಲಿದೆ?

Election after election, governments after governments, it is fairly clear that all are basically the same. They focus on grabbing power, winning the next election, and growing the size and scope of government at the cost of people. Elections are won by those who can talk the good talk but when it comes to implementing good policies, they all fail consistently.

ದೇಶವನ್ನು ಸಮೃದ್ಧಿಯೆಡೆಗೆ ಕೊಂಡೊಯ್ಯಲು ಜನರಿಂದ ಮಾತ್ರ ಸಾಧ್ಯ.ಒಂದೆಡೆ ಸರ್ಕಾರವು ಸಂಪತ್ತನ್ನು ಸೃಷ್ಟಿಸಲು ಜನರಿಗೆ ಅನುವು ಮಾಡಿಕೊಡುವ ಪರಿಸರವನ್ನು ಒದಗಿದರೆ, ಅದೇ ಇನ್ನೊಂದೆಡೆ ಬುರೋಕ್ರೆಟಿಕ್ ರೆಡ್ ಟೇಪ್, ಭ್ರಷ್ಟಾಚಾರ ಮತ್ತು ಹೆಚ್ಚಿನ ತೆರಿಗೆಗಳ ಮೂಲಕ ಜನರನ್ನು ಸುಮ್ಮನೆ ಕೈ ಕಟ್ಟಿ ಕೂರುವಂತೆ ಮಾಡಿ ಸಂಪತ್ತಿನ ಸೃಷ್ಟಿಯನ್ನು ಸಕ್ರಿಯವಾಗಿ ತಡೆಯುತ್ತಿದೆ. ಭಾರತೀಯ ಸರಕಾರದ 'ಲೈಸೆನ್ಸ್ ಪರ್ಮಿಟ್ ಕೋಟ ಕಂಟ್ರೋಲ್ ರಾಜ್' ವ್ಯವಸ್ಥೆಯು ಭಾರತವನ್ನು ಬಡತನಕ್ಕೆ ತಳ್ಳಿದೆ. ಸ್ವಾತಂತ್ರ ಸಿಗುವ ಮೊದಲು ಬ್ರಿಟಿಷ್ ಸರ್ಕಾರವು ಸಹ ಭಾರತೀಯರನ್ನು ಬಡತನಕ್ಕೆ ಹೀಗೇ ತಳ್ಳಿತ್ತು.

ನಾವು ಇಂದು ಏನು ಮಾಡುತ್ತಿದ್ದೇವೆ ಎಂಬುದರ ಮೇಲೆ 130 ಕೋಟಿ ಭಾರತೀಯರ ಜೀವನದ ಸುಧಾರಣೆ ಅವಲಂಬಿತವಾಗಿದೆ. ನಾವಿನ್ನು ಹೆಚ್ಚು ಸಮಯ ವ್ಯರ್ಥ ಮಾಡದೆ, ನಾವು ಭಾರತವನ್ನು ಸರಕಾರದ ಕವಚದಿಂದ ಮುಕ್ತಗೊಳಿಸಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕು. ಮುಂದೊಂದು ದಿನ ನಮ್ಮ ಮಕ್ಕಳಿಗೆ "ನಾವು ಭಾರತವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಲು ಏನೆಲ್ಲಾ ಮಾಡಲು ಸಾಧ್ಯವೋ, ಎಲ್ಲವನ್ನೂ ಮಾಡಿದೆವು." ಎಂದು ಹೆಮ್ಮೆಯಿಂದ ಹೇಳಬಹುದು.

***

2. ಭಾರತದ ಸರ್ಕಾರವು ದೇಶದ ಬಡತನಕ್ಕೆ ಹೇಗೆ ಕಾರಣವಾಗಿದೆ?

ಭಾರತೀಯರಿಗೆ ಸ್ವಾತಂತ್ರ್ಯ ಇಲ್ಲ. ಜನರು ಜಾತಿ, ಧರ್ಮ ಮತ್ತು ವರ್ಗಗಳಿಂದ ಬೇರ್ಪಡಿಸಲ್ಪಟ್ಟಿದ್ದಾರೆ. ಮತ್ತು ಸರ್ಕಾರವು ಅನಗತ್ಯವಾಗಿ ಮಧ್ಯಪ್ರವೇಶಿಸಿ ಆರ್ಥಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತದೆ . ಸರ್ಕಾರವು ಜನರನ್ನು ಗಮನದಲ್ಲಿಟ್ಟುಕೊಳ್ಳದೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಸರಿಯಾದ ಸಮಯದಲ್ಲಿ ನ್ಯಾಯವು ಸಿಗುವುದಿಲ್ಲ. ಸಾರ್ವಜನಿಕ ಸಂಪತ್ತಿನ ನಿಯಂತ್ರಣ , ನಿಂದನೆ ಮತ್ತು ದುರ್ಬಳಕೆ ಸರ್ಕಾರದಿಂದ ಆಗುತ್ತಿದೆ , ಹೀಗಿರುವಾಗ ಭಾರತೀಯರು ಬಡವರಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಸಂಖ್ಯೆಗಳು ವಿಷಾದಕರ ಕಥೆಯನ್ನು ಹೇಳುತ್ತವೆ. 92% ರಷ್ಟು ಭಾರತೀಯ ಕುಟುಂಬಗಳು ₹ 6.5 ಲಕ್ಷಕ್ಕಿಂತ ಕಡಿಮೆ ಸಂಪಾದನೆಯನ್ನು ಹೊಂದಿವೆ. ಮಧ್ಯಮ ಭಾರತೀಯ ಮನೆಯು ಕೇವಲ ₹ 1.2 ಲಕ್ಷ ವಾರ್ಷಿಕ ಅಥವಾ ತಿಂಗಳಿಗೆ ಸುಮಾರು ₹ 10,000 ಆದಾಯವನ್ನು ಹೊಂದಿದೆ. ಐಎಂಎಫ್ನ ಜಿಡಿಪಿ ರಾಂಕಿಂಗ್ನಲ್ಲಿ, ಭಾರತವು 200 ದೇಶಗಳಲ್ಲಿ126ನೇಯ ಸ್ಥಾನದಲ್ಲಿದೆ. ಸ್ವಾತಂತ್ರ್ಯದ ಭಾರತದ 30 ಕೋಟಿ ಜನರು ಇನ್ನೂ ಬಡತನದಲ್ಲಿ ವಾಸಿಸುತ್ತಿದ್ದಾರೆ. ಭಾರತದ 5 ನೇ ತರಗತಿಯಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು 2 ನೇ ತರಗತಿಯ ಮಟ್ಟದಲ್ಲಿ ಓದುವುದಿಲ್ಲ. ತಮ್ಮ 20ರ ದಶಕದಲ್ಲಿ ಸುಮಾರು 30 ಕೋಟಿ ಯುವಕರನ್ನು ಹೊಂದಿರುವ ದೇಶದಲ್ಲಿ ಉದ್ಯೋಗ ಸೃಷ್ಟಿ ಬಹುತೇಕ ನಿಂತಿದೆ. 60 ಕೋಟಿ ಭಾರತೀಯ ಮಧ್ಯಮ ವರ್ಗದವರು ದಿನಕ್ಕೆ ಕೇವಲ ₹ 130- ₹ 650ಗಳಿಂದ ಜೀವನ ಸಾಗಿಸುತ್ತಿದ್ದಾರೆ.

