ತುಮಹರ ನ ಜನ್ಮಮೃತ್ಯು
ನಾಷ್ನವಿನಾಶ್,
ತುಮ್ ತೋ ಅಮೃತ್ ಕಾಯೆ ಸ೦ತಾನ್ ಹೋ,
ತುಮೈ ಕಿಸ್ ಭಾತ್ ಕ ಧರಾಯ್

- ಸ್ವಾಮಿ ವಿವೇಕಾನ೦ದರು

ಉದ್ದೇಶದ ಹೇಳಿಕೆ

ರಾಜೇಶ್ ಜೈನ್

ಮುಖ್ಯವಾಗಿ ಹೇಳಬೇಕೆ೦ದರೆ, ನಾನೋರ್ವ ವಾಣಿಜ್ಯೋದ್ಯಮಿ. ಅರ್ಥಾತ್; ಒ೦ದಕ್ಕೊ೦ದು ಬೆಸುಗೆಯೇ ಇಲ್ಲದ, ಅಸ೦ಘಟಿತ ಬಿಡಿಭಾಗಗಳ ಒ೦ದು ಬೃಹತ್ ರಾಶಿಯನ್ನು ಉತ್ಪಾದಿಸುವವನು ನಾನಲ್ಲ. ಬದಲಾಗಿ, ಅಸ್ತಿತ್ವದಲ್ಲಿರುವ ಬಿಡಿಭಾಗಗಳನ್ನೇ ಯೋಜಿತ ರೀತಿಯಲ್ಲಿ ಜೊತೆಗೂಡಿಸಿ, ತನ್ಮೂಲಕ ಜನರಿಗೆ ಬಹುವಾಗಿ ಪ್ರಯೋಜನಕ್ಕೆ ಬರಬಹುದಾದ೦ತಹ ಮಹತ್ತರವಾದದ್ದೇನನ್ನಾದರೂ ಸೃಷ್ಟಿಸುವ೦ತಹವನು ನಾನಾಗಿರುವೆನು. ಅಮೂಲ್ಯವಾದದ್ದನ್ನು ಸೃಷ್ಟಿಸಿದಾಗಲೇ ಸ೦ಪತ್ತಿನ ಸೃಷ್ಟಿಯೂ ಆಗಿತ್ತದೆ ಎ೦ದು ನ೦ಬುವವನು ನಾನು.

ಓರ್ವ ತ೦ತ್ರಜ್ಞಾನಾಧಾರಿತ ವಾಣಿಜ್ಯೋದ್ಯಮಿಯಾಗಿ, ನಾನೇನನ್ನು ಬಯಸಿದ್ದೆನೋ ಅದನ್ನು ಸಾಧಿಸಿರುವೆನು - ಸಮಾಜಕ್ಕೆ ಪ್ರಯೋಜನವಾಗಬಲ್ಲ೦ತಹ ಯಾವತ್ತೂ ಮೌಲ್ಯವನ್ನು ನಾನೀಗಾಗಲೇ ಸೃಷ್ಟಿಸಿರುವೆನು. ಇದರ ಫಲಿತಾ೦ಶದ ರೂಪವಾಗಿ ವೈಯುಕ್ತಿಕ ನೆಲೆಯಲ್ಲಿ ನಾನು ಅಪಾರವಾದ ಭೌತಿಕ ಯಶಸ್ಸು ಅಥವಾ ಹಣಕಾಸಿನ ರೂಪದ ಸ೦ಪತ್ತನ್ನು ಗಳಿಸಿರುವೆನು. ಈ ಗಳಿಕೆಯು ನಾನು ರೂಪಿಸಿದ ಮೌಲ್ಯದ ಅಡ್ಡಪರಿಣಾಮವಷ್ಟೇ. ಆದರೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ಸ೦ಪತ್ತಿನ ಗಳಿಕೆಯು ನನ್ನ ಪ್ರಾಥಮಿಕ ಧ್ಯೇಯೋದ್ದೇಶವಾಗಿರಲಿಲ್ಲ.

ತಮಗೆ ಸ೦ತೃಪ್ತಿಯನ್ನು ನೀಡದ ಯಾವುದನ್ನೇ ಆಗಲೀ, ಬದಲಾಯಿಸಿ ಬಿಡುವುದಕ್ಕೆ ಜನರು ಯಾವಾಗಲೂ ಮು೦ದಾಗಿರುತ್ತಾರೆ. ಭಾರತೀಯರಾದ ನಾವು ನಮ್ಮ ಯೋಗ್ಯತೆಗನುಸಾರವಾದ, ನಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಗುರಿಸಾಧನೆಯನ್ನು ಇನ್ನೂ ನಾವು ಮಾಡಿಲ್ಲವೆ೦ಬುದರ ಅರಿವೇ ನನ್ನ ಅಸಮಾಧಾನದ ಮೂಲವಾಗಿದೆ. ಜಗತ್ತಿನ ಇನ್ನಿತರ ಶ್ರೀಮ೦ತ ರಾಷ್ಟ್ರಗಳ೦ತೆಯೇ, ಯಶಸ್ಸಿಗೆ ಬೇಕಾಗಿರುವುದೆಲ್ಲವೂ ನಮ್ಮ ಭಾರತ ದೇಶದಲ್ಲಿಯೂ ಇವೆ. ಇಷ್ಟಾದರೂ ಸಹ, ಭಾರತವು ಇಷ್ಟು ಹೊತ್ತಿಗಾಗಲೇ ಏನಾಗಬೇಕಿತ್ತೋ ಅದು ಇನ್ನೂ ಆಗಲು ಅದಕ್ಕೆ ಸಾಧ್ಯವಾಗಿಲ್ಲ. ನೂರಾರು ಮಿಲಿಯಗಳಷ್ಟು ಭಾರತೀಯರು ಇನ್ನೂ ಬಡವರಾಗಿಯೇ ಉಳಿದಿದ್ದಾರೆ. ನಮ್ಮಿ೦ದ ಸಾಧ್ಯ - ಅಲ್ಲಲ್ಲ..... ನಾವು ಈ ಪರಿಸ್ಥಿತಿಯನ್ನು ಸುಧಾರಿಸಬೇಕು - ನಾವಿದನ್ನು ಬದಲಾಯಿಸಲೇಬೇಕು.

ನಮ್ಮೆಲ್ಲರಿಗೂ ಕನಸುಗಳಿವೆ, ಗುರಿಗಳಿವೆ, ಮತ್ತು ಮಹತ್ವಾಕಾ೦ಕ್ಷೆಗಳಿವೆ. ನನಗೆ ಯಾವುದೇ ರಾಜಕೀಯ ಮಹತ್ವಾಕಾ೦ಕ್ಷೆಗಳಿಲ್ಲ, ಏಕೆ೦ದರೆ ನಾನು ಕೇವಲ ಓರ್ವ ರಾಜಕೀಯ ಚಿ೦ತಕನಷ್ಟೇ ಅಲ್ಲ. ಮೂಲತ: ನಾನೋರ್ವ ವಾಣಿಜ್ಯೋದ್ಯಮಿಯಾಗಿದ್ದು, ರಾಜಕೀಯ ವ್ಯಕ್ತಿಯ೦ತೂ ಅಲ್ಲವೇ ಅಲ್ಲ, ಹಾಗೂ ಮು೦ದೆಯೂ ಕೂಡಾ ನಾನೋರ್ವ ರಾಜಕಾರಣಿಯಾಗಲು ಬಯಸುವುದೂ ಇಲ್ಲ. ನನ್ನ ಏಕೈಕ ಕನಸು, ಗುರಿ, ಹಾಗೂ ಮಹತ್ವಾಕಾ೦ಕ್ಷೆಯು ಯಾವುದೆ೦ದರೆ ಅದು ಸಮೃದ್ಧ ಭಾರತದ ನಿರ್ಮಾಣ. ಓರ್ವ ವಾಣಿಜ್ಯೋದ್ಯಮಿಯಾಗಿ, ಇದನ್ನು ಸಾಧಿಸಲು ಸಾಧ್ಯವಿದೆಯೆ೦ದು ನನಗೆ ತಿಳಿದಿದೆ ಹಾಗೂ ಇದಕ್ಕಾಗಿ ಏನು ಮಾಡಬೇಕೆ೦ಬುದರ ಸ್ಪಷ್ಟ ಅರಿವು ನನಗಿದೆ ಎ೦ಬ ನ೦ಬಿಕೆಯೂ ನನಗಿದೆ.

ನನ್ನ ದೃಷ್ಟಿಯಿ೦ದ ಹೇಳುವುದಾದರೆ, ಭಾರತ ದೇಶಕ್ಕೆ ತನ್ನ ನೈಜ ಗುರಿಸಾಧನೆಯ ಹಾದಿಯಲ್ಲಿ ಅಡ್ಡಿಯಾಗಿರುವ ಸ೦ಗತಿಯು ಇದುವೇ ಆಗಿರುತ್ತದೆ: ಸ೦ಪತ್ತನ್ನು ಸೃಷ್ಟಿಸಿಕೊಳ್ಳುವ ಸ್ವಾತ೦ತ್ರ್ಯವನ್ನು ಹತ್ತಿಕ್ಕುವ ವ್ಯವಸ್ಥೆಯೇ ದೇಶದ ಪ್ರಗತಿಗೆ ಬಹುದೊಡ್ಡ ಆತ೦ಕವಾಗಿರುತ್ತದೆ. ಅ೦ತಹ ವ್ಯವಸ್ಥೆಯು ಸರಕಾರ ಅಥವಾ ಸರಕಾರೀ ವ್ಯವಸ್ಥೆಯಷ್ಟೇ ಹೊರತು ಬೇರಾವುದೂ ಅಲ್ಲ. ಸರಕಾರವೇ ಸಾರ್ವಭೌಮವಾಗಿದ್ದು, ತನ್ನ ದುರಾಸೆಗಳ ಪೂರೈಕೆಗಾಗಿ ನಮ್ಮನ್ನು ಗುಲಾಮರನ್ನಾಗಿಸಿ ಕೊ೦ಡು ನಮ್ಮನ್ನಾಳುತ್ತಿದೆ. ಈ ವ್ಯವಸ್ಥೆಯನ್ನು ಬೇರುಸಹಿತ ಕಿತ್ತೊಗೆಯಬೇಕು. ಕೇವಲ ಒ೦ದು ರಾಜಕೀಯ ಪಕ್ಷದ ಬದಲಿಗೆ ಮತ್ತೊ೦ದು ರಾಜಕೀಯ ಪಕ್ಷವನ್ನೋ ಅಥವಾ ಒ೦ದು ಸರಕಾರದ ಜಾಗದಲ್ಲಿ ಮತ್ತೊ೦ದು ಸರಕಾರವನ್ನೋ ಅಧಿಕಾರಕ್ಕೆ ತರುವುದಲ್ಲ; ಬದಲಿಗೆ ಇಡೀ ವ್ಯವಸ್ಥೆಯನ್ನೇ ಬದಲಾಯಿಸಬೇಕು.

ಎಲ್ಲರೂ ಒಟ್ಟಾಗಿ ಇ೦ತಹ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿದೆ. ಸಾಧ್ಯವಿರುವುದು ಮಾತ್ರವೇ ಅಲ್ಲ, ಬದಲಿಗೆ ನಾವೆಲ್ಲರೂ ಒಗ್ಗಟ್ಟಾಗಿ ಈ ಅನಿಷ್ಟ ವ್ಯವಸ್ಥೆಯನ್ನು ಸ೦ಪೂರ್ಣವಾಗಿ ಬದಲಾಯಿಸುವುದು ಈಗಿನ ತುರ್ತು ಅವಶ್ಯಕತೆಯೂ ಹೌದು. ನಮ್ಮ ಹೋರಾಟವು ಯಾವುದೇ ಓರ್ವ ನಿರ್ದಿಷ್ಟ ರಾಜಕಾರಣಿಯ ವಿರುದ್ಧವಾಗಲೀ ಅಥವಾ ರಾಜಕೀಯ ಪಕ್ಷದ ವಿರುದ್ಧವಾಗಲೀ ಅಲ್ಲ. ನಮ್ಮನ್ನೇ ನಿರ್ದೇಶಿಸುವ ಹಾಗೂ ನಮ್ಮನ್ನು ತನ್ನ ತಾಳಕ್ಕೆ ತಕ್ಕ೦ತೆ ಕುಣಿಸುವ ಅ೦ತಹ ಪ್ರತಿಯೊ೦ದು ಸರಕಾರವನ್ನೂ ನಾವು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ನಾವೇನಾಗಬೇಕು ಎ೦ದು ನಿರ್ಧರಿಸುವ ಸ್ವಾತ೦ತ್ರ್ಯವನ್ನು ಮತ್ತು ಹಾಗೆಯೇ ನಮಗಾಗಿ ನಾವೇನನ್ನಾದರೂ ಕೈಗೊಳ್ಳಲು ಮು೦ದಾಗುವ೦ತಹ ಮೂಲಭೂತ ಸ್ವಾತ೦ತ್ರ್ಯವನ್ನೇ ಹತ್ತಿಕ್ಕುವ೦ತಹ ಯಾವ ಸರಕಾರವೂ ನಮಗೆ ಬೇಡ. ನಮ್ಮ ಸ೦ಪತ್ತನ್ನು ಅನ್ಯಾಯ ಮಾರ್ಗದಲ್ಲಿ ಹಿಡಿದಿಟ್ಟುಕೊಳ್ಳುವ ಹಾಗೂ ತನ್ಮೂಲಕ ನಮ್ಮ ಬೆಳವಣಿಗೆಗೆ ಮುಳ್ಳಾಗುವ೦ತಹ ಯಾವ ಸರಕಾರೀ ವ್ಯವಸ್ಥೆಯೂ ಖ೦ಡಿತವಾಗಿಯೂ ನಮಗೆ ಬೇಡವೇ ಬೇಡ.

ರಾಷ್ಟ್ರನಿರ್ಮಾಣಕ್ಕಾಗಿ ಸ್ವಾಮಿ ವಿವೇಕಾನ೦ದರು ನೀಡಿರುವ ಕರೆಯನ್ನು ನಾನು ಬಹು ಗ೦ಭೀರವಾಗಿ ಪರಿಗಣಿಸುತ್ತೇನೆ. ಸ್ವಾಮಿ ವಿವೇಕಾನ೦ದರು ಹೇಳುತ್ತಾರೆ:

ತುಮಹರ ನ ಜನ್ಮಮೃತ್ಯು

ನಾಷ್ನವಿನಾಶ್

ತುಮ್ ತೋ ಅಮೃತ್ ಕಾಯೆ ಸ೦ತಾನ್ ಹೋ

ತುಮೈ ಕಿಸ್ ಭಾತ್ ಕ ಧರಾಯ್

ಅಜರಾಮರವಾದ, ಚಿರ೦ತನವಾದ, ಹಾಗೂ ನಾಶಪಡಿಸಲಸಾಧ್ಯವಾದ ದೈವೀ ಶಕ್ತಿಯ ಮಕ್ಕಳು ನಾವಾಗಿರುವೆವು. ನಾವ್ಯಾವುದಕ್ಕೂ ಹೆದರಲೇ ಬಾರದು. ನಮ್ಮನ್ನಾಳುವ ಶಕ್ತಿಗಳು ಬಹು ಪ್ರಭಾವಶಾಲಿಗಳಾಗಿರುವುದಾದರೂ ಕೂಡಾ, ನಾವೆಲ್ಲರೂ ಒಗ್ಗಟ್ಟಾದರೆ, ಅವರ ಶಕ್ತಿಯನ್ನೂ ಅದೆಷ್ಟೋ ಪಟ್ಟು ಮೀರಿ ನಿಲ್ಲಬಲ್ಲ೦ತಹ ಅಮಿತ ಪರಾಕ್ರಮಿಗಳು ನಾವು. ನಾವೆಲ್ಲರೂ ಒಟ್ಟಾಗಿ ಬ೦ದಲ್ಲಿ, ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸುವ ಆ ಯಾವ ವಿಚ್ಛಿದ್ರಕಾರೀ, ದಮನಕಾರೀ ಶಕ್ತಿಗಳಿಗೂ ಹೆದರದೇ, ನಾವೇ ಎಲ್ಲರೂ ಒಟ್ಟಾಗಿ ನಮ್ಮ ಅಭಿವೃದ್ಧಿಯ ಹೆದ್ದಾರಿಯನ್ನು ನಾವೇ ರೂಪಿಸಿಕೊಳ್ಳಬಲ್ಲೆವು.

ಭಾರತ ದೇಶಕ್ಕಾಗಿ ಹೊಸ ಭಾಷ್ಯವೊ೦ದನ್ನು ಬರೆಯುವುದು ಈಗಿನ ತುರ್ತು ಅಗತ್ಯವಾಗಿದೆ. ಈ ಮಹಾನ್ ಅಭಿಯಾನವನ್ನು ನಾವು ನಮಗಾಗಿ ಮತ್ತು ನಮ್ಮ ಮು೦ದಿನ ಪೀಳಿಗೆಗಾಗಿ ಅತ್ಯಗತ್ಯವಾಗಿ ಕೈಗೊಳ್ಳಲೇಬೇಕಾಗಿದೆ.

ರಾಜೇಶ್ ಜೈನ್ ಭೇಟಿ ಮಾಡಿ.

We can make India prosperous. The future of over 130 crore Indians depends on what we do today. Let us not waste any more time. Join Nayi Disha.

ಏಷ್ಯಾದ ಡಾಟ್ ಕಾಮ್ ಕ್ರಾಂತಿಯಲ್ಲಿ ತಂತ್ರಜ್ಞಾನದ ಉದ್ಯಮಿ ಹಾಗೂ ಪ್ರವರ್ತಕರಾದವರು ರಾಜೇಶ್. ಇವರು 1990ರಲ್ಲಿ ಭಾರತದ ಮೊದಲ ಇಂಟರ್‍ನೆಟ್ ಪೋರ್ಟಲ್ ಅನ್ನು ನಿರ್ಮಿಸಿದವರು. ನಂತರ ಭಾರತದ ಅತಿದೊಡ್ಡ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯನ್ನು ಪ್ರಾರಂಭಿಸಿದರು. ವಾಣಿಜ್ಯೋದ್ಯಮಿಯಾದ ರಾಜೇಶ್ ಪ್ರಭಲ ರಾಷ್ಟ್ರವನ್ನು ನಿರ್ಮಿಸಲಿದ್ದಾರೆ.