ನನ್ನ ರಾಜಕೀಯ ಪಯಣ ಮುಂದುವರಿಯಿತು…

2011ರಲ್ಲಿ ನಾನು “ಪ್ರಾಜೆಕ್ಟ್ 275 ಫಾರ್ 2014” ಎಂಬ ಒಂದು ಬ್ಲಾಗ್ ಬರೆದಿದ್ದೆ. ಮುಂದಿನ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ತನ್ನದೇ ಆದ ಬಹುಮತವನ್ನು ಪಡೆಯಲು ಏನು ಮಾಡಬೇಕು? ಎನ್ನುವ ವಿಚಾರದ ಕುರಿತು ಮೂರು ವರ್ಷಕ್ಕೂ ಮುಂಚಿತವಾಗಿಯೇ ಬ್ಲಾಗ್‍ನಲ್ಲಿ ಬರೆದಿದ್ದೆ. ಬಿಜೆಪಿ 175-180 ಸ್ಥಾನದಲ್ಲಿ ಬಹುಮತ ಪಡೆಯುವ ನಿರೀಕ್ಷೆ ಹೊಂದಿತ್ತು. ಅದಕ್ಕೂ ಮೀರಿದ(275) ಬಹುಮತವನ್ನು ಪಡೆಯಬೇಕು ಎನ್ನುವ ವಿಭಿನ್ನ ಆಲೋಚನೆಯನ್ನು ಹೊಂದಿದ ಮೊದಲ ವ್ಯಕ್ತಿ ನಾನಾಗಿದ್ದೆ. ಸಮೃದ್ಧ ಭಾರತದ ಬದಲಾವಣೆಗೆ ಅವಕಾಶವಿರುವುದರಿಂದ ನಾನು ನನ್ನ ಸಮಯ ಹಾಗೂ ಹಣವನ್ನು ಹೂಡಲು ನಿರ್ಧರಿಸಿದೆ

2012ರ ಆರಂಭದಲ್ಲಿ ನಾನು ಭಾರತವನ್ನು ಪರಿವರ್ತಿಸಲು “ನಿತಿ”ಯನ್ನು ( Niti – New Initiatives to Transform India)ರಚಿಸಿದೆ. ಹೊಸ ಉಪಕ್ರಮದಲ್ಲಿ ರಚಿಸಿದ ನಿತಿ ಡಿಜಿಟಲ್ ಮಾಧ್ಯಮ, ಡೇಟಾ, ವಿಶ್ಲೇಷಣೆ ಮತ್ತು ಸ್ವಯಂ ಸೇವಕರ ವೇದಿಕೆಯಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ನೆರವಾದ ಅನೇಕ ಉಪಕ್ರಮಗಳಲ್ಲಿ ಇದು ಒಂದಾಗಿದೆ. ಮೋದಿಯ ಹೊಸ ಸರ್ಕಾರ ಬಂದ ಮೇಲೆ ನಾನು ನನ್ನ ಉದ್ಯಮಕ್ಕೆ ಹಿಂತಿರುಗಬೇಕು ಎಂದು ನಿರ್ಧರಿಸಿದ್ದೆ. ನಾನು ಮತ್ತು ನನ್ನೊಂದಿಗೆ ಇದ್ದ ಅನೇಕ ವಿಮರ್ಷಕರು ಮೋದಿಯ ಹೊಸ ಸರ್ಕಾರ ಜವಾಬ್ದಾರಿಯುತ ಆಡಳಿತದ ಮೂಲಕ, ಭಾರತದ ಸ್ಥಿತಿಯು ಬದಲಾಗುತ್ತದೆ ಮತ್ತು ಸಮೃದ್ಧಿಯ ಪಥದಲ್ಲಿ ಸಾಗುತ್ತದೆ ಎನ್ನುವ ಭರವಸೆಯನ್ನು ಹೊಂದಿದ್ದೆವು.