ಭಾರತವು ಕಳಪೆಯಾಗಿ ಪ್ರದರ್ಶನ ನೀಡಿರುವುದನ್ನು ಹ್ಯೂಮನ್ ಡೆವಲಪ್ಮೆಂಟ್ನಿಂದ ಹಿಡಿದು ಬಿಸಿನೆಸ್ ಮಾಡುವ ತನಕದ ಪ್ರತಿಯೊಂದು ಸೂಚ್ಯಂಕದಲ್ಲಿ ತೋರಿಸಲಾಗಿದೆ.. ಆಳವಾದ ಮತ್ತು ದೋಷಪೂರಿತ ಸರ್ಕಾರಿ ಮಧ್ಯಸ್ಥಿಕೆಗಳೊಂದೇ ಎಲ್ಲಾ ಸಂದರ್ಭಗಳಲ್ಲಿ ಮೂಲ ಕಾರಣವಾಗಿದೆ.

ಆಗಾಗ್ಗೆ ಬದಲಾಗುತ್ತಿರುವ ಸರ್ಕಾರಗಳ ಮೂಲಕ ಬಂದಿರುವ ದಶಕಗಳ ಕೆಟ್ಟ ನೀತಿಗಳೇ ಸಮೃದ್ಧಿಯ ಕೊರತೆಗೆ ಕಾರಣ. ತಮ್ಮ ಆಸ್ತಿಗಳಿಂದ ಹಣಗಳಿಸಲಾಗದಿರುವುದು , ಉದ್ಯೋಗಕ್ಕೆ ಸಾಲ ಸಿಗದಿರುವುದೇ ಜನರನ್ನು ಬಡತನದಲ್ಲಿ ಬಂದಿಸಿಟ್ಟಿದೆ. ಜನರು ಸಂಪಾದಿಸುವ ಮತ್ತು ಖರ್ಚು ಮಾಡುವ ಹಣದ ಮೊತ್ತದಲ್ಲಿ ತೆರಿಗೆಯೇ ಗಮನಾರ್ಹವಾದ ಭಾಗವನ್ನು ತೆಗೆದುಕೊಳ್ಳುತ್ತದೆ.

ಅಸಮಾನವಾಗಿ ಪರಿಗಣಿಸುತ್ತಾರೆ. ಸೌಲಭ್ಯಗಳು ಧಾರ್ಮಿಕ, ಜಾತಿ, ಇತ್ಯಾದಿಗಳ ಗುಂಪುಗಳನ್ನು ಆಧರಿಸಿವೆ . ಕೆಲವರು ಹೆಚ್ಚಿನ ತೆರಿಗೆ ಕಟ್ಟಬೇಕಾಗುತ್ತದೆ. ಇದಲ್ಲದೆ ಉದ್ಯೋಗಗಳು ಮತ್ತು ಸಾರ್ವಜನಿಕ ನೆರವು ಪಡೆಯುವಲ್ಲಿ ಜನರು ತಾರತಮ್ಯವನ್ನು ಎದುರಿಸುತ್ತಾರೆ.

ಭಾರತೀಯರ ವೈಯಕ್ತಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಬ್ರಿಟಿಷ್ ರಾಜ್ ಕಾನೂನುಗಳು ಯಾವುದೇ ಬದಲಾವಣೆಯಿಲ್ಲದೆ ಇನ್ನೂ ಜಾರಿಯಲ್ಲಿದೆ. ಖಾಸಗಿ ಆಸ್ತಿ ಒಂದು ಮೂಲಭೂತ ಹಕ್ಕು ಅಲ್ಲ - ಅದೊಂದು ರಾಜಕೀಯ ಖಯಾಲಿಯಿರುವ ಕಾನ್ಸ್ಟಿಟ್ಯೂಷನಲ್ ರೈಟ್.

ಭಾರತೀಯರನ್ನು ಸೆಳೆಯಲು, ಬಳಸಿಕೊಳ್ಳಲು, ವಿಭಜಿಸಲು ಮತ್ತು ಮೂಕಗೊಳಿಸಲು ಬ್ರಿಟಿಷ್ ರಾಜ್ ಕಾನೂನುಗಳನ್ನು ಜಾರಿಗೆ ತರಲಾಯಿತು. ಇಂತಹ ಅನೇಕ ಕಾನೂನುಗಳು ಇನ್ನೂ ಜಾರಿಯಲ್ಲಿವೆ. ವಾಸ್ತವವಾಗಿ, ಸಂವಿಧಾನದ 395 ಆರ್ಟಿಕಲ್ಸ್ಗಳಲ್ಲಿ 242 ಆರ್ಟಿಕಲ್ಸ್‌ಗಳನ್ನು ನೇರವಾಗಿ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಲ್ಟ್‌ನಿಂದ ತೆಗೆದುಕೊಳ್ಳಲ್ಪಟ್ಟಿದೆ.

ಕಳೆದ 70 ವರ್ಷಗಳಲ್ಲಿ, ಸರ್ಕಾರವು ಆರ್ಥಿಕತೆಯಲ್ಲಿ ಮತ್ತೆ ಮತ್ತೆ ಮದ್ಯೆ ಪ್ರವೇಶಿಸಿ ಬಹುತೇಕ ಜನರ ನೆಮ್ಮದಿಯನ್ನು ಹಾಳುಮಾಡಿದೆ. ಹಣವನ್ನು ಕಳೆಯುವಂತಹ ನೂರಾರು ವ್ಯವಹಾರಗಳಲ್ಲಿ ಭಾಗವಹಿಸಿದೆ ಮತ್ತು ಇದರಿಂದ ತೆರಿಗೆದಾರರಿಗೆ ಸಮಸ್ಯೆ ಉಂಟಾಗಿದೆ. ಸರ್ಕಾರವು ವಿಮಾನಯಾನ, ರೈಲ್ವೆ, ವಿದ್ಯುತ್ ಉತ್ಪಾದನೆ, ತೈಲ ಮತ್ತು ನೈಸರ್ಗಿಕ ಅನಿಲ, ಭಾರೀ ಯಂತ್ರೋಪಕರಣಗಳು, ದೂರಸಂಪರ್ಕ, ಶಿಕ್ಷಣ, ಇತ್ಯಾದಿ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದೆ. ದೇಶದ ಭೂ ಆಸ್ತಿಯ ಬಹಳಷ್ಟು ಭಾಗ ಸರ್ಕಾರದ ಹಿಡಿತದಲ್ಲಿದೆ. ಜಮೀನು ಮತ್ತು ಇತರ ಆಸ್ತಿಗಳು ಕಡಿಮೆ ಬಳಕೆಯಾಗುತ್ತಿರುವುದರಿಂದ ಯಾವುದೇ ಉತ್ಪಾದನೆಯಿಲ್ಲ.

ಈ 5 ಕಂಪೆನಿಗಳಿಂದಾದ ನಾಶವನ್ನು ತುಂಬಲು ಭಾರತದ ಪ್ರತಿ ಕುಟುಂಬವು 4 ಸಾವಿರ ರೂಪಾಯಿಗಳನ್ನು ಕಟ್ಟಲು ಬಲವಂತ ಪಡಿಸಲಾಗುತ್ತಿದೆ. ಪ್ರತಿಸಲವೂ ನಷ್ಟವನ್ನು ಅನುಭವಿಸುವ ಇನ್ನೂ ಹಲವಾರು ಕೇಂದ್ರ ಮತ್ತು ರಾಜ್ಯದ ಕಂಪನಿಗಳಿವೆ.

ಸರಕಾರವು ಅನಗತ್ಯವಾಗಿ ಕೆಲವು ಕ್ಷೇತ್ರಗಲ್ಲಿ ಮಧ್ಯೆ ಪ್ರವೇಶಿಸಿ ರಾಷ್ಟ್ರೀಯ ಲಾಭಕ್ಕೆ ಹಾನಿಯನ್ನುಟ್ಟು ಮಾಡುತ್ತಿದೆ. ಈಗಿರುವುದೊಂದು ಗರಿಷ್ಟ ಸರ್ಕಾರ ಮ್ಯಾಕ್ಸಿಮಲ್ ಗವರ್ನಮೆಂಟ್). ಭಾರತೀಯರ ಏಳಿಗೆಗೆ ದೇಶವು ಕನಿಷ್ಠ ಸರ್ಕಾರ (ಮಿನಿಮಲ್ ಗವರ್ನಮೆಂಟ್)ವಾಗ ಬೇಕು.

***

3. ಆಡಳಿತಗಾರರು ಬದಲಾದರೂ ಪಲಿತಾಂಶವೇಕೆ ಬದಲಾಗುತ್ತಿಲ್ಲ?

ರಾಜಕೀಯ ಪಕ್ಷಗಳು ಮತ್ತು ಅಧಿಕಾರದ ಮುಖಂಡರು ಭಾರತವನ್ನು ಏಳಿಗೆಯೆಡೆಗೆ ಕೊಂಡೊಯ್ಯುವ ಬಗ್ಗೆ ಬಹಳ ಕಡಿಮೆ ಅಥವಾ ಉತ್ಸಾಹವನ್ನೇ ಹೊಂದಿಲ್ಲ ಆಡಳಿತಗಾರರು ಕೇವಲ ಸುಲಿಗೆ ಮತ್ತು ಶೋಷಣೆ ಮಾಡುವದರಲ್ಲೇ ಮುಳುಗಿದ್ದಾರೆ. ಭಾರತೀಯರನ್ನು ಬಡವರನ್ನಾಗಿರಿಸಿಕೊಂಡು ಅಧಿಕಾರದಲ್ಲಿ ಉಳಿಯುವುದೊಂದೇ ಅವರ ಏಕೈಕ ಉದ್ದೇಶ ಮತ್ತು ಆಶ್ವಾಸನೆಗಳಿಂದ ಮತಗಳನ್ನು ಪಡೆಯುವುದೊಂದೇ ಅವರ ಗುರಿ. ಭಾರತೀಯರ ಅಭ್ಯುದಯವು ಅವರ ಉದ್ದೇಶವಲ್ಲ. ಎಲ್ಲಾ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳಾದ್ಯಂತ ಬಡವರಿಗಾಗಿ ರಚಿಸಿದ ಆರ್ಥಿಕ ನೀತಿಗಳು ಬಡವರಿಗೆ ಅನುಕೂಲಕರವಾಗಿರದೆ ವಿರೋಧವಾಗಿವೆ..

ಚುನಾವಣೆಯ ಸಮಯದಲ್ಲಿನ ಪ್ರಚಾರದ ಜೊತೆಗೆ ಮತದಾನವು ಉಪನಾಮ, ಜಾತಿ, ಕೋಟಾಗಳು, ಸಬ್ಸಿಡಿಗಳನ್ನು ಅವಲಂಬಿಸಿದೆ. ಭಾರತೀಯರನ್ನು ಯಾವಾಗಲೂ ವಿರುದ್ಧ ದಿಕ್ಕಿಗೆ ಕೊಂಡೊಯ್ಯುವ ನೀತಿಗಳಿರುವುದರಿಂದ ಅಭಿವೃದ್ಧಿಯ ಭರವಸೆಯಿದ್ದರೂ ಸಾಧಿಸಲಾಗುವುದಿಲ್ಲ. ಬಹುತೇಕ ಭಾರತೀಯರು ಬಡವರಾಗಿಯೇ ಉಳಿದು ರಾಜಕಾರಿಣಿಗಳು ಮತ್ತು ಅಧಿಕಾರಿಗಳು ಶ್ರೀಮಂತರಾಗಿದ್ದಾರೆ.

ಭಾರತದ ಆಡಳಿತಗಾರರು ಬದಲಾದರೂ ನಿಯಮಗಳು ಬದಲಾಗಲಿಲ್ಲ ಮತ್ತು ನಿಯಮಗಳನ್ನು ಬದಲಾಯಿಸದೆ, ಫಲಿತಾಂಶಗಳು ಬದಲಾಗುವುದಿಲ್ಲ.

ಬದಲಾವಣೆ ಸಮಯ ತೆಗೆದುಕೊಳ್ಳುತ್ತದೆ, ಆದರೆ ಪ್ರತಿಯೊಬ್ಬರೂ ತಪ್ಪು ದಿಕ್ಕಿನಲ್ಲಿ ಹೋಗುವುದನ್ನು ನಿಲ್ಲಿಸಿ ಮತ್ತು ಸರಿಯಾದ ದಿಕ್ಕಿನಲ್ಲಿ ಚಲಿಸಬೇಕು.

***

4. ಇತರ ರಾಷ್ಟ್ರಗಳೇಕೆ ಶ್ರೀಮಂತವಾಗಿವೆ?

130 ಕೋಟಿ ಜನಸಂಖ್ಯೆಯಲ್ಲಿ 130 ಕೋಟಿಯೂ ಭವಿಷ್ಯವು ಯಾವುದೇ ಚಿಂತೆಯಿಲ್ಲದೆ ಚೆನ್ನಾಗಿರಬೇಕೆಂದು ಕಾಯುತ್ತಿದೆ. ಭಾರತವು ಇನ್ನೂ ಎಷ್ಟು ದೊಡ್ಡ ವಿಜ್ಞಾನಿಗಳು, ಕವಿಗಳು, ಸಾಮಾಜಿಕ ಸುಧಾರಕರು, ಸಂಶೋಧಕರು ಮತ್ತು ಕ್ರೀಡಾ ಚಾಂಪಿಯನ್ನರನ್ನು ಜಗತ್ತಿಗೆ ಕೊಡಬೇಕೆಂದು ಕಾಯುತ್ತಿದೆಯೋ ಯಾರಿಗೆ ಗೊತ್ತು? ಇದಕ್ಕೆ ಏಳಿಗೆಗೆ ಅವಕಾಶವಿರಬೇಕು. ಅವರು ಬಡತನದಲ್ಲಿ ಸಿಕ್ಕಿಬಿದ್ದರೆ ಇದು ಸಂಭವಿಸುವುದಿಲ್ಲ.

1750ರ ಬಹುತೇಕ ಎಲ್ಲರೂ ಬಡವರಾಗಿದ್ದ ಪ್ರಪಂಚಕ್ಕೆ ಹೋಲಿಸಿದರೆ ಇಂದು ಜಗತ್ತು ಅಸಾಧಾರಣವಾಗಿ ಶ್ರೀಮಂತವಾಗಿದೆ. ಆಧುನಿಕ ಜಗತ್ತಿನ ಸಂಪತ್ತಿಗೆ ಕಾರಣವಾದ ಹೊಸ ಕಲ್ಪನೆಗಳ ಗಣವು - ಜ್ಞಾನೋದಯ ಎಂದು ಕರೆಯಲ್ಪಡುತ್ತದೆ. ಇದರಿಂದ ಪಶ್ಚಿಮ ರಾಷ್ಟ್ರಗಳಲ್ಲಿ ಇಂಡಸ್ಟ್ರಿಯಲ್ ರೆವೊಲ್ಯೂಷನ್ ಆಗಿ ಶ್ರೀಮಂತವಾದವು. ಸಿಂಗಪುರ್, ದಕ್ಷಿಣ ಕೊರಿಯಾ ಮತ್ತು ಚೀನಾ ಮುಂತಾದ ಇತರ ದೇಶಗಳು ಕಳೆದ ಕೆಲವು ದಶಕಗಳಲ್ಲಿ ತಮ್ಮ ನಾಗರಿಕರನ್ನು ಸಮೃದ್ಧಿಯತ್ತ ತ್ವರಿತ ಪಥದಲ್ಲಿ ಇರಿಸಿಕೊಂಡಿದ್ದಾರೆ ಆದರೆ ಭಾರತೀಯರು ಇನ್ನೂ ಬಡವರಾಗಿಯೇ ಇದ್ದಾರೆ.

ಜನರಿಗೆ ಬೇಕಾದ ಸಮೃದ್ಧಿಯನ್ನು ಸೃಷ್ಟಿಸುವಲ್ಲಿ ಭಾರತವು ಇತರೆ ಏಶಿಯನ್ ಕಂಟ್ರಿಗಳಿಗಿಂತ ಬಹಳ ಹಿಂದೆಯಿದೆ. ನಾವು 10 ಪಟ್ಟು ಹೆಚ್ಚು ಶ್ರೀಮಂತರಾಗಿಲ್ಲವೇಕೆ? ಎಂಬ ಪ್ರಶ್ನೆಯನ್ನು ನನ್ನ ಸರ್ಕಾರವನ್ನು ಕೇಳಬೇಕಿದೆ?

ಜನರಿಗೆ ಯಾವಾಗ ತಮಗೆ ಬೇಕಾದದ್ದನ್ನು ಬೇಕಾದ ರೀತಿಯಲ್ಲಿ ಉತ್ಪಾದಿಸಲು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಸ್ವಾತಂತ್ರ್ಯ ಸಿಗುತ್ತದೋ ಆಗ ಅವರು ಸಂಪತ್ತನ್ನು ಸೃಷ್ಟಿಸುತ್ತಾರೆ. ಆದರೆ ಭಾರತೀಯ ಸರ್ಕಾರದ ನೀತಿಗಳು ಜನರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿದ್ದಾರೆ ಮತ್ತು ಜನರು ಬಡವರಾಗಿಯೇ ಇದ್ದಾರೆ. ಸ್ವತಂತ್ರ ವ್ಯಾಪಾರದ ಪ್ರಯೋಜನಗಳನ್ನು ಪಡೆದಿರುವ ಮತ್ತು ಕಾನೂನುಗಳಿಂದ ರಕ್ಷಿಸಲ್ಪಟ್ಟ ವೈಯಕ್ತಿಕ ಹಕ್ಕುಗಳನ್ನು ಹೊಂದಿರುವ ರಾಷ್ಟ್ರಗಳು ಮಾತ್ರ ಶ್ರೀಮಂತವಾಗುತ್ತಿವೆ. ಭಾರತೀಯರು ಶ್ರೀಮಂತರಾಗಬೇಕೆಂದರೆ ಭಾರತವು ಮುಕ್ತವಾಗಿರಬೇಕು. ಸರ್ಕಾರದ ನಿಯಂತ್ರಣದಿಂದ ಸ್ವಾತಂತ್ರ ಬೇಕೆಂದು ಭಾರತೀಯರು ಪ್ರಶ್ನಿಸಬೇಕು.

ಇದು ನಯೀ ದಿಶಾದ ಮುಖ್ಯ ಗುರಿ.

***

5. ನಯೀ ದಿಶಾ ಭಾರತೀಯರನ್ನು ಹೇಗೆ ಸಮೃದ್ಧಗೊಳಿಸುತ್ತದೆ?

ನಯೀ ದಿಶಾ ಭಾರತವನ್ನು ಸಮೃದ್ಧಗೊಳಿಸುವ ಗುರಿಯನ್ನು ಹೊಂದಿರುವ ಸಮಾನಮನಸ್ಕರೆಲ್ಲರನ್ನೂ ಒಗ್ಗೂಡಿಸುವ ಒಂದು ಅನನ್ಯ ವೇದಿಕೆಯಾಗಿದೆ. ಭಾರತೀಯರನ್ನು ಸ್ವಾತಂತ್ರ್ಯ, ಸಮಾನತೆ ಮತ್ತು ಸಂಪತ್ತು ಸೃಷ್ಟಿಯ ಕಾರ್ಯಸೂಚಿಯಲ್ಲಿ ಒಗ್ಗೂಡಿಸುವುದು ಇದರ ಮುಖ್ಯ ಗುರಿಯಾಗಿದೆ.

ನಯೀ ದಿಶಾದ ಐದು ಸಮೃದ್ಧತೆಯ ತತ್ವಗಳು ಹಾಗು ಐದು ಆರಂಭಿಕ ಪರಿಹಾರೋಪಾಯಗಳು ಭಾರತದ ಆಡಳಿತ ಹಾಗು ರಾಜಕೀಯಕ್ಕೆ ಹೊಸ ಮಾದರಿಯ ಭರವಸೆಯನ್ನು ನೀಡುತ್ತವೆ.

ಸಮೃದ್ಧತೆಯ ತತ್ವಗಳು : ಆಡಳಿತಕ್ಕೊಂದು ಹೊಸ ಮಾದರಿ

ಎಲ್ಲಾ ಯಶಸ್ವಿ ದೇಶಗಳಂತೆ, ಭಾರತವೂ ಮೂಲಭೂತ ತತ್ವಾದರ್ಶಗಳನ್ನು ರೂಪಿಸಿಕೊಂಡು ಅದರ ಮೂಲಕ ವಿನೂತನ ಆಡಳಿತ ಹಾಗು ನೀತಿಗಳನ್ನು ಹುಟ್ಟುಹಾಕಬೇಕು. ಈ ತತ್ವಗಳನ್ನು ಪ್ರತಿ ನಾಗರಿಕರು ಅರ್ಥೈಸಿಕೊಳ್ಳಬೇಕಾದ ಕಾರಣ ಇದು ಸುಲಭವಾಗಿ ಗ್ರಹಿಸುವಂತಿರಬೇಕು ಮತ್ತು ಕಡಿಮೆ ಸಂಖ್ಯೆಯಲ್ಲಿರಬೇಕು. ಈ ಮೂಲಕ ನವ ಭಾರತದ ಕನಸನ್ನು ನನಸಾಗಿಸಲು ಸಾಧ್ಯ.

ನಯೀ ದಿಶಾದ ಸಮೃದ್ಧಿ ತತ್ವಗಳು `ಉತ್ತಮ ಸರ್ಕಾರದ ಆಡಳಿತ ಕಟ್ಟಕಡೆಯ ನಾಗರಿಕನನ್ನೂ ತಲುಪಬೇಕು' ಎಂಬ ನಿಯಮದ ಮೇಲೆ ರೂಪಿತವಾಗಿದೆ. ಇದು ನಾಗರಿಕರನ್ನು ಪ್ರಧಾನ ಸ್ಥಾನದಲ್ಲಿರಿಸಿ, ಸರ್ಕಾರವನ್ನು ಯೋಜನೆಗಳನ್ನು ಕಾರ್ಯಗತಗೊಳಿಸುವ ಮಧ್ಯವರ್ತಿಯನ್ನಾಗಿಸಿ, ಭಾರತವನ್ನು ಉದಾರವಾದಿ, ಸಮೃದ್ಧಶಾಲಿ ಸಮಾಜವಾಗಲು ಸಹಕರಿಸುತ್ತದೆ. ಈ ಎಲ್ಲಾ ನೀತಿಗಳು ಈ ಕೆಳಗಿನ ತತ್ವಗಳನ್ನು ಆಧರಿಸಿವೆ.

1. ಸ್ವಾತಂತ್ರ್ಯ: ಪ್ರತಿಯೊಬ್ಬ ನಾಗರಿಕನು ತನ್ನ ಹುಟ್ಟಿನಿಂದ ಪಡೆದುಕೊಂಡಿರುವ ಸ್ವಾತಂತ್ರ್ಯವನ್ನು ಯಾವುದೇ ಸರಕಾರವೂ ಮೊಟಕುಗೊಳಿಸುವಂತಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ವಾಕ್ ಸ್ವಾತಂತ್ರ್ಯದ ಹಕ್ಕು ಹಾಗು ಆಸ್ತಿ ಸಂಪಾದನೆಯ ಹಕ್ಕನ್ನು ಖಾತ್ರಿಗೊಳಿಸಬೇಕು. ಸರ್ಕಾರವು ಎಲ್ಲರಿಗೂ ಸ್ಫರ್ಧೆಗೆ ಮುಕ್ತ ಹಾಗು ಸಮಾನ ಅವಕಾಶಗಳನ್ನು ಒದಗಿಸಬೇಕು. ಅಂತೆಯೇ ಬೇರೆಯವರ ಹಕ್ಕುಗಳ ಮೇಲೆ ಅತಿಕ್ರಮಣ ಆಗದಂತೆ ಭರವಸೆ, ನಿಗಾ ವಹಿಸಬೇಕು.

2. ತಾರತಮ್ಯವಿರಬಾರದು : ಸರ್ಕಾರವು ನಾಗರಿಕರ ಮಧ್ಯೆ ತಾರತಮ್ಯವನ್ನು ನಿಷೇಧಿಸಿದೆ. ಹೀಗಾಗಿ ಧರ್ಮ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ವಿಶೇಷ ಸ್ಥಾನಮಾನವನ್ನು ಕಲ್ಪಿಸಬಾರದು.

3. ಮಧ್ಯಪ್ರವೇಶ : ನಾಗರಿಕರ ಸ್ವಪ್ರೇರಣಾ ಬದಲಾವಣೆಯಲ್ಲಿ ಸರ್ಕಾರವು ಮೂಗು ತೂರಿಸಬಾರದು. ಸರ್ಕಾರದ ಪಾತ್ರ ಎಲ್ಲರಿಗೂ ಗುಣಮಟ್ಟದ ಅವಕಾಶಗಳನ್ನು ಖಾತ್ರಿಪಡಿಸುವುದೇ ಹೊರತು ಫಲಿತಾಂಶದಲ್ಲಿ ಸಮಾನತೆಯನ್ನು ಹೇರುವುದಲ್ಲ.

4. ಪರಿಮಿತವಾದ ಸರ್ಕಾರ : ಸರ್ಕಾರವು ಯಾವುದೇ ವ್ಯವಹಾರ ಅಥವಾ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಸರ್ಕಾರವು ಇಲ್ಲಿ ತೀರ್ಪುಗಾರ ಹೊರತು ಆಟಗಾರನಲ್ಲ. ಉದಾಹರಣೆಗೆ ಖಾಸಗಿ ವಲಯವು ಸಮರ್ಥವಾಗಿ ನಿಭಾಯಿಸಲಾಗದ ಸಾರ್ವಜನಿಕರ ಮೂಲಭೂತ ಕರ್ತವ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರವು ಕ್ರಮಕೈಗೊಳ್ಳಬೇಕು.

5. ವಿಕೇಂದ್ರೀಕರಣ : ಅನುದಾನ ತತ್ವದಲ್ಲಿ, ಕೇಂದ್ರದ ಅಧಿಕಾರಕ್ಕಿಂತ ಹೆಚ್ಚಾಗಿ ಜನರಿಗೆ ಸಮೀಪವಿರುವ ಸಮರ್ಥ ಅಧಿಕಾರದಿಂದ ಆಡಳಿತ ವಿಷಯಗಳನ್ನು ನಿರ್ವಹಿಸಬೇಕು.

ಆರಂಭಿಕ ಪರಿಹಾರೋಪಾಯಗಳು

ಭಾರತದ ಸಾರ್ವಜನಿಕ ಸಂಪತ್ತನ್ನು (ಭೂಮಿ, ಖನಿಜಗಳು ಹಾಗು ಇತರ ಸಂಪನ್ಮೂಲಗಳು ಮತ್ತು ಸರ್ಕಾರದ ಅಧೀನದಲ್ಲಿರುವ ನಿಗಮಗಳು ಸೇರಿದಂತೆ) ನಯೀ ದಿಶಾ ಅಂದಾಜು ಮಾಡಿದಾಗ ಅದೂ 20 ಟ್ರಿಲಿಯನ್ ಡಾಲರ್ ಗಳಿಗೂ ಮಿಕ್ಕಿದೆ. ಇದನ್ನು ಪ್ರತಿಯೊಂದು ಭಾರತೀಯ ಕುಟುಂಬಕ್ಕೂ ಕನಿಷ್ಠ ರೂಪಾಯಿ 50 ಲಕ್ಷದಂತೆ ಹಂಚಬಹುದು!.

ನಯೀ ದಿಶಾದ ಎರಡು ಮುಖ್ಯ ಪರಿಹಾರೋಪಾಯಗಳು- ವರ್ಷಕ್ಕೊಮ್ಮೆ, ಪ್ರತಿ ಕುಟುಂಬಕ್ಕೆ ರೂಪಾಯಿ ಒಂದು ಲಕ್ಷವನ್ನು ಒದಗಿಸುವುದುಮತ್ತು ಕುಟುಂಬ/ಮನೆಯ ಒಟ್ಟು ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಅದಕ್ಕೆ ಅನುಗುಣವಾಗಿ 10 ಶೇಕಡಾ ತೆರಿಗೆಯನ್ನು ವಸೂಲು ಮಾಡುವುದು. ಈ ರೀತಿ ಹೆಚ್ಚು ಹೆಚ್ಚು ಹಣವನ್ನು ಜನರಿಗೆ ನೀಡುವ ಮೂಲಕ, ಪ್ರತಿಯೊಂದು ಭಾರತೀಯ ಕುಟುಂಬಕ್ಕೆ ಸುರಕ್ಷತೆಯನ್ನು ನೀಡಬಹುದು, ಬಡತನವನ್ನು ನಿರ್ಮೂಲನಗೊಳಿಸಬಹುದು, ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ಈ ಪ್ರಕ್ರಿಯೆ ಸರ್ಕಾರದ ಬೆಳವಣಿಗೆಯನ್ನು ಹಿಮ್ಮಖಗೊಳಿಸುತ್ತದೆ ಮತ್ತು ಭಾರತೀಯರು ಸಂಪತ್ತು ರೂಪಿಸುವ ನಿಟ್ಟಿನಲ್ಲಿ ಅವರನ್ನು ಸಬಲೀಕರಣಗೊಳಿಸುತ್ತದೆ. ಅಲ್ಲದೆ ಇದು ದೇಶದಲ್ಲಿ ಖಾಸಗಿ ಹೂಡಿಕೆ ಮತ್ತು ಆರ್ಥಿಕ ಬೆಳವಣಿಗೆ, ಸಾರ್ವಜನಿಕ ಮೂಲಸೌಕರ್ಯಕ್ಕೆ ಹೆಚ್ಚುವರಿ ಸಂಪನ್ಮೂಲಗಳು ಮತ್ತು ಈಗಾಗಲೇ ಕೊರತೆಯಿರುವ ಕ್ಷೇತ್ರಗಳಲ್ಲಿ ಸಾಮಥ್ರ್ಯವನ್ನು ವೃದ್ಧಿಸುತ್ತದೆ.

ನಯೀ ದಿಶಾದ ಉಳಿದ ಮೂರು ಪರಿಹಾರೋಪಾಯಗಳು ದೇಶದಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸುತ್ತವೆ - ದೇಶದಲ್ಲಿರುವ ಎಲ್ಲಾ ಸಂಪತ್ತಿನ ದಾಖಲೀಕರಣ ಮತ್ತು ಈ ಮೂಲಕ ಜನರು ಅದನ್ನು ತಮ್ಮ ಖಾಸಗಿ ಆಸ್ತಿ ಎಂದು ವಶಪಡಿಸಿಕೊಳ್ಳದಂತೆ ರಕ್ಷಿಸುವುದು, ಸರ್ಕಾರದ ಮೂಲಭೂತ ಚಟುವಟಿಕೆಗಳಲ್ಲಿ ಹೂಡಿಕೆ ಮತ್ತು ಸೂಕ್ತ ಸಮಯದಲ್ಲಿ ನ್ಯಾಯವನ್ನು ನೀಡುವ ಭರವಸೆ ನೀಡುವುದು.

1. ಪ್ರತಿ ಮನೆಗೆ ರೂಪಾಯಿ ಒಂದು ಲಕ್ಷದಂತೆ ಸಾರ್ವತ್ರಿಕವಾಗಿ ಸಂಪತ್ತನ್ನು ಹಿಂತಿರುಗಿಸುವುದು.

ಪ್ರತಿ ಮನೆಗೆ ರೂಪಾಯಿ ಒಂದು ಲಕ್ಷದಂತೆ ಸಾರ್ವತ್ರಿಕವಾಗಿ ಸಂಪತ್ತನ್ನು ಹಿಂತಿರುಗಿಸುವುದು. ಇದು ಪ್ರಸ್ತುತ ಸರ್ಕಾರದ ಅಧೀನದಲ್ಲಿರುವ, ಭಾರತದಲ್ಲಿರುವ ಸಾರ್ವಜನಿಕ ಸಂಪತ್ತಿನಲ್ಲಿ ಪ್ರತಿಯೊಬ್ಬ ಭಾರತೀಯನ ಪಾಲು. ಈ ರೀತಿಯಾಗಿ ಸಾರ್ವಜನಿಕರ ಹಣವನ್ನು ಕಂತುಗಳ ಮೂಲಕ ಹಂಚುವುದರಿಂದ ಸಾರ್ವಜನಿಕರು ಅವರಿಗಾಗಿ ಸಂಪತ್ತು ಸೃಷ್ಟಿಸಿಕೊಳ್ಳುವಲ್ಲಿ ಸಬಲೀಕರಣ ಹೊಂದಿದಂತಾಗುತ್ತದೆ. ತಮ್ಮ ಕೌಶಲ್ಯವೃದ್ಧಿಗಾಗಿ ಅದನ್ನು ಬಳಸಬಹುದು. ತಮ್ಮ ಉದ್ಯೋಗ-ವಹಿವಾಟಿಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸಬಹುದು. ಆಸ್ತಿ ಖರೀದಿಸಬಹುದು, ನಗರಕ್ಕೆ ವಲಸೆ ತೆರಳಿ ತಮ್ಮ ಕನಸಿನ ಉದ್ಯೋಗ ಆರಂಭಿಸಬಹುದು ಇತ್ಯಾದಿ. ಕೆಲವೊಮ್ಮೆ ಅವರಿಗೆ ಇದು ತಮಗೆ ಎದುರಾಗುವ ಅನಿರೀಕ್ಷಿತ ಹಣಕಾಸಿನ ಆಘಾತಗಳನ್ನು ಮೆಟ್ಟಿನಿಲ್ಲುವ ಆರ್ಥಿಕ ಸಾಮಥ್ರ್ಯವನ್ನು ನೀಡುತ್ತದೆ. ಒಬ್ಬ ಸರ್ಕಾರಿ ನೌಕರನಿಗಿಂತ, ತಮಗೇನು ಬೇಕು ಎಂಬುದನ್ನು ಜನರು ಉತ್ತಮವಾಗಿ ನಿರ್ಧರಿಸುತ್ತಾರೆ ಮತ್ತು ಅವರು ತಮ್ಮ ಸ್ವಂತ ಹಣವನ್ನು ಹೆಚ್ಚಿನ ಉತ್ಪಾದಕತೆಗಾಗಿ ವಿನಿಯೋಗಿಸಬಲ್ಲರು.

ಸರ್ಕಾರದ ತ್ಯಾಜ್ಯ ಮತ್ತು ದುರ್ಬಲತೆಯನ್ನು ಕಡಿಮೆಮಾಡಿ , ಯಾವುದೇ ಲಾಭ ಬಾರದ ಸರ್ಕಾರದ ವ್ಯವಹಾರಗಳನ್ನು ನಿಲ್ಲಿಸುವುದು ಅಥವಾ ಮಾರಾಟಮಾಡುವುದರಿಂದ ಮತ್ತು ಬಳಕೆಯಾಗದ ಮತ್ತು ಕಡಿಮೆ ಬಳಕೆಯಾಗುವ ಭೂ ಸಂಪನ್ಮೂಲಗಳನ್ನು ನಿಯೋಜಿಸುವುದರಿಂದ ಈ ಹಣವು ಲಭ್ಯವಾಗುತ್ತದೆ. ಸರ್ಕಾರದ ನಿಯಂತ್ರಣದಿಂದ ಆರ್ಥಿಕತೆಯನ್ನು ಮುಕ್ತಗೊಳಿಸುವಲ್ಲಿ ಹೆಚ್ಚಿನ ಉತ್ಪಾದಕತೆ ಕಾರಣವಾಗುತ್ತದೆ. ಭಾರತೀಯರು ಹೆಚ್ಚಿನ ಸಂಪತ್ತನ್ನು ಸೃಷ್ಟಿಸುತ್ತಾರೆ, ಆದ್ದರಿಂದ ಪ್ರತಿಯೊಬ್ಬರಿಗೂ ಹೆಚ್ಚು ಸಂಪತ್ತು ಇರುತ್ತದೆ.

ಧನವಾಪಸಾತಿಗೆ ಸಂಬಂಧಿಸಿದ ನಮ್ಮ ವಿಚಾರಗಳ ಹೆಚ್ಚಿನ ಓದಿಗೆ ಇಲ್ಲಿ ಕ್ಲಿಕ್ಕಿಸಿ

2. ಶೇಕಡಾ 10ಕ್ಕೆ ತೆರಿಗೆ ನಿಗದಿ

ತೆರಿಗೆ ರಹಿತ ಭಾರತ- ಪ್ರಸ್ತುತ ದೇಶದಲ್ಲಿ ಕಾರ್ಪೋರೇಟ್ ಮತ್ತು ಜಿಎಸ್ ಟಿಇ ತೆರಿಗೆಗಳು ಶೇಕಡಾ 10 ಕ್ಕೂ ಹೆಚ್ಚಿವೆ. ಇದು ಸರ್ಕಾರವು ತನ್ನದೇ ಆದಾಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ ಮತ್ತು ಅದರ ಪ್ರಮುಖ ಕಾರ್ಯಗಳು ಕಾರ್ಯ ನಿರ್ವಹಿಸಲಿ ಮತ್ತು ನಿರ್ವಹಿಸದೇ ಇರಲಿ ಸರ್ಕಾರ ಅದರ ಬಗೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಬದಲಾಗಿ ಸರ್ಕಾರವು ತೆರಿಗೆ ರಹಿತವಾಗಬೇಕು ಮತ್ತು ಹೆಚ್ಚು ಹಣವನ್ನು ಜನರಿಗೆ ನೀಡಬೇಕು.

3. ಸಹಸ್ರ ದಿನದೊಳಗೆ ಎಲ್ಲಾ ಆಸ್ತಿಗಳ ದಾಖಲೀಕರಣ

`ದ ಮಿಸ್ಟ್ರಿ ಆಫ್ ಕ್ಯಾಪಿಟಲ್' ಪುಸ್ತಕದಲ್ಲಿ ಹರ್ನಾಂಡೋ ಡಿ ಸೊಟೊ `(ಬಡ) ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಆರನೇ ಐದರಷ್ಟು ಬಡ ಜನರಲ್ಲಿ ವಸ್ತುಗಳು ಇರುತ್ತವೆ. ಆದರೆ ಅದನ್ನು ಅವರ ಆಸ್ತಿ ಎಂದು ತೋರಿಸಲು ಹಾಗು ಅದನ್ನು ಬಂಡವಾಳವಾಗಿ ಮಾರ್ಪಡಿಸಲು ಇರುವ ಯಾವುದೇ ಪ್ರಕ್ರಿಯೆಗಳ ಅರಿವು ಅವರಿಗೆ ಇರುವುದಿಲ್ಲ. ಅವರಿಗೆ ಮನೆಗಳಿರುತ್ತದೆ. ಆದರೆ ಅದಕ್ಕೆ ಆಸ್ತಿಪತ್ರಗಳಿರುವುದಿಲ್ಲ. ಬೆಳೆ ಇರುತ್ತದೆ; ಆದರೆ ಅದಕ್ಕೆ ಹಕ್ಕುಪತ್ರಗಳಿರುವುದಿಲ್ಲ. ವ್ಯವಹಾರಗಳಿರುತ್ತದೆ; ಆದರೆ ಅದಕ್ಕೆ ಸಂಘಟನೆ ಇರುವುದಿಲ್ಲ. ಹೀಗಾಗಿ ಅವರಲ್ಲಿ ಹೆಚ್ಚಿನವರು ಬಂಡವಾಳ ಕೊರತೆಯಿಂದ ಬಳಲುತ್ತಿರುತ್ತಾರೆ, ಇದೇ ರೀತಿ ವ್ಯಾಪಾರ ಸಂಸ್ಥೆಗಳು, ಅವುಗಳ ಆದಾಯ ಮತ್ತು ಸ್ವತ್ತುಗಳು ಸಾಬೀತುಪಡಿಸಬಹುದಾದ ಸಾಮಥ್ರ್ಯಕ್ಕಿಂತಲೂ ಕಡಿಮೆ ಮಟ್ಟದ ಭದ್ರತೆಯನ್ನುನೀಡಿದಾಗ ಅವುಗಳು ಬಂಡವಾಳದ ಕೊರತೆಯಿಂದ ಬಳಲುತ್ತದೆ. ಬಡವರ ಉದ್ಯಮಗಳು ನಿಗಮಗಳ ಹಾಗೆ ಇರುತ್ತವೆ. ಅವುಗಳು ಹೊಸ ಹೂಡಿಕೆಗಾಗಿ ಷೇರುಗಳನ್ನು ಅಥವಾ ಬಾಂಡ್ ಗಳನ್ನು ವಿತರಿಸುವುದಿಲ್ಲ. ಸರಿಯಾದ ಪ್ರಾತಿನಿಧ್ಯವಿಲ್ಲದ ಅವರ ಆಸ್ತಿಗಳು ನಿಷ್ಕ್ರಿಯ ಬಂಡವಾಳಗಳಾಗುತ್ತವೆ.''

ಹೆಚ್ಚಿನ ಜನರ ಬಳಿ ಅವರು ವಾಸಿಸುತ್ತಿರುವ ಮನೆಗಳ ಆಸ್ತಿಪತ್ರಗಳು ಸಮರ್ಪಕವಾಗಿರುವುದಿಲ್ಲ. ಇದು ಸಣ್ಣ ಅಂಗಡಿಗಳಿಗೂ ಅನ್ವಯಿಸುತ್ತದೆ. ಹೀಗಾಗಿ ಅವರು ಜಾಗವನ್ನು ಆಕ್ರಮಿಸಬಹುದಾದರೂ, ಸಾಲ ಪಡೆಯುವ ಸಂದರ್ಭದಲ್ಲಿ ಆ ಆಸ್ತಿಯನ್ನು ಮೂಲಾಧಾರವಾಗಿ ಮಾರ್ಪಾಡು ಮಾಡಲು ಆಗುವುದಿಲ್ಲ. ಹೀಗೆ ಆಧಾರವಾಗಿರುವ ಸ್ವತ್ತು ಮಾಲೀಕರ ಹಣಗಳಿಕೆಯ ಸಾಮಥ್ರ್ಯವನ್ನು ಮಿತಿಗೊಳಿಸುತ್ತದೆ.

ಸಮರ್ಪಕ ಹಕ್ಕುಪತ್ರಗಳ ಕೊರತೆ ಭಾರತದಲ್ಲಿ ಮೊಕ್ಕದ್ದಮೆಗಳಿಗೆ ಮುಖ್ಯ ಕಾರಣವಾಗಿದೆ. ಅವರಲ್ಲಿರುವ ಆಸ್ತಿಯನ್ನು ಮೂಲಾಧಾರಾವಾಗಿಟ್ಟು ಯಾವುದೇ ಉತ್ಪಾದಕ ಕೆಲಸಗಳಿಗೆ ಅದನ್ನು ಉಪಯೋಗಿಸಲು ಸಾಧ್ಯವಿಲ್ಲ ಎಂಬುದೇ ವಿವಾದಕ್ಕೆ ಕಾರಣವಾಗಿರುವ ಅಂಶ. ಭಾರತದಲ್ಲಿ ದೌಜನ್ರ್ಯಕ್ಕೆ ಕಾರಣವಾಗಿರುವ ಮುಖ್ಯ ಅಂಶಗಳಲ್ಲಿ ಭೂಮಿಗೆ ಸಂಬಂಧಿಸಿದ ವಿವಾದಗಳು ಪ್ರಮುಖವಾಗಿವೆ.

ಪ್ರಸ್ತುತ ಲಭ್ಯವಿರುವ ಭೂಮಾಪನ ಹಾಗು ಉಪಗ್ರಹ ತಂತ್ರಜ್ಞಾನವನ್ನು ಮಿಶ್ರಗೊಳಿಸಿ, ಪ್ರತಿ ಆಸ್ತಿಯ ಮ್ಯಾಪಿಂಗ್ ಪ್ರಕ್ರಿಯೆಯನ್ನು ಚುರುಕುಗೊಳಿಸಬಹುದು. ಈ ಮೂಲಕ ಮೂರು ವರ್ಷದ ಅವಧಿ ಯೊಳಗೆ ಭಾರತದಲ್ಲಿರುವ ಎಲ್ಲ ಆಸ್ತಿಗಳಿಗೂ ಸರಿಯಾದ ಆಸ್ತಿಪತ್ರವನ್ನು ನೀಡಲು ಸಾಧ್ಯವಿದೆ.

4. ಉತ್ತಮ ಸರ್ಕಾರಕ್ಕಾಗಿ 1 ಟ್ರಿಲಿಯನ್ ಡಾಲರ್:

ಉತ್ತಮ ಸರ್ಕಾರವೆನಿಸಿಕೊಳ್ಳಲು ಸಾರ್ವಜನಿಕರಿಗೆ ಉತ್ತಮ ಅಂಶಗಳನ್ನು/ ಸೇವೆಗಳನ್ನು ನೀಡಬೇಕಾಗುತ್ತದೆ. ಅದು ಕೇವಲ ಸರ್ಕಾರ ಮಾತ್ರ ಮಾಡಬಹುದಾದ ಕೆಲಸ ಮತ್ತು ಅವು ಸರ್ಕಾರದ ಪ್ರಮುಖ ಕಾರ್ಯಗಳು. ಭಾರತ ಸರ್ಕಾರ ನೂರಾರು ಬೇರೆ ಕೆಲಸಗಳನ್ನು ಮಾಡುತ್ತದೆ ಮತ್ತು ಮೂಲಭೂತ ಅಂಶಗಳೊಂದಿಗೆ ರಾಜಿ ಮಾಡಿಕೊಳ್ಳುತ್ತದೆ. ಅರ್ಥಾತ್:

  • ಅತ್ಯಾಧುನಿಕ ಉಪಕರಣಗಳ ಮೇಲೆ ಹೂಡಿಕೆಯ ಮೂಲಕ ಮಿಲಿಟರಿಯನ್ನು ಬಲಪಡಿಸುವುದು.
  • ಸಮರ್ಥ ಹಾಗು ಉತ್ತಮ ತರಬೇತಿ ಪಡೆದ ವೃತ್ತಿಪರ ಪೋಲಿಸ್ ಪಡೆಯನ್ನು ರೂಪಿಸುವುದು
  • ನ್ಯಾಯಾಂಗ ವ್ಯವಸ್ಥೆಯನ್ನು ಹೆಚ್ಚು ಹೊಣೆಗಾರಿಕೆಯಿಂದ ಹಾಗು ಸಮರ್ಥವಾಗಿ ನಿಭಾಯಿಸುವುದು
  • ನಗರ ಮೂಲಸೌಕರ್ಯಕ್ಕೆ ಹೆಚ್ಚು ಬಂಡವಾಳ ಹೂಡಿಕೆ ಮೂಲಕ ಈಗಿನ ನಗರಗಳನ್ನು ಮೇಲ್ದರ್ಜೆಗೇರಿಸುವುದು ಹಾಗು ಹೊಸ ನಗರಗಳನ್ನು ನಿರ್ಮಿಸುವುದು.
  • ಗ್ರಾಮೀಣ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸುವುದು

5. ಕ್ಲುಪ್ತ ಸಮಯದಲ್ಲಿ ನ್ಯಾಯ

ದಕ್ಷವಾಗಿ ಕಾರ್ಯನಿರ್ವಹಿಸುತ್ತಿರುವ ನ್ಯಾಯ ವ್ಯವಸ್ಥೆ ಸಮೃದ್ಧ ಸಮಾಜದ ಬುನಾದಿ. ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಿಸಲ್ಪಟ್ಟಿದೆ ಎಂದರ್ಥ. ಸರ್ಕಾರವು ತನ್ನ ನಾಗರಿಕರನ್ನು ದಬ್ಬಾಳಿಕೆಯಿಂದ ರಕ್ಷಿಸಬೇಕು ಹಾಗು ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸಬೇಕು

ಇದಕ್ಕೆ ನ್ಯಾಯಾಲಯವು 3-2-1 ಸೂತ್ರವನ್ನು ಅನುಸರಿಸಬೇಕು. ಮೂರು ವರ್ಷಗಳು-ಬಾಕಿ ಇರುವ ಎಲ್ಲಾ ಕೇಸುಗಳನ್ನು ತೆರವುಗೊಳಿಸಲು, 2 ವರ್ಷ- ಹೊಸ ಕೇಸುಗಳಿಗೆ ತೀರ್ಪು ನೀಡಲು ಮತ್ತು 1 ವರ್ಷ ಮನವಿಗಳ ಇತ್ಯರ್ಥಕ್ಕಾಗಿ ಎಂದು ಸಂಕಲ್ಪತೊಡುವುದು.

***

6. ಮುಂದಿನ ದಾರಿ ಯಾವುದು?

In the past 70 years, India’s rulers have become rich, but not its people. It is time to change that. If you share my dream to make India prosperous, join Nayi Disha and me to transform India with a new model of governance and politics. Write to me at rajesh@nayidisha.com

ರಾಜೇಶ್ ಜೈನ್ ಭೇಟಿ ಮಾಡಿ.

We can make India prosperous. The future of over 130 crore Indians depends on what we do today. Let us not waste any more time. Join Nayi Disha.

ಏಷ್ಯಾದ ಡಾಟ್ ಕಾಮ್ ಕ್ರಾಂತಿಯಲ್ಲಿ ತಂತ್ರಜ್ಞಾನದ ಉದ್ಯಮಿ ಹಾಗೂ ಪ್ರವರ್ತಕರಾದವರು ರಾಜೇಶ್. ಇವರು 1990ರಲ್ಲಿ ಭಾರತದ ಮೊದಲ ಇಂಟರ್‍ನೆಟ್ ಪೋರ್ಟಲ್ ಅನ್ನು ನಿರ್ಮಿಸಿದವರು. ನಂತರ ಭಾರತದ ಅತಿದೊಡ್ಡ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯನ್ನು ಪ್ರಾರಂಭಿಸಿದರು. ವಾಣಿಜ್ಯೋದ್ಯಮಿಯಾದ ರಾಜೇಶ್ ಪ್ರಭಲ ರಾಷ್ಟ್ರವನ್ನು ನಿರ್ಮಿಸಲಿದ್ದಾರೆ.