ಮೂರು ವರ್ಷಗಳ ಹಿಂದೆ ನಾನು ನಿರೀಕ್ಷಿಸಿದಂತೆ 2014 ಮೇ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿತು. ಅದು 30 ವರ್ಷಗಳ ನಂತರ ಏಕೈಕ ಪಕ್ಷವು ತನ್ನದೇ ಆದ ಬಹುಮತವನ್ನು ಪಡೆದುಕೊಂಡಿತ್ತು. ಮೋದಿ ಪ್ರಧಾನಿಯಾಗುವುದರ ಮೂಲಕ ನಿತಿ ರಚನೆಯು ಯಶಸ್ವಿಯಾಯಿತು. ಹಾಗೆಯೇ ನಾನು ನನ್ನ ತಾಂತ್ರಿಕ ಉದ್ಯಮಕ್ಕೆ ಮರಳಿದೆ.

ಹೊಸ ಸರ್ಕಾರದ ಆಡಳಿತದ ಆರಂಭದ ದಿನಗಳು ಬಹಳ ನಿಧಾನಗತಿಯ ಆರಂಭವನ್ನು ಕಂಡಿತ್ತು. ಈ ನಿಧಾನ ಗತಿಯ ವೇಗವು ನನ್ನಲ್ಲಿ “ಭಾರತದ ಸಮೃದ್ಧಿಯ ವೇಗಕ್ಕೆ ಏನು ಮಾಡಬೇಕು?”ಎನ್ನುವ ಚಿಂತನೆಯನ್ನು ಮೂಡಿಸಿತು. ಭಾರತದ ಸಮೃದ್ಧಿ ಹಾಗೂ ಸ್ವಾತಂತ್ರ್ಯದ ಪ್ರಾಮುಖ್ಯತೆಯ ಕುರಿತು ಮತ್ತು ನಾನು ಮೊದಲ ಬಾರಿಗೆ ಪರಿಚಯಿಸಿದ ನಿತಿ ಡಿಜಿಟಲ್ ಕುರಿತಾಗಿ ಅರ್ಥಶಾಸ್ತ್ರಜ್ಞರಾದ ಅತನು ದೇಯ್ ಅವರಲ್ಲಿ ವಿಮರ್ಷೆ ಕೈಗೊಂಡು, ನಂತರ “ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ” ಎನ್ನುವ ಶೀರ್ಷಿಕೆಯೊಂದಿಗೆ ಪುಸ್ತಕವೊಂದನ್ನು ಬರೆಯಲಾಯಿತು. ನಿತಿ ಡಿಜಿಟಲ್ ಮತ್ತು 2014ರ ಚುನಾವಣೆಯಿಂದ ಭಾರತವು ಸಮೃದ್ಧ ರಾಷ್ಟ್ರವಾಗಬೇಕು ಎನ್ನುವ ಆಸೆ ನನ್ನದಾಗಿತ್ತು.

ವಿಭಿನ್ನ ಪ್ರಯಾಣವನ್ನು ಆರಂಭಿಸಿದ್ದರು: ನಂತರದ ದಿನಗಳಲ್ಲಿ “ಭಾರತ ಏಕೆ ಇನ್ನೂ ಬಡತನದಿಂದ ಕೂಡಿದೆ? ಇತರ ರಾಷ್ಟ್ರಗಳು ಹೇಗೆ ಸಮೃದ್ಧಿಯನ್ನು ಹೊಂದಿವೆ? ಅಭಿವೃದ್ಧಿ ಹೊಂದಲು ನಮ್ಮ ರಾಷ್ಟ್ರದಲ್ಲಿ ಯಾವ ಬದಲಾವಣೆ ಮಾಡಬೇಕು?” ಎನ್ನುವಂತಹ ವಿಚಾರಗಳ ಕುರಿತು ಅನೇಕ ಅರ್ಥಶಾಸ್ತ್ರಜ್ಞರೊಂದಿಗೆ ಚರ್ಚೆ ಹಾಗೂ ಸಾರ್ವಜನಿಕರ ಆಯ್ಕೆಯ ವಿಷಯದ ಕುರಿತು ಅನೇಕ ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಅದರೊಟ್ಟಿಗೆ ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದ ಸೂಕ್ತವಾದ ಪುಸ್ತಕ ಓದಲು ಪ್ರಾರಂಭಿಸಿದೆ